ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಪುಣೆ ಬಳಿ ಕಾರಿನಲ್ಲಿ 5 ಕೋಟಿ ರೂ. ನಗದು ಜಪ್ತಿ ಮಾಡಿದ ಪೊಲೀಸರು - POLICE SEIZE 5 CRORE RUPEES

ಪೊಲೀಸರು ವಶಕ್ಕೆ ಪಡೆದ ಹಣದ ಕುರಿತು ಮಾತನಾಡಿರುವ ಯುಬಿಟಿ ನಾಯಕ ಸಂಜಯ್​ ರಾವತ್​, ಹೆಸರು ಉಲ್ಲೇಖಿಸಿದೆ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರನ್ನು ಟೀಕಿಸಿದ್ದಾರೆ.

police-seize-5-crore-rupees-from-car-near-pune-amid-maharashtra-assembly-polls
ಹಣವಿದ್ದ ಕಾರ್​ (ಈಟಿವಿ ಭಾರತ್​)

By ETV Bharat Karnataka Team

Published : Oct 22, 2024, 10:55 AM IST

ಪುಣೆ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಾವು ಹೆಚ್ಚಿರುವ ಮಧ್ಯೆ ಪುಣೆ ಪೊಲೀಸರು ಬಂದೋಬಸ್ತ್​​ ವೇಳೆ ಕಾರ್​​ನಲ್ಲಿ 5 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಶಿವಪುರ್​ ಟೋಲ್​ ಬೂತ್​ನಲ್ಲಿ ಕಾರ್​ನಲ್ಲಿ ಅನಾಮಧೇಯ ಹಣ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಣದ ಕುರಿತು ಮಾತನಾಡಿರುವ ಯುಬಿಟಿ ನಾಯಕ ಸಂಜಯ್​ ರಾವತ್​, ಹೆಸರನ್ನು ಉಲ್ಲೇಖಿಸಿದೆ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರನ್ನು ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾವತ್​, ’’ಮಿಂಧೆ 75 ಕೋಟಿಯನ್ನು ಪ್ರತಿ ಎಂಎಲ್​ಎಗಳಿಗೆ ಕಳುಹಿಸಿದ್ದು, ಇದು ಅದರ ಮೊದಲ ಕಂತಾಗಿದೆ‘‘ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ನವೆಂಬರ್​ 20ಕ್ಕೆ ಏಕಹಂತದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಂಬೈ - ಬೆಂಗಳೂರು ಹೆದ್ದಾರಿಯಲ್ಲಿನ ಶಿವಪುರ ಗ್ರಾಮದ ಟೊಲ್​ ಬೂತ್​ನಲ್ಲಿ ಪುಣೆ ಗ್ರಾಮಾಂತರ ಪೊಲೀಸರು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಸೋಮವಾರ ರಾತ್ರಿ ಈ ಮಾರ್ಗ ಸಂಚಾರದ ವಾಹನ ತಪಾಸಣೆ ನಡೆಸಲಾಗಿದೆ. ಈ ವೇಳೆ ಸತರಾಗೆ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ತೆರಳುತ್ತಿದ್ದ ಕಾರಿನಲ್ಲಿ ಅನಾಧೇಯ 5 ಕೋಟಿ ರೂ ಲಭ್ಯವಾಗಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಏನಿವು ನೀಲಿ, ಕೆಂಪು, ಹಸಿರು ಕೋಚ್​​ಗಳು? - ರೈಲು ಬೋಗಿಗಳ ಬಣ್ಣಕ್ಕೆ ಇರುವ ವಿಶೇಷ ಕಾರಣ, ಮಹತ್ವ ಏನು?

ABOUT THE AUTHOR

...view details