ETV Bharat / state

ಚನ್ನಪಟ್ಟಣ, ಶಿಗ್ಗಾಂವಿ ಎನ್​ಡಿಎ ಮೈತ್ರಿಗೆ, ಸಂಡೂರು ಕಾಂಗ್ರೆಸ್​ಗೆ: ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ

ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶಕ್ಕೆ ಮೂರೇ ದಿನಗಳು ಬಾಕಿ ಇದ್ದು, ಮತದಾನೋತ್ತರ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧವಾಗಿ ಬಂದಿದೆ.

ಮತದಾನೋತ್ತರ ಸಮೀಕ್ಷೆ ಭವಿಷ್ಯ
ಮತದಾನೋತ್ತರ ಸಮೀಕ್ಷೆ ಭವಿಷ್ಯ (ETV Bharat)
author img

By ETV Bharat Karnataka Team

Published : 2 hours ago

Updated : 2 hours ago

ಬೆಂಗಳೂರು: ಮಹಾರಾಷ್ಟ್ರ, ಜಾರ್ಖಂಡ್​ ವಿಧಾನಸಭೆ ಚುನಾವಣೆಯ ಜೊತೆಗೆ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಬುಧವಾರ ಪ್ರಕಟವಾದ P- Marq ಮತದಾನೋತ್ತರ ಸಮೀಕ್ಷೆಯ ಪ್ರಕಾರ ಎನ್​ಡಿಎ ಕೂಟ ಮುನ್ನಡೆ ಸಾಧಿಸಿದ್ದಾಗಿ ಹೇಳಿವೆ. ನವೆಂಬರ್​ 23 ರಂದು ನಿಖರ ಫಲಿತಾಂಶ ಹೊರಬೀಳಲಿದೆ.

ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿಯ ಶಿಗ್ಗಾಂವಿ, ಬಳ್ಳಾರಿಯ ಸಂಡೂರು ಕ್ಷೇತ್ರದ ಉಪಚುನಾವಣೆಗೆ ನವೆಂಬರ್​ 13 ರಂದು ಮತದಾನವಾಗಿತ್ತು. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್​ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎನ್​ಡಿಎ ಕೂಟದ ಮಿತ್ರ ಪಕ್ಷಗಳಾದ ಜೆಡಿಎಸ್​ ಮತ್ತು ಬಿಜೆಪಿಯು ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿವೆ.

ಪಿ-ಮಾರ್ಕ್​ ಎಂಬ ಸಂಸ್ಥೆಯ ಪ್ರಕಾರ, ಕರ್ನಾಟಕದ ಮೂರು ಸ್ಥಾನಗಳಲ್ಲಿ ಎನ್​ಡಿಎ 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಜೆಡಿಎಸ್​ ಮತ್ತು ಬಿಜೆಪಿ ಕಮಾಲ್​ ಮಾಡಲಿವೆ. ಸಂಡೂರು ಕ್ಷೇತ್ರ ಯಥಾವತ್ತಾಗಿ ಕಾಂಗ್ರೆಸ್​ ಪಾಲಾಗಲಿದೆ ಎಂದು ಭವಿಷ್ಯ ನುಡಿದಿದೆ.

ಕಠಿಣ ಪೈಪೋಟಿ: ಜೆಡಿಎಸ್​​ ಪಕ್ಷವು ಚನ್ನಪಟ್ಟಣವನ್ನು ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿತ್ತು. ಇತ್ತ ಕಾಂಗ್ರೆಸ್​ ಕೂಡ ಗೆಲ್ಲಲೇಬೇಕೆಂದು ತೀವ್ರ ಪೈಪೋಟಿ ಒಡ್ಡಿದೆ. ಜೆಡಿಎಸ್​​ನಿಂದ ನಿಖಿಲ್​ ಕುಮಾರಸ್ವಾಮಿ ಅವರು ಕಣಕ್ಕಿಳಿದರೆ, ಕಾಂಗ್ರೆಸ್​​ನಿಂದ ಸಿ.ಪಿ.ಯೋಗೇಶ್ವರ್​​ ಅಭ್ಯರ್ಥಿಯಾಗಿದ್ದಾರೆ. ಪ್ರಚಾರದ ವೇಳೆ ಭಾರೀ ವಾಕ್ಸಮರ ಉಂಟಾಗಿದ್ದು, ಕೆಲ ವಿವಾದಗಳು ಎದ್ದಿವೆ.

ಇತ್ತ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಅವರಿಂದ ತೆರವಾಗಿದ್ದ ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ ಎಂದು ಹೇಳಲಾಗಿದೆ. ಬೊಮ್ಮಾಯಿ ಅವರ ಪುತ್ರ ಭರತ್​ ಬೊಮ್ಮಾಯಿ ಕಣದಲ್ಲಿದ್ದರೆ, ಕಾಂಗ್ರೆಸ್​ನಿಂದ ಯಾಸಿರ್​ ಅಹ್ಮದ್​ ಖಾನ್​ ಪಠಾಣ್​​ ಸ್ಪರ್ಧೆ ಒಡ್ಡಿದ್ದಾರೆ. ಕಾಂಗ್ರೆಸ್​​ನಲ್ಲಿ ಭಿನ್ನಮತ ಉಂಟಾಗಿ ಮಾಜಿ ಶಾಸಕ ಅಜ್ಜಂಪೀರ್​ ಖಾದ್ರಿ ಅವರು ಕೊನೆಯಲ್ಲಿ ನಾಮಪತ್ರ ಸಲ್ಲಿಸಿ ಮತ್ತೆ ವಾಪಸ್​ ಪಡೆದಿದ್ದರು. ಇದು ಚುನಾವಣೆಯಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಫಲಿತಾಂಶದ ಬಳಿಕ ತಿಳಿಯಲಿದೆ.

ಇನ್ನೂ, ಕಾಂಗ್ರೆಸ್​ನ ಕ್ಷೇತ್ರವಾದ ಸಂಡೂರಿನಲ್ಲಿ ಗೆಲ್ಲುವ ವಿಶ್ವಾಸ ಆ ಪಕ್ಷಕ್ಕಿದೆ. ಅನ್ನಪೂರ್ಣ ತುಕಾರಾಂ ಅವರಿಗೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಸವಾಲು ಒಡ್ಡಿದ್ದಾರೆ. ಜಿದ್ದಾಜಿದ್ದಿನಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎಂಬುದು ಇನ್ನು ಮೂರು ದಿನಗಳಲ್ಲಿ ಬಯಲಾಗಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಎಕ್ಸಿಟ್ ಪೋಲ್: ಮಹಾಯುತಿ ಮೈತ್ರಿಯತ್ತ ಜನರ ಒಲವು, ಜಾರ್ಖಂಡ್​​​ನಲ್ಲೂ ಬಿಜೆಪಿ ಮುನ್ನಡೆ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.