ETV Bharat / health

ಈ ರೂಲ್ಸ್ ಪ್ರಕಾರ ವಾಕಿಂಗ್ ಮಾಡಿದರೆ ಹೃದಯದ ಸಮಸ್ಯೆಗಳು ದೂರ: ಸಂಶೋಧನೆ - 666 RULE FOR WALKING

6-6-6 Walking Rule: ದೈಹಿಕವಾಗಿ ಸಕ್ರಿಯವಾಗಿರದೆ ಇರುವ ಜನರಲ್ಲಿ ಭವಿಷ್ಯದ ಹೃದಯ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಪ್ರತಿದಿನ 6-6-6 ನಿಯಮದ ಪ್ರಕಾರ ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ.

WALKING RESEARCH METHODS  BENEFITS OF WALKING RESEARCH  BENEFITS OF WALKING 10000 STEPS  WALKING BENEFITS FOR HEALTH
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 20, 2024, 8:03 PM IST

6-6-6 Walking Rule: ದೈಹಿಕವಾಗಿ ಸಕ್ರಿಯವಾಗಿರದೆ ಇರುವ ಜನರಲ್ಲಿ ಭವಿಷ್ಯದ ಹೃದಯ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಪ್ರತಿದಿನ 6-6-6 ನಿಯಮದ ಪ್ರಕಾರ ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ. ವಾಕಿಂಗ್ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು ಎಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸಿವೆ. ಪೋಲಿಷ್ ವೈದ್ಯಕೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಶ್ವದಾದ್ಯಂತ ಸಾವಿರಾರು ಜನರ ಮೇಲೆ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇದೇ ವಿಷಯವು ಮತ್ತೊಮ್ಮೆ ಬಹಿರಂಗವಾಗಿದೆ. ಇದರ ಜೊತೆಗೆ ಇನ್ನೂ ಹಲವು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.

ಸಂಶೋಧನೆ ಏನು ಹೇಳುತ್ತೆ?: ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ನಾವು ದೈನಂದಿನ ಚಟುವಟಿಕೆಗಳಿಗೆ ಇನ್ನೂ ಸಾವಿರ ಹೆಜ್ಜೆಗಳನ್ನು ನಡೆದರೂ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವು ಶೇಕಡಾ 15 ರಷ್ಟು ಕಡಿಮೆಯಾಗುತ್ತದೆ. ಹಾಗೆಯೇ ಬೆಳಗ್ಗೆ ಅಥವಾ ಸಂಜೆ 4,000 ಹೆಜ್ಜೆ ನಡೆದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿದಿದೆ. ಆದ್ದರಿಂದ ಸಮಯವಿದ್ದಾಗ ವಾಕಿಂಗ್ ಮಾಡುವುದು ಸೇರಿದಂತೆ ದೈನಂದಿನ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಕಿಂಗ್ ಅಭ್ಯಾಸ ಮಾಡಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗ ಎಂದು ಸಂಶೋಧಕರು ತಿಳಿಸುತ್ತಾರೆ.

6-6-6 ನಿಯಮ ಏನು ತಿಳಿಸುತ್ತೆ? ನಡಿಗೆಯಲ್ಲಿ ಆಸಕ್ತಿ ಇಲ್ಲದವರು ಕೂಡ ಪ್ಲಾನ್ ಮಾಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಪ್ರತಿದಿನ 6-6-6 ನಿಯಮವನ್ನು ಅನುಸರಿಸಿದರೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ 6 ಗಂಟೆಗೆ ಸಮಯವನ್ನು ನಿಗದಿಪಡಿಸಲು ಸೂಚಿಸಲಾಗುತ್ತದೆ. ನಡೆಯುವ ಮೊದಲು 6 ನಿಮಿಷಗಳ ಕಾಲ ವಾರ್ಮ್​ಅಪ್​ ಮಾಡಬೇಕು ಮತ್ತು ನಂತರ ಒಂದು ಗಂಟೆ ನಡೆಯಬೇಕು.

ಇದನ್ನು ಪೂರ್ಣಗೊಳಿಸಿದ ನಂತರ ಇನ್ನೂ 6 ನಿಮಿಷ ವಿಶ್ರಾಂತಿ ಸಾಕು ಎಂದು ಸಂಶೋಧನೆಯಲ್ಲಿ ವಿವರಿಸಲಾಗಿದೆ. ಹೀಗೆ ಮಾಡುವುದರಿಂದ ಹೃದಯ ಬಡಿತವು ಹಿಂದಿನ ಸ್ಥಿತಿಗೆ ಮರಳುತ್ತದೆ. ಈ ನಿಯಮದ ಪ್ರಕಾರ, ಒಂದು ಗಂಟೆಯ ನಡಿಗೆಯನ್ನು ಒಮ್ಮೆಗೆ ಪೂರ್ಣಗೊಳಿಸುವ ಅಗತ್ಯವಿಲ್ಲದಿದ್ದರೆ, ಇದನ್ನು ದಿನಕ್ಕೆ ಎರಡು ಬಾರಿ ಅರ್ಧ ಗಂಟೆಯವರೆಗೆ ವಾಕಿಂಗ್​ ಮಾಡಬಹುದು.

ಪ್ರಯೋಜನಗಳೇನು? ದಿ ಹಾರ್ಟ್ ಫೌಂಡೇಶನ್‌ನ ಸಂಶೋಧಕರ ವರದಿಯ ಪ್ರಕಾರ, ಬೆಳಗ್ಗೆ ವಾಕಿಂಗ್ ಮಾಡುವುದರಿಂದ ಅನೇಕ ಪ್ರಯೋಜನಗಳು ಲಭಿಸುತ್ತವೆ. ಚಯಾಪಚಯ ಕ್ರಿಯೆಯು ಉತ್ತಮವಾಗಿ ನಡೆಯುವುದರಿಂದ ಬೆಳಗ್ಗೆ ತಾಜಾ ಗಾಳಿಯನ್ನು ಉಸಿರಾಡುವುದರಿಂದ ದೇಹದ ಶಕ್ತಿಯು ಹೆಚ್ಚಾಗುತ್ತದೆ. ಮಾನಸಿಕವಾಗಿ ಉತ್ಸುಕತೆಯಿಂದ ದಿನವನ್ನು ಸಂತೋಷದಿಂದ ಆರಂಭಿಸಬಹುದು. ಇಡೀ ದಿನದ ಕೆಲಸದಿಂದ ಒತ್ತಡಕ್ಕೊಳಗಾಗುವ ನಮ್ಮ ಮೆದುಳಿಗೆ ಸಂಜೆ ವಾಕಿಂಗ್ ಮಾಡುವುದರಿಂದ ವಿಶ್ರಾಂತಿ ದೊರೆಯುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಅಪಾಯ!; ಅಂತಹ ಪದಾರ್ಥಗಳಾದರೂ ಯಾವವು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.