ನವದೆಹಲಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯ ಗಣಪತಿ ಪೂಜೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಿರುವುದನ್ನು ಪ್ರತಿಪಕ್ಷಗಳು ಟೀಕಿಸಿವೆ.
ಪ್ರಧಾನಿ ಮೋದಿ ಗಣಪತಿಗೆ ಆರತಿ ಮಾಡುತ್ತಿದ್ದು, ಪಕ್ಕದಲ್ಲಿ ಸಿಜೆಐ ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಇರುವ ವಿಡಿಯೋ ವೈರಲ್ ಆಗಿದೆ.
ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವ್ ಪ್ರತಿಕ್ರಿಯಿಸಿ, "ಸಂವಿಧಾನ ರಕ್ಷಕರು ರಾಜಕೀಯ ನಾಯಕರನ್ನೂ ಭೇಟಿಯಾದಾಗ ಜನರಿಗೆ ಅನುಮಾನ ಮೂಡುತ್ತದೆ" ಎಂದಿದ್ದಾರೆ.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 'ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಇದನ್ನು ಖಂಡಿಸುತ್ತದೆ' ಎಂದು ತಿಳಿಸಿದ್ದಾರೆ.
ಇನ್ನು ಟೀಕೆಗಳಿಗೆ ಉತ್ತರಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, "ಸಿಜೆಐ ಮನೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದ ವಿಚಾರವಾಗಿ ಎಡಪಂಥೀಯ ಉದಾರವಾದಿಗಳು ಅಳುವುದಕ್ಕೆ ಶುರು ಮಾಡಿದ್ದಾರೆ" ಎಂದು ಟಾಂಗ್ ನೀಡಿದ್ದಾರೆ.
ಶಿವಸೇನಾ ರಾಜ್ಯಸಭಾ ಸಂಸದ ಮಿಲಿಂದ್ ಡಿಯೋರಾ ಪ್ರತಿಕ್ರಿಯಿಸಿ, 'ಪ್ರತಿಪಕ್ಷಗಳ ಹೇಳಿಕೆಗಳು ದುರಾದೃಷ್ಟಕರ. ಅವರ ಪರವಾಗಿ ನ್ಯಾಯ ಬಂದಾಗ ಸುಪ್ರೀಂ ಕೋರ್ಟ್ ವಿಶ್ವಾಸಾರ್ಹತೆಯನ್ನು ಮೆಚ್ಚುತ್ತಾರೆ. ಆದರೆ, ಪರಿಸ್ಥಿತಿಗಳು ಅವರ ಪರವಾಗಿಲ್ಲ ಎಂದಾದರೆ, ನ್ಯಾಯಾಂಗ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆಪಾದಿಸುತ್ತಾರೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಯ ನಯಾ ಕಾಶ್ಮೀರ್ ಕನಸು ನನಸಾಗದು: ರಶೀದ್ ಇಂಜಿನಿಯರ್