ಶ್ರೀನಗರ, ಜಮ್ಮು ಮತ್ತು ಕಾಶ್ಮೀರ:ರಾಜೌರಿಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಕನಿಷ್ಠ ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಶೇರಾ ರಾಜೌರಿ ಉಪ ವಿಭಾಗದ ಭವಾನಿ ಸೆಕ್ಟರ್ನ ಮಕ್ರಿ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಫೋಟಗೊಂಡಿದ್ದ ಈ ದುರಂತ ಸಂಭವಿಸಿದೆ. ಖಂಬಾ ಫೋರ್ಟ್ ರಾಜೌರಿ ಬಳಿ ಆರು ಸೈನಿಕರು ಗಸ್ತು ತಿರುಗುತ್ತಿದ್ದಾಗ ನೆಲಬಾಂಬ್ ಮೇಲೆ ಹೆಜ್ಜೆ ಇಟ್ಟಿದ್ದು, ಸ್ಫೋಟಕ್ಕೆ ಕಾರಣವಾಗಿದೆ ಎಂದು ಸೇನೆಯ ಮೂಲಗಳು ಮಾಹಿತಿ ನೀಡಿವೆ.
ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ರಾಜೌರಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೇನಾ ವಕ್ತಾರರು ಪ್ರತಿಕ್ರಿಯಿಸಿ, "ಜ.14 ರಂದು ಸುಮಾರು 10.45 ಗಂಟೆಗಳ ವೇಳೆ ಗೂರ್ಖಾ ರೈಫಲ್ಸ್ (ಜಿಆರ್) ಪಡೆಗಳು ಖಂಬಾ ಕೋಟೆಯ ಬಳಿ ಗಸ್ತು ನಡೆಸುತ್ತಿದ್ದಾಗ ಆಕಸ್ಮಿಕವಾಗಿ ನೆಲಬಾಂಬ್ ಸ್ಫೋಟ ಸಂಭವಿಸಿ ಆರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಹವಾಲ್ದಾರ್ ಎಂ ಗುರುಂಗ್, ಹವಾಲ್ದಾರ್ ಜೆ ಥಪ್ಪಾ, ಹವಾಲ್ದಾರ್ ಜಂಗ್ ಬಹದ್ದೂರ್ ರಾಣಾ, ಹವಾಲ್ದಾರ್ ಆರ್. ರಾಣಾ, ಹವಾಲ್ದಾರ್ ಪಿ ಬಿಡಿಆರ್ ರಾಣಾ ಮತ್ತು ಹವಾಲ್ದಾರ್ ವಿ ಗುರುಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸೈನಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಜೌರಿ ಜಿಹೆಚ್ ಆಸ್ಪತ್ರೆಗೆ ರವಾನಿಸಲಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಇಂದು ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನ: ಈ ದಿನದ ಹಿನ್ನೆಲೆ, ಮಹತ್ವದ ಕುರಿತ ಮಾಹಿತಿ ಇಲ್ಲಿದೆ
ಇದನ್ನೂ ಓದಿ:ಜಮ್ಮು - ಕಾಶ್ಮೀರದಲ್ಲಿ ಹತರಾದ ಶೇ 60ರಷ್ಟು ಉಗ್ರರು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ