ಶಿವಪುರಿ, ಮಧ್ಯಪ್ರದೇಶ: ನಾಗ್ಪುರದ ಡಾಲಿ ಚಾಯ್ ವಾಲಾಗಿಂತಲೂ ಈಗ ಮಧ್ಯಪ್ರದೇಶದ ಶಿವಪುರಿಯ ಚಾಯ್ ವಾಲಾ ಮುರಾರಿ ಲಾಲ್ ಕುಶ್ವಾಹ ಫೇಮಸ್ ಆಗುತ್ತಿದ್ದಾರೆ. ಭಾನುವಾರ ಮುರಾರಿ ಲಾಲ್ ಕುಶ್ವಾಹ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಚಾಯ್‌ವಾಲಾ ಮುರಾರಿ ತಮ್ಮ ಮಗಳಿಗೆ ಮೊಪೆಡ್ ಖರೀದಿಸಿದರು. ಇದಕ್ಕಾಗಿ ಅವರು ಡಿಜೆ, ಡ್ರಮ್ ಜತೆಗೆ ಕ್ರೇನ್ನೊಂದಿಗೆ ಬೈಕ್ ಶೋ ರೂಮ್ಗೆ ಆಗಮಿಸಿದ್ದರು. ಇದರಿಂದ ಅಲ್ಲಿ ವಿಭಿನ್ನ ವಾತಾವರಣವೇ ನಿರ್ಮಾಣವಾಗಿತ್ತು. 90 ಸಾವಿರ ಮೌಲ್ಯದ ಮೊಪೆಡ್ ಖರೀದಿಸಲು ಟೀ ಮಾರಾಟಗಾರ ಖುಷಿಯಿಂದ 60 ಸಾವಿರ ಖರ್ಚು ಮಾಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಟೀ ಮಾರಾಟಗಾರನ ಸಂಭ್ರಮಾಚರಣೆ ಕಂಡು ನಿಬ್ಬೆರಗಾದ ಜನ: ನಗರದ ಹಳೆ ಶಿವಪುರಿ, ನೀಲಗರ್ ಸ್ಕ್ವೇರ್ ನಿವಾಸಿ ಮುರಾರಿ ಲಾಲ್ ಕುಶ್ವಾಹ ಟೀ ಅಂಗಡಿ ನಡೆಸುತ್ತಿದ್ದಾರೆ. ಭಾನುವಾರ ಮುರಾರಿ ಟೀ ಮಾರಾಟಗಾರ ದುರ್ಗಾದಾಸ್ ರಾಥೋಡ್ ಛೇದಕ ಬಳಿ ಇರುವ ಮೊಪೆಡ್ ಶೋರೂಮ್‌ಗೆ ಮಗಳಿಗೆ ಮೊಪೆಡ್ ಖರೀದಿಸಲು ಆಗಮಿಸಿದ್ದರು. ಮುರಾರಿ ಮೊಪೆಡ್ ಖರೀದಿಸಲು ಕ್ರೇನ್, ಬಗ್ಗಿ, ಡಿಜೆ, ಡ್ರಮ್ಸ್, ಡ್ಯಾನ್ಸ್ ಮಾಡುವವರನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದರು. ಇದನ್ನು ಕಂಡು ಇಲ್ಲಿನ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಂತೂ ಸುಳ್ಳಲ್ಲ ಬಿಡಿ. ಮುರಾರಿ 90 ಸಾವಿರ ಮೌಲ್ಯದ ಮೊಪೆಡ್ ಖರೀದಿಸಿದರು. ಅದರಲ್ಲಿ 20 ಸಾವಿರ ಮುಂಗಡ ಕೂಡಾ ಪಾವತಿ ಮಾಡಿದ್ದು, ಪ್ರತಿ ತಿಂಗಳು 3 ಸಾವಿರ ಇಎಂಐ ಕಟ್ಟಲು ಅಣಿಯಾಗಿದ್ದಾರೆ.
ಸಂಭ್ರಮದ ಬಗ್ಗೆ ಚಾಯ್‌ವಾಲಾ ಹೇಳಿದ್ದಿಷ್ಟು:ಇದಲ್ಲದೇ ಮನೆಗೆ ಮೊಪೆಡ್ ತೆಗೆದುಕೊಂಡು ಹೋಗಲು 60 ಸಾವಿರ ರೂ. ಸಹ ಖರ್ಚು ಮಾಡಿದ್ದಾರೆ. ಈ ವಿಚಿತ್ರ ಸಾಹಸದ ಬಗ್ಗೆ ಮುರಾರಿ ಲಾಲ್ ಕುಶ್ವಾಹ ಅವರನ್ನು ಮಾತನಾಡಿಸಿದೆವು. ಅವರು ತಮ್ಮ ಮಗಳ ಸಂತೋಷಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಸಂತಸದಿಂದ ಹೇಳಿದರು.