ಭರತ್ಪುರ್, ರಾಜಸ್ಥಾನ: ಭಕ್ತರ ನಂಬಿಕೆ ಮತ್ತು ಭಕ್ತಿಗೆ ಎಂದಿಗೂ ಕೊನೆಯಿಲ್ಲ. ಈ ಭಕ್ತಿಯಿಂದಾಗಿ ಮನೆಯನ್ನು ದೇಗುಲ ಮಾಡಿ, ಪಾದರಸದ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ವಿಪರ್ಯಾಸ ಎಂದರೆ, ಈ ಆಸೆ ಆ ವ್ಯಕ್ತಿ ಅಗಲಿಕೆ ನಂತರ ಮಗಳು ಪೂರ್ಣಗೊಳಿಸಿದ್ದಾರೆ ಎನ್ನುವುದೇ ಇಲ್ಲಿನ ವಿಶೇಷತೆಯಾಗಿದೆ.
ತಂದೆಯ ಕನಸನ್ನು ಇದೀಗ ಮಗಳು ನನಸಾಗಿಸಿದ್ದಾಳೆ. ಈ ಶಿವಲಿಂಗದ ವಿಶೇಷತೆ ಎಂದರೆ, 15 ಇಂಚಿನ ಈ ಶಿವಲಿಂಗವನ್ನು 104 ಕೆಜಿ ಪಾದರಸದಿಂದ ಸಿದ್ಧಪಡಿಸಲಾಗಿದೆ. ಇದಕ್ಕೆ ಬಂಗಾರ ಮತ್ತು ಬೆಳ್ಳಿಯನ್ನು ಸೇರಿಸಲಾಗಿದೆ. ರಾಜ್ಯದಲ್ಲಿಯೇ ಅತಿ ದೊಡ್ಡ ಪಾದರಸದ ಶಿವಲಿಂಗ ಎಂಬ ಖ್ಯಾತಿಯನ್ನೂ ಕೂಡಾ ಇದು ಪಡೆದುಕೊಂಡಿದೆ.
ಮಗನ ನೆನಪಿಗೆ ದೇಗುಲ: ರಾಜಸ್ಥಾನದ ನಡಿಯಾ ಮೊಹಲ್ಲಾ ನಿವಾಸಿಯಾಗಿರುವ ರಾಧೆಶ್ಯಾಮ್ ಸಿಂಗಲ್ ಮತ್ತು ಸುಶೀಲಾ ದೇವಿ 2003ರಲ್ಲಿ ಅವರ ಮಗನನ್ನು ಕಳೆದುಕೊಂಡಿದ್ದರು. ಮಗನನ್ನು ಕಳೆದುಕೊಂಡ ದಂಪತಿ ಆಘಾತಕ್ಕೆ ಒಳಗಾದರು. ಮಗನ ಸಾವಿನಿಂದ ನೊಂದ ರಾಧೆಶ್ಯಾಮ್ ತಮ್ಮ ಮನಸ್ಸನ್ನು ಸಂಪೂರ್ಣವಾಗಿ ದೈವಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪರಿಣಾಮವಾಗಿ 2006ರಲ್ಲಿ ಅವರ ಮನೆಯನ್ನೇ ಶಿವನ ದೇಗುಲವಾಗಿ ನಿರ್ಮಾಣ ಮಾಡಿದರು ಎಂದು ರಾಧೆಶ್ಯಾಮ್ ಸಿಂಗಲ್ ಮತ್ತು ಸುಶೀಲಾ ದೇವಿ ಮಗಳಾದ ಆಶಾ ಸಿಂಗಲ್ ತಿಳಿಸಿದ್ದಾರೆ.
ರಾಧೆಶ್ಯಾಮ್ ಮತ್ತು ಸುಶೀಲಾ ದೇವಿ ತಮ್ಮ ಮನೆಯಲ್ಲಿ 51 ಕೆಜಿ ತೂಕದ ಪಾದರಸ ಶಿವಲಿಂಗ ಅಳವಡಿಕೆಗೆ ನಿರ್ಮಾಣ ಮಾಡಿದರು. ಇದಕ್ಕಾಗಿ ತಮ್ಮ ಇಡೀ ಜೀವನದಲ್ಲಿ ಹಂತ ಹಂತವಾಗಿ ಪಾದರಸ ಸಂಗ್ರಹ ಮಾಡಲು ಮುಂದಾಗಿದ್ದರು. ಅವರ ಜೀವನದಲ್ಲಿ 40 ಕೆಜಿ ಪಾದರಸ ಸಂಗ್ರಹ ಮಾಡಿದ್ದು, ಅವರ ಕನಸು ಈಡೇರಿರಲಿಲ್ಲ. ರಾಧೆಶ್ಯಾಮ್ 2021ರಲ್ಲಿ ನಿಧನರಾದರು.