ಕರ್ನಾಟಕ

karnataka

ETV Bharat / bharat

ಸಿಂಹಸ್ಥ ಕುಂಭಮೇಳ: ₹15 ಸಾವಿರ ಕೋಟಿ ವೆಚ್ಚದ ಯೋಜನೆ ಸಿದ್ಧ - Simhastha Kumbh Mela - SIMHASTHA KUMBH MELA

2026-27ರಲ್ಲಿ ನಾಸಿಕ್​ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳಕ್ಕೆ ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ 15 ಸಾವಿರ ಕೋಟಿ ರೂ. ವೆಚ್ಚದ ಕರಡು ಯೋಜನೆಯನ್ನು ಸಿದ್ಧಪಡಿಸಿದ್ದು, ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದೆ.

ನಾಸಿಕ್ ಸಿಂಹಸ್ಥ ಕುಂಭಮೇಳ
ನಾಸಿಕ್ ಸಿಂಹಸ್ಥ ಕುಂಭಮೇಳ (ETV Bharat)

By ETV Bharat Karnataka Team

Published : Jul 2, 2024, 11:00 PM IST

ನಾಸಿಕ್(ಮಹಾರಾಷ್ಟ್ರ): ನಾಸಿಕ್​ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಂಹಸ್ಥ ಕುಂಭ ಮೇಳ ನಡೆಯುತ್ತದೆ. ಮುಂದಿನ ಕುಂಭಮೇಳ ನಾಸಿಕ್ ನಲ್ಲಿ 2026-27ರಲ್ಲಿ ನಡೆಯಲಿದೆ. ಈ ಹಿಂದೆ ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ ಕುಂಭಮೇಳಕ್ಕಾಗಿ 11,600 ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಸದ್ಯ 15,000 ಕೋಟಿ ರೂ. ಮೌಲ್ಯದ ಪರಿಷ್ಕತ ಯೋಜನೆಯನ್ನು ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುತ್ತದೆ.

ನಾಸಿಕ್​ನಲ್ಲಿ ಸಾಧುಗ್ರಾಮಕ್ಕಾಗಿ ಸುಮಾರು 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸುಮಾರು 4,500 ಕೋಟಿ ರೂ.ಬೇಕಾಗುತ್ತದೆ. ರಿಂಗ್ ರಸ್ತೆ ಮತ್ತು ಇತರ ಸ್ಥಳಗಳಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ ಸುಮಾರು 15,000 ಕೋಟಿ ರೂ.ಗಳ ಹೊಸ ಸಿಂಹಸ್ಥ ಕುಂಭಮೇಳ ಯೋಜನೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ.

ಅದರಂತೆ, ನಾಸಿಕ್ ಮುನ್ಸಿಪಲ್ ಕಮಿಷನರ್ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಮುಂಬರುವ ಕುಂಭಮೇಳಕ್ಕೆ ಸಂಬಂಧಿಸಿದಂತೆ ಕೇವಲ ಕಾಗದದಲ್ಲಿ ಯೋಜನೆ ರೂಪಿಸದೇ ವಸ್ತುನಿಷ್ಠ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತಕ್ಕೆ ಸೂಚನೆ ನೀಡಿದ್ದರು. ಬಳಿಕ ಪಾಲಿಕೆ ಆಯುಕ್ತರ ಜತೆಗೆ ಎಲ್ಲ ಅಧಿಕಾರಿಗಳು ತಪೋವನ ಪ್ರದೇಶಕ್ಕೆ ನೇರವಾಗಿ ಭೇಟಿ ನೀಡಿ, ರಾಜಮನೆತನದ ಮೆರವಣಿಗೆ ಮಾರ್ಗವನ್ನು ಪರಿಶೀಲಿಸಿದ್ದಾರೆ.

ಕುಂಭಮೇಳಕ್ಕೆ ಇನ್ನು ಮೂರು ವರ್ಷ ಬಾಕಿಯಿದೆ. ಲೋಕಸಭೆ ನೀತಿ ಸಂಹಿತೆ ಜಾರಿಗೂ ಮುನ್ನ ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ ರಾಜ್ಯ ಸರ್ಕಾರದ ಆದೇಶದಂತೆ ಸಿಂಹಸ್ಥಕ್ಕೆ 11,600 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಪ್ರಾಥಮಿಕ ಕರಡು ಯೋಜನೆ ಸಿದ್ಧಪಡಿಸಿತ್ತು. ಇದರಲ್ಲಿ ಲೋಕೋಪಯೋಗಿ ಇಲಾಖೆಯ ಬರೋಬ್ಬರಿ ಆರು ಸಾವಿರ ಕೋಟಿ ವೆಚ್ಚದ ಕಾಮಗಾರಿಗಳು ಸೇರಿದ್ದವು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಸಿಂಹಸ್ಥ ಕುಂಭಮೇಳದ ಕಾಮಗಾರಿ ಸ್ಥಗಿತಗೊಂಡಿತ್ತು. ಲೋಕಸಭೆ ಚುನಾವಣೆ ನಡೆದ ತಕ್ಷಣ ಜಿಲ್ಲಾಧಿಕಾರಿ ಶರ್ಮಾ ಅವರು ಸಿಂಹಸ್ಥ ಯೋಜನೆ ಕುರಿತು ಸಭೆ ಕರೆಯುವಂತೆ ಪುರಸಭೆ ಆಡಳಿತಕ್ಕೆ ಆದೇಶ ನೀಡಿದ್ದರು.

ಈ ವರ್ಷ ನಾಸಿಕ್ ನಲ್ಲಿ ನಡೆಯಲಿರುವ ಕುಂಭಮೇಳದ ಜವಾಬ್ದಾರಿಯನ್ನು ಗಿರೀಶ್ ಮಹಾಜನ್ ಅವರಿಗೆ ವಹಿಸಲಾಗಿದೆ. ಮುಂಬರುವ ಕುಂಭಮೇಳದ ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಮಹಾಜನ್ ಅವರನ್ನು ನೇಮಿಸಲಾಗಿದೆ. ನಾಸಿಕ್ ಗಾರ್ಡಿಯನ್ ಸಚಿವ ದಾದಾ ಭೂಸೆ ಅವರಿಗೆ ಸಹ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

ಇದನ್ನೂ ಓದಿ:ಸತ್ಸಂಗದ ವೇಳೆ ಭಾರಿ ಕಾಲ್ತುಳಿತ: 116 ಮಂದಿ ಸಾವು; ಏರುತ್ತಲೇ ಸಾಗುತ್ತಿದೆ ಸಾವಿನ ಸಂಖ್ಯೆ - STAMPEDE BROKE OUT HATHRAS

ABOUT THE AUTHOR

...view details