ಕರ್ನಾಟಕ

karnataka

ETV Bharat / bharat

ಇಂದು ಬಾಳಾಸಾಹೇಬ್ ಠಾಕ್ರೆ 12ನೇ ಪುಣ್ಯತಿಥಿ: ಪ್ರಧಾನಿ ಮೋದಿಯಿಂದ ಗೌರವ ನಮನ

ಇಂದು ಬಾಳಾಸಾಹೇಬ್ ಠಾಕ್ರೆ ಅವರ 12 ನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಧಾನಿ ಮೊದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಇಂದು ಬಾಳಾಸಾಹೇಬ್ ಠಾಕ್ರೆ 12ನೇ ಪುಣ್ಯತಿಥಿ: ಪ್ರಧಾನಿ ಮೋದಿಯಿಂದ ಗೌರವ ನಮನ
ಇಂದು ಬಾಳಾಸಾಹೇಬ್ ಠಾಕ್ರೆ 12ನೇ ಪುಣ್ಯತಿಥಿ: ಪ್ರಧಾನಿ ಮೋದಿಯಿಂದ ಗೌರವ ನಮನ (IANS)

By ETV Bharat Karnataka Team

Published : 5 hours ago

ನವದೆಹಲಿ: ಬಲಪಂಥೀಯ ಮರಾಠಿ ಪರ ಮತ್ತು ಹಿಂದೂ ರಾಷ್ಟ್ರೀಯವಾದಿ ಪಕ್ಷ ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ 12 ನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅವರಿಗೆ ಗೌರವ ನಮನ ಸಲ್ಲಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ಮಹಾನ್ ವ್ಯಕ್ತಿ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯ ತಿಥಿಯಂದು ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮರಾಠಿ ಜನರ ಸಬಲೀಕರಣಕ್ಕಾಗಿ ಹೋರಾಡಿದ ದೂರದೃಷ್ಟಿಯುಳ್ಳ ವ್ಯಕ್ತಿ ಅವರಾಗಿದ್ದರು." ಎಂದು ಹೇಳಿದ್ದಾರೆ.

"ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಹೆಚ್ಚಿಸುವಲ್ಲಿ ದೃಢ ನಂಬಿಕೆ ಹೊಂದಿದ್ದರು. ಅವರ ದಿಟ್ಟ ಧ್ವನಿ ಮತ್ತು ಅಚಲ ಮನೋಭಾವವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬಾಳಾಸಾಹೇಬ್ ಠಾಕ್ರೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಾಳ್ ಕೇಶವ್ ಠಾಕ್ರೆ ಓರ್ವ ವ್ಯಂಗ್ಯಚಿತ್ರಕಾರರಾಗಿದ್ದು, ಮೂಲ ಶಿವಸೇನೆಯನ್ನು ಸ್ಥಾಪಿಸಿದ ರಾಜಕಾರಣಿಯಾಗಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಠಾಕ್ರೆ ಬಾಂಬೆ ಮೂಲದ ಇಂಗ್ಲಿಷ್ ದೈನಿಕ ದಿ ಫ್ರೀ ಪ್ರೆಸ್ ಜರ್ನಲ್​ನಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು. ನಂತರ 1960 ರಲ್ಲಿ ಆ ಕೆಲಸ ತೊರೆದು ತಮ್ಮದೇ ಆದ 'ಮಾರ್ಮಿಕ್' ಹೆಸರಿನ ರಾಜಕೀಯ ವಾರಪತ್ರಿಕೆಯೊಂದನ್ನು ಆರಂಭಿಸಿದ್ದರು.

ಬಾಳಾಸಾಹೇಬ್ ಅವರ ರಾಜಕೀಯ ದೃಷ್ಟಿಕೋನವು ಮರಾಠಿ ಭಾಷಿಕರಿಗೆ ಪ್ರತ್ಯೇಕ ಭಾಷಾವಾರು ರಾಜ್ಯವನ್ನು ರಚಿಸಬೇಕೆಂದು ಪ್ರತಿಪಾದಿಸಿದ ಸಂಯುಕ್ತ ಮಹಾರಾಷ್ಟ್ರ (ಸಂಯುಕ್ತ ಮಹಾರಾಷ್ಟ್ರ) ಚಳವಳಿಯ ಪ್ರಮುಖ ವ್ಯಕ್ತಿಯಾದ ಅವರ ತಂದೆ ಕೇಶವ್ ಸೀತಾರಾಮ್ ಠಾಕ್ರೆ ಅವರಿಂದ ಬಹಳಷ್ಟು ಪ್ರಭಾವಿತವಾಗಿತ್ತು.

ಮುಂಬೈನಲ್ಲಿ ಮರಾಠಿಯೇತರರ ಪ್ರಭಾವ ಹೆಚ್ಚುತ್ತಿರುವುದರ ವಿರುದ್ಧ ಬಾಳ್ ಠಾಕ್ರೆ ಮಾರ್ಮಿಕ್ ಪತ್ರಿಕೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 1960ರ ದಶಕದ ಕೊನೆಯಲ್ಲಿ ಮತ್ತು 1970ರ ದಶಕದ ಆರಂಭದಲ್ಲಿ ಠಾಕ್ರೆ ಶಿವಸೇನೆಯನ್ನು ಕಟ್ಟಿದರು. ಅಲ್ಲದೆ ಅವರು ಮರಾಠಿ ಭಾಷೆಯ ಪತ್ರಿಕೆ 'ಸಾಮ್ನಾ'ವನ್ನು ಸಹ ಸ್ಥಾಪಿಸಿದರು.

90 ರ ದಶಕದ ಆರಂಭದಲ್ಲಿ ನಡೆದ ಗಲಭೆಗಳ ನಂತರ, ಠಾಕ್ರೆ ಮತ್ತು ಅವರ ಪಕ್ಷವು ಹಿಂದುತ್ವ ನಿಲುವನ್ನು ಅಪ್ಪಿಕೊಂಡಿತು. 1999 ರಲ್ಲಿ, ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುವುದರಲ್ಲಿ ತೊಡಗಿದ್ದಕ್ಕಾಗಿ ಅವರನ್ನು ಆರು ವರ್ಷಗಳ ಕಾಲ ಮತದಾನ ಮಾಡದಂತೆ ಮತ್ತು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿತ್ತು. ಠಾಕ್ರೆ ಅವರು ತಮ್ಮ ಪಕ್ಷದ ನಾಯಕರಾಗಿ ಔಪಚಾರಿಕವಾಗಿ ಆಯ್ಕೆಯಾಗದ ಕಾರಣ ಅವರು ಯಾವುದೇ ಅಧಿಕೃತ ಹುದ್ದೆಗಳನ್ನು ಹೊಂದಿರಲಿಲ್ಲ.

ಅವರ ಪುತ್ರ ಉದ್ಧವ್ ಬಾಳ್ ಠಾಕ್ರೆ 2019 ರಿಂದ 2022 ರವರೆಗೆ ಮಹಾರಾಷ್ಟ್ರದ 19 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಉದ್ಧವ್ ಅವರು 2006 ರಿಂದ 2019 ರವರೆಗೆ ಶಿವಸೇನೆ ಮತ್ತು ಸಾಮ್ನಾ ಅದರ ಪ್ರಧಾನ ಸಂಪಾದಕರಾಗಿ ನಾಯಕತ್ವವನ್ನು ವಹಿಸಿಕೊಂಡರು. 2020 ರಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಉದ್ಧವ್ ಠಾಕ್ರೆ ಅವರು ಮಹಾ ವಿಕಾಸ್ ಅಘಾಡಿ ಮತ್ತು ಶಿವಸೇನೆ (ಯುಬಿಟಿ) ಎರಡರ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ :'ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆ ಸ್ಥಳಾಂತರಿಸಿ' ಫಾರೂಕ್ ಅಬ್ದುಲ್ಲಾ ಹೀಗೆ ಹೇಳಿದ್ದು ಏಕೆ?

ABOUT THE AUTHOR

...view details