ಚಂಡೀಗಢ:ಇಲ್ಲಿನ ಸೆಕ್ಟರ್ 10ರ ಪ್ರದೇಶದ ಮನೆಯಲ್ಲಿ ಕಡಿಮೆ ತೀವ್ರತೆಯ ಗ್ರೆನೇಡ್ ಸ್ಪೋಟ ನಡೆಸಿದ ಪ್ರಮುಖ ಆರೋಪಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಈ ಸ್ಪೋಟ ನಡೆದಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದರು. ಈ ಘಟನೆಯ ಆರೋಪಿಗಳಿಗೆ ಸುಳಿವು ನೀಡಿದರೆ 2 ಲಕ್ಷ ರೂ ಬಹುಮಾನ ನೀಡುವುದಾಗಿ ಗುರುವಾರ ಚಂಡೀಗಢ ಪೊಲೀಸರು ಘೋಷಿಸಿದ್ದರು.
ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯೊಂದಿಗಿನ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಮೃತ್ಸರ್ ಗ್ರಾಮಾಂತರ ಪ್ರದೇಶದ ನಿವಾಸಿ ರೋಹನ್ ಮಸಿಹ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.