ವಾರ್ದಾ(ಮಹಾರಾಷ್ಟ್ರ):ಪ್ರಧಾನಿ ಮೋದಿ ಶುಕ್ರವಾರ ಫಲಾನುಭವಿಗಳಿಗೆ 'ಪ್ರಧಾನಿ ವಿಶ್ವಕರ್ಮ' ಯೋಜನೆ ಅಡಿ ಸಾಲ ವಿತರಿಸಿದರು. ಅವರು ಅಮರಾವತಿಯಲ್ಲಿ 'ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪರೆಲ್ (ಪಿಎಂ ಮಿತ್ರ) ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಮೋದಿ, ‘ಈ ಯೋಜನೆ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳು ಒಗ್ಗೂಡಿ ಈ ವರ್ಷ 20 ಲಕ್ಷಕ್ಕೂ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. 8 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 60 ಸಾವಿರ ಜನರಿಗೆ ಒಂದು ವರ್ಷದಲ್ಲಿ 3 ಲಕ್ಷದವರೆಗೆ ಹೊಸ ತಂತ್ರಜ್ಞಾನ ಕಲಿಸಲಾಗುತ್ತಿದೆ ಎಂದರು.
ಮೋದಿ ಭರವಸೆ:‘ಹಿಂದಿನ ಸರ್ಕಾರ (ಅಘಾಡಿ) ವಿಶ್ವಕರ್ಮ ಬಂಧುಗಳ ಬಗ್ಗೆ ಚಿಂತಿಸಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಎಸ್.ಟಿ., ಎಸ್.ಸಿ. ಮತ್ತು ಹಿಂದುಳಿದ ವರ್ಗದ ಸಮುದಾಯಗಳು ವಿಶ್ವಕರ್ಮ ಕುಶಲಕರ್ಮಿಗಳಾಗಬೇಕು, ಅವರಿಗೆ 'ಎಂಎಸ್‌ಎಂಇ' ಸ್ಥಾನಮಾನ ನೀಡಬೇಕು ಮತ್ತು ಈ ಯೋಜನೆಗೆ ಸ್ಕಿಲ್ ಇಂಡಿಯಾ ಮಿಷನ್ ಸಹಾಯ ಮಾಡುತ್ತಿದೆ ಎಂದು ಭರವಸೆ ನೀಡಿದರು.
ವಾರ್ದಾದ ಜವಳಿ ಕ್ಷೇತ್ರದ ಕೈಗಾರಿಕೆಗಳು ಮತ್ತೊಮ್ಮೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿವೆ. ಈ ಹಿಂದೆ ಸರ್ಕಾರವು ವಿಶ್ವಕರ್ಮ ಕಾರ್ಮಿಕರನ್ನು ಕಡೆಗಣಿಸಿದೆ. ವಿಶ್ವಕರ್ಮ ಕಾರ್ಮಿಕರ ಜೀವನಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು.
ಭಾರತ ವಿಶ್ವದ ಬಲಶಾಲಿ ರಾಷ್ಟ್ರವಾಗಲಿದೆ - ಶಿಂಧೆ ವಿಶ್ವಾಸ:ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತನಾಡಿ, ಮೋದಿಜಿಯವರ ನೇತೃತ್ವದಲ್ಲಿ ದೇಶವನ್ನು ಸೂಪರ್ ಪವರ್ ಮಾಡುವ 140 ಕೋಟಿ ಜನರ ಕನಸು ನನಸಾಗಲಿದೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ಮುಂಬರುವ ವರ್ಷಗಳಲ್ಲಿ ಬಲಪಡಿಸಲಾಗುವುದು ಎಂದು ತಿಳಿಸಿದರು.
ಜವಳಿ ಉದ್ಯಮಕ್ಕಾಗಿ ಏಳು 'ಪಿಎಂ ಮಿತ್ರ ಪಾರ್ಕ್' ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಪಿಎಂ ಮಿತ್ರಾ ಪಾರ್ಕ್ ಭಾರತವನ್ನು ಜವಳಿ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ. ಅಧಿಕಾರಿಗಳ ಪ್ರಕಾರ, ಈ ಸೌಲಭ್ಯಗಳು ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯ ಸೃಷ್ಟಿಗೆ ಸಹಾಯ ಮಾಡುತ್ತದೆ. ವಿದೇಶಿ ನೇರ ಹೂಡಿಕೆ (ಎಫ್ಡಿಐ) ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆ ದೇಶ ಆಕರ್ಷಿಸುತ್ತಿದೆ. ಈ ವಲಯದಲ್ಲಿ ಆವಿಷ್ಕಾರ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ, ಮಹಾರಾಷ್ಟ್ರ ಸರ್ಕಾರದ 'ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರ' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಯೋಜನೆಯಡಿ, 15 ರಿಂದ 45 ವರ್ಷದೊಳಗಿನ ಯುವಕರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಅಲ್ಲದೆ, ವಿವಿಧ ಉದ್ಯೋಗಾವಕಾಶಗಳನ್ನು ಒದಗಿಸುವ ಸಲುವಾಗಿ ಮಹಾರಾಷ್ಟ್ರ ರಾಜ್ಯಾದ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ರಾಜ್ಯಾದ್ಯಂತ ಪ್ರತಿ ವರ್ಷ ಸುಮಾರು 1,50,000 ಯುವಕರು ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆಯುತ್ತಾರೆ.
ಇದಲ್ಲದೇ ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿಯಲ್ಲಿ, ಮಹಾರಾಷ್ಟ್ರದಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತಗಳಲ್ಲಿ ಸಹಾಯ ಮಾಡಲಾಗುತ್ತದೆ.
ಇದನ್ನೂ ಓದಿ:ತಿರುಪತಿ ಲಡ್ಡು ಕಲಬೆರಕೆ ವಿವಾದ: ದೇಶಾದ್ಯಂತ ಆಕ್ರೋಶ, ಕೇಂದ್ರ ಸಚಿವರ ಕಿಡಿ - Tirupati Laddu Row