ETV Bharat / technology

ಇಸ್ರೇಲಿ ಸ್ಪೈವೇರ್ ಕಂಪೆನಿಯಿಂದ ವಾಟ್ಸ್‌ಆ್ಯಪ್​ ಬಳಕೆದಾರರ ಮೇಲೆ ದಾಳಿ: ಪಾರಾಗುವ ವಿಧಾನ ತಿಳಿಯಿರಿ - SPYWARE ATTACK

Spyware Attack: ಪ್ಯಾರಗಾನ್ ಸೊಲ್ಯೂಷನ್ಸ್ ಎಂಬ ಕಂಪೆನಿ ಮೇಲೆ ವಾಟ್ಸ್‌ಆ್ಯಪ್​ ಗಂಭೀರ ಆರೋಪ ಮಾಡಿದೆ. ಗ್ರಾಫೈಟ್​ ಸ್ಪೈವೇರ್​ ಮೂಲಕ ತನ್ನ ನೂರಾರು ಗ್ರಾಹಕರ ಮೇಲೆ ದಾಳಿ ಮಾಡಿದೆ ಎಂದು ದೃಢಪಡಿಸಿದೆ.

WHATSAPP  SPYWARE ATTACK  ISRAELI SPYWARE COMPANY  PARAGON SOLUTIONS HACKING
ವಾಟ್ಸ್‌ಆ್ಯಪ್​​ ಗಂಭೀರ ಆರೋಪ (ETV Bharat)
author img

By ETV Bharat Tech Team

Published : Feb 3, 2025, 10:00 PM IST

Spyware Attack: ಇಸ್ರೇಲಿ ಸ್ಪೈವೇರ್ ಕಂಪೆನಿ ಪ್ಯಾರಾಗಾನ್ ಹ್ಯಾಕಿಂಗ್ ತನ್ನ ಬಳಕೆದಾರರ ಮೇಲೆ ದಾಳಿ ಮಾಡಿದೆ ಎಂದು ವಾಟ್ಸ್‌ಆ್ಯಪ್​ ಆರೋಪಿಸಿದೆ. ಇಸ್ರೇಲಿ ಕಂಪೆನಿಯು ತನ್ನ ಗ್ರಾಫೈಟ್ ಸ್ಪೈವೇರ್ ಮೂಲಕ ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದೆ.

ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್​, ಇಸ್ರೇಲಿ ಸ್ಪೈವೇರ್ ಕಂಪೆನಿ ಪ್ಯಾರಗಾನ್ ಸೊಲ್ಯೂಷನ್ಸ್ ಹ್ಯಾಕಿಂಗ್ ಮಾಡಿದೆ ಎಂದು ದೂರಿದೆ. ಸ್ಪೈವೇರ್ ಗ್ರ್ಯಾಫೈಟ್ ಸಹಾಯದಿಂದ ಸುಮಾರು 24 ದೇಶಗಳ ನೂರಾರು ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಗುರಿಯಾಗಿಸಲಾಗಿದ್ದು, ಪ್ಯಾರಗನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವಾಟ್ಸ್‌ಆ್ಯಪ್​ ಹೇಳಿಕೆ ನೀಡಿದೆ.

ಇದು ಝಿರೋ-ಕ್ಲಿಕ್ ದಾಳಿ: ಪ್ಯಾರಾಗಾನ್ ಸೊಲ್ಯೂಷನ್ಸ್ ಕಚೇರಿ ಅಮೆರಿಕದ ವರ್ಜೀನಿಯಾದಲ್ಲಿದೆ. ಗ್ರ್ಯಾಫೈಟ್ ಸ್ಪೈವೇರ್ ಅತ್ಯಂತ ಅಪಾಯಕಾರಿ. ಇದನ್ನು ಬಲಿಪಶುವಿಗೆ ತಿಳಿಯದಂತೆ ಸಾಧನದಲ್ಲಿ ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಬಳಕೆದಾರರು ಯಾವುದೇ ಲಿಂಕ್ ಸೇರಿದಂತೆ ಇತ್ಯಾದಿಗಳನ್ನು ಕ್ಲಿಕ್ ಮಾಡುವ ಅಗತ್ಯವಿಲ್ಲ. ಈ ರೀತಿಯ ತಂತ್ರವನ್ನು ಝಿರೋ-ಕ್ಲಿಕ್ ದಾಳಿ ಎಂದು ಕರೆಯಲಾಗುತ್ತದೆ. ಒಮ್ಮೆ ನಿಮ್ಮ ಸಾಧನದಲ್ಲಿ ಈ ವೈರಸ್​ ಅಳವಡಿಕೆ ನಂತರ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಸುಲಭವಾಗಿಯೇ ಆಪರೇಟ್​ ಮಾಡುತ್ತಾರೆ. ನಂತರ ಹ್ಯಾಕರ್‌ಗಳು ತಮ್ಮ ಇಚ್ಛೆಯಂತೆ ಫೋನ್‌ನಿಂದ ಡೇಟಾ ಕದಿಯಬಹುದು. ಇದು ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ NSO ಗ್ರೂಪ್‌ನ ಪೆಗಾಸಸ್ ಸ್ಪೈವೇರ್‌ನಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹ.

ಡಿಸೆಂಬರ್‌ನಲ್ಲಿ ದಾಳಿ: ಪತ್ರಕರ್ತ ಮತ್ತು ಇತರ ಬಲಿಪಶುಗಳನ್ನು ಯಾವಾಗಿನಿಂದಲೋ ಗುರಿಯಾಗಿಸಲಾಯಿತು ಎಂದು ವಾಟ್ಸ್‌ಆ್ಯಪ್​ ಹೇಳಿಲ್ಲ. ಆದರೆ ದಾಳಿ ಡಿಸೆಂಬರ್‌ನಲ್ಲಿ ನಡೆದಿದೆ ಎಂದು ದೃಢಪಡಿಸಿದೆ. ಕಂಪೆನಿಯು ಈಗ ಪೀಡಿತ ಬಳಕೆದಾರರಿಗೆ ಸಹಾಯ ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಸ್ಪೈವೇರ್ ಅನ್ನು ತಪ್ಪಿಸಲು ತನ್ನ ಭದ್ರತೆಯನ್ನು ಬಲಪಡಿಸುತ್ತಿದೆ.

ದಾಳಿಕೋರರನ್ನು ಗುರುತಿಸಲು ಸಾಧ್ಯವಾಗಲಿಲ್ಲ: ಸ್ಪೈವೇರ್‌ನ ಹಿಂದಿರುವ ದಾಳಿಕೋರರನ್ನು ಇನ್ನೂ ಗುರುತಿಸಲಾಗಿಲ್ಲ. ಇತರ ಸ್ಪೈವೇರ್ ಕಂಪೆನಿಗಳಂತೆ ಪ್ಯಾರಾಗಾನ್ ತನ್ನ ಸಾಫ್ಟ್‌ವೇರ್ ಅನ್ನು ಸರ್ಕಾರಗಳಿಗೆ ಮಾರಾಟ ಮಾಡಿದರೂ, ಈ ದಾಳಿಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ವಾಟ್ಸ್‌ಆ್ಯಪ್​ ಹೇಳಿದೆ. ಮತ್ತೊಂದೆಡೆ, ಪ್ಯಾರಗಾನ್‌ಗೆ ಹತ್ತಿರವಿರುವ ಮೂಲಗಳು ಕಂಪನಿಯು ಸುಮಾರು 35 ಸರ್ಕಾರಿ ಗ್ರಾಹಕರನ್ನು ಹೊಂದಿದ್ದು, ಅವರೆಲ್ಲರೂ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ ಎಂದು ಹೇಳುತ್ತವೆ. ಗ್ರೀಸ್, ಪೋಲೆಂಡ್, ಹಂಗೇರಿ, ಮೆಕ್ಸಿಕೊ ಮತ್ತು ಭಾರತದಂತಹ ದೇಶಗಳೊಂದಿಗೆ ಪ್ಯಾರಾಗಾನ್​ ವ್ಯವಹಾರ ನಡೆಸುವುದಿಲ್ಲ. ಏಕೆಂದರೆ ಅವರು ಈ ಹಿಂದೆ ಪ್ಯಾರಗನ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ಆರೋಪಗಳಿಗೆ ಸ್ಪಂದಿಸದ ಕಂಪೆನಿ: ಇಲ್ಲಿಯವರೆಗೆ, ಪ್ಯಾರಾಗಾನ್ ಸೊಲ್ಯೂಷನ್ಸ್ ಈ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಕೆನಡಾ ಮೂಲದ ಇಂಟರ್ನೆಟ್ ವಾಚ್​ಡಾಗ್​ ಸಿಟಿಜನ್ ಲ್ಯಾಬ್ ಪ್ರಕಾರ, ಕಂಪೆನಿಯು ರಾಷ್ಟ್ರೀಯ ಭದ್ರತೆ ಮತ್ತು ಅಪರಾಧ ತಡೆಗಟ್ಟುವಿಕೆಗಾಗಿ ಬಳಸಲಾಗುವ ಅಡ್ವಾನ್ಸ್ಡ್​ ಸರ್ವೆಲೆನ್ಸ್​ ಸಾಫ್ಟ್‌ವೇರ್ ಅನ್ನು ಸರ್ಕಾರಗಳಿಗೆ ಮಾರಾಟ ಮಾಡುತ್ತದೆ. ಆದರೆ ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರ ವಿರುದ್ಧ ಇಂತಹ ಸಾಧನಗಳ ಬಳಕೆಯು ಗಂಭೀರ ಕಳವಳಕಾರಿ ವಿಷಯವಾಗಿದೆ.

ಇದರಿಂದ ಬಚಾವ್​ ಆಗುವುದು ಹೇಗೆ?: ವಾಟ್ಸ್‌ಆ್ಯಪ್​ ಅನ್ನು ಆಗಾಗ್ಗೆ ಅಪ್​ಡೇಟ್​ ಮಾಡುತ್ತಲೇ ಇರಿ. ನೀವು ಅಪರಿಚಿತ ಸಂಖ್ಯೆಯಿಂದ ಲಿಂಕ್ ಅಥವಾ ಫೈಲ್ ಬಂದ್ರೆ ಅದಕ್ಕೆ ಪ್ರತಿಕ್ರಿಯಿಸಬೇಡಿ. ಆ ಸಂಖ್ಯೆಗಳನ್ನು ಬ್ಲಾಕ್​ ಲಿಸ್ಟ್​ ಹಾಕುವುದು ಸೂಕ್ತ. ಆಗಾಗ್ಗೆ ನಿಮ್ಮ ಫೋನ್‌ನ ಸೆಟ್ಟಿಂಗ್ಸ್​ ಮತ್ತು ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸುವುದು ಸೂಕ್ತ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಗೀಳಿನಲ್ಲಿ ಯುವ ಪೀಳಿಗೆ, ದುರಾಲೋಚನೆಗೆ ದಾರಿ; ಇದನ್ನು ತಡೆಯುವುದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.