ETV Bharat / state

ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ

ದೀಪಾವಳಿ ಹಿನ್ನೆಲೆಯಲ್ಲಿ ಮಾದಪ್ಪನಿಗೆ ಭರಪೂರ ಆದಾಯ ಬಂದಿದೆ. 27 ದಿನಗಳಲ್ಲಿ 2,43,65,775 ರೂ ಸಂಗ್ರಹವಾಗಿದೆ.

Diwali Sadagara- Madappa's income is huge: crores together collected in 27 days
ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ (ETV Bharat)
author img

By ETV Bharat Karnataka Team

Published : 2 hours ago

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ಬುಧವಾರ ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, ಬರೋಬ್ಬರಿ 2.43 ಕೋಟಿ ಹಣ ಸಂಗ್ರಹವಾಗಿದೆ‌.

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಇಂದು ಬೆಳಗ್ಗೆ 6.30 ರಲ್ಲಿ ಆರಂಭಗೊಂಡು ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, 27 ದಿನಗಳಿಗೆ 2,43,65,775
ರೂ.‌ ಸಂಗ್ರಹವಾಗಿದೆ.

Diwali Sadagara- Madappa's income is huge: crores together collected in 27 days
ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ (ETV Bharat)
ಭಕ್ತರು ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದು ಹುಂಡಿಯಲ್ಲಿ 5 ದೇಶಗಳ ಕರೆನ್ಸಿ ಕೂಡ ಪತ್ತೆಯಾಗಿದೆ. ದೀಪಾವಳಿ ಜಾತ್ರೆ ಹಿನ್ನೆಲೆ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು‌. ಈ ಹಿನ್ನೆಲೆ ಕೇವಲ 27 ದಿನಗಳಿಗೆ 2.4 ಕೋಟಿ ಹಣ ಸಂಗ್ರಹವಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹುಂಡಿ ಹಣದ ಮಾಹಿತಿಯನ್ನು ಪ್ರಕಟಣೆ ಮೂಲಕ ನೀಡಿದ್ದಾರೆ.

ಇದನ್ನು ಓದಿ: ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಯಕೃತ್​ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.