ಕರ್ನಾಟಕ

karnataka

ETV Bharat / bharat

ಇಂದಿನಿಂದ ಮಹಾರಾಷ್ಟ್ರದಲ್ಲಿ ರಾಹುಲ್​ ಗಾಂಧಿ ಮತ ಪ್ರಚಾರ; ಮೈತ್ರಿ ಪಕ್ಷದ ನಾಯಕರೊಂದಿಗೆ ಬೃಹತ್​ ಸಮಾವೇಶ

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿರುವ 'ಸಂವಿಧಾನ್​ ಸನ್ಮಾನ್​ ಸಮ್ಮೇಳನ್' ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮತ ಪ್ರಚಾರ ನಡೆಸಲಿದ್ದಾರೆ.

rahul-gandhi-kick-start-poll-campaing-wtih-mva-leaders-in-maharashtra
ರಾಹುಲ್​ ಗಾಂಧಿ (ANI)

By ETV Bharat Karnataka Team

Published : Nov 6, 2024, 12:47 PM IST

ಮುಂಬೈ: ಮಹಾರಾಷ್ಟ್ರ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇಂದಿನಿಂದ ರಾಜ್ಯದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ ಪ್ರಚಾರ ಆರಂಭಿಸಲಿದ್ದು, ನಾಗ್ಪುರ್​ ಮತ್ತು ಮುಂಬೈನಲ್ಲಿ ಮಹಾ ವಿಕಾಸ್ ಅಗಡಿಯ ಪಕ್ಷಗಳಾದ ಕಾಂಗ್ರೆಸ್​, ಶಿವಸೇನೆ (ಯುಬಿಟಿ) ಮತ್ತು ಎನ್​ಸಿಪಿ (ಎಸ್​ಪಿ) ಬೃಹತ್​ ಸಮಾವೇಶ ಆಯೋಜಿಸಿವೆ.

ನಾಗ್ಪುರದಲ್ಲಿ ಆಯೋಜಿಸಿರುವ 'ಸಂವಿಧಾನ್​ ಸನ್ಮಾನ್​ ಸಮ್ಮೇಳನ್'​ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್​ ಗಾಂಧಿ ಪ್ರಚಾರ ನಡೆಸಲಿದ್ದಾರೆ.

ಇದಕ್ಕೂ ಮುನ್ನ ರಾಹುಲ್​ ಗಾಂಧಿ ನಾಗ್ಪುರದಲ್ಲಿನ ದೀಕ್ಷಾಭೂಮಿಗೆ ಆಗಮಿಸಿ ಗೌರವ ನಮನ ಸಲ್ಲಿಸುವರು. ಇದೇ ಸ್ಥಳದಲ್ಲಿ 68 ವರ್ಷದ ಹಿಂದೆ 4 ಲಕ್ಷ ಅನುಯಾಯಿಗಳೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್​​ ಬೌದ್ಧಧರ್ಮ ಸ್ವೀಕರಿಸಿದ್ದರು.

ಇದಾದ ಬಳಿಕ ಅವರು, ಕವಿವರ್ಯಾ ಸುರೇಶ್​ ಭಟ್​​ ಸಭಾಂಗಣದಲ್ಲಿ ಗೌರವ ಸಂವಿಧಾನ ಸಭೆಯಲ್ಲಿ ಭಾಗಿಯಾಗಲಿದ್ದು, ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಮಧ್ಯಾಹ್ನ ಖರ್ಗೆ ಸೇರಿದಂತೆ ಇತರೆ ಪ್ರಮುಖ ನಾಯಕರ ಜೊತೆಗೆ ರಾಹುಲ್ ಮುಂಬೈಗೆ ಆಗಮಿಸಲಿದ್ದು, ಇಲ್ಲಿ ಬೃಹತ್​ ಸಾರ್ವಜನಿಕ ಸಮಾವೇಶ 'ಸ್ವಾಭಿಮಾನ ಸಭಾ'ದಲ್ಲಿ ಭಾಗಿಯಾಗುವರು. ಈ ಕಾರ್ಯಕ್ರಮ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್​ ಮುಖ್ಯ ವಕ್ತಾರ ಅತುಲ್​ ಲೊಂಧೆ ತಿಳಿಸಿದ್ದಾರೆ.

ಸಂಜೆ ರಾಹುಲ್ ಮಹಾರಾಷ್ಟ್ರ ಜನರಿಗೆ ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಕುರಿತು ತಿಳಿಸಲಿದ್ದಾರೆ. ಈ ವೇಳೆ ಆಡಳಿತಾರೂಢ ಮಹಾಯುತಿ ಮೈತ್ರಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಲೋಧೆ ಮಾಹಿತಿ ನೀಡಿದರು.

ಬಿಕೆಸಿ ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಖರ್ಗೆ, ರಾಹುಲ್​ ಗಾಂಧಿ, ಶರದ್​ ಪವರ್, ಉದ್ಧವ್​ ಠಾಕ್ರೆ, ಜಯಂತ್​ ಆರ್.ಪಾಟೀಲ್​ ಸೇರಿದಂತೆ ಮೈತ್ರಿ ಪಕ್ಷದ ಇತರೆ ನಾಯಕರು ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಎಂವಿಎ-ಇಂಡಿಯಾ ಒಕ್ಕೂಟದ ಮೊದಲ ಚುನಾವಣಾ ಪ್ರಚಾರ ಇಂದಿನಿಂದ ಆರಂಭವಾಗಲಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿಯ ಅನೇಕ ಮೈತ್ರಿ ಪ್ರಚಾರ ಕಾರ್ಯಕ್ರಮವನ್ನು ರಾಜ್ಯದ ಇತರೆ ಭಾಗಗಳಲ್ಲೂ ನಡೆಸಲಾಗುವುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಎಲ್​ಎಂವಿ ಲೈಸೆನ್ಸ್​ ಹೊಂದಿರುವವರು ಸಾರಿಗೆ ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

ABOUT THE AUTHOR

...view details