ETV Bharat / state

108 ತರಕಾರಿಗಳಿಂದ ಬನಶಂಕರಿ ದೇವಿಗೆ ಅಲಂಕಾರ: ಪಲ್ಲೇದ ಹಬ್ಬ ಕಣ್ತುಂಬಿಕೊಂಡ ಭಕ್ತರು - PALLEDA FEST

ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ಪಲ್ಲೇದ ಹಬ್ಬವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

BANASHANKARI DEVI JATRA 2025  HAVERI  DEVI DECORATED WITH VEGETABLES  ಬನಶಂಕರಿ ಜಾತ್ರೆ
108 ತರಕಾರಿಗಳಿಂದ ಅಲಂಕಾರಗೊಂಡ ಬನಶಂಕರಿ ತಾಯಿ: ಪಲ್ಲೇದ ಹಬ್ಬ ಕಣ್ತುಂಬಿಕೊಂಡ ಭಕ್ತರು (ETV Bharat)
author img

By ETV Bharat Karnataka Team

Published : Jan 24, 2025, 11:17 AM IST

ಹಾವೇರಿ: ಶಿವಲಿಂಗ ನಗರದಲ್ಲಿರುವ ಬನಶಂಕರಿಯ ಜಾತ್ರಾ ಮಹೋತ್ಸವದ ವಿಶೇಷ ಪಲ್ಲೇದ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಸುಮಾರು 108 ತರಕಾರಿಗಳಿಂದ ಬನಶಂಕರಿ ದೇವಿಯನ್ನು ಅಲಂಕರಿಸುವುದು ಈ ಪಲ್ಲೇದ ಹಬ್ಬದ ವಿಶೇಷ.

ನೂರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಬರಗಾಲ ತಾಂಡವಾಡುತ್ತಿತ್ತು. ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದ ವೇಳೆ ಋಷಿಮುನಿಗಳು ದೇವಿಯ ಮೊರೆ ಹೋಗುತ್ತಾರೆ. ದೇವಿ ಬನಶಂಕರಿ ತನ್ನ ದೇಹದ ಉಷ್ಣಾಂಶ ಹೆಚ್ಚಿಸಿಕೊಂಡು ಶಾಕಾಂಬರಿಯಾಗುತ್ತಾಳೆ. ಅಲ್ಲದೆ ಬರದಿಂದ ತತ್ತರಿಸಿದ ಭೂಮಿಗೆ ಮಳೆ ತರುತ್ತಾಳೆ. ಈ ರೀತಿ ತಂದ ಮಳೆಯಲ್ಲಿ ಬೆಳೆದ ತರಕಾರಿಗಳನ್ನು ದೇವಿಗೆ ಅಲಂಕಾರ ಮಾಡಲಾಗುತ್ತದೆ. ಅಂದಿನಿಂದ ಇದಕ್ಕೆ ಪಲ್ಲೇದ ಹಬ್ಬ ಎಂದು ಕರೆಯಲಾಗುತ್ತದೆ ಎಂಬುದು ಭಕ್ತರ ನಂಬಿಕೆ.

108 ತರಕಾರಿಗಳಿಂದ ಬನಶಂಕರಿ ದೇವಿಗೆ ಅಲಂಕಾರ (ETV Bharat)

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಈ ರೀತಿಯ ಆಚರಣೆಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಹಾವೇರಿಯ ಬನಶಂಕರಿ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಈ ಆಚರಣೆ ಮಾಡಲಾಗುತ್ತಿದೆ. ಒಂದು ದಿನ ಮುಂಚಿತವಾಗಿ ಬರುವ ಸುಮಂಗಲೆಯರು ಮಾರುಕಟ್ಟೆಗೆ ತೆರಳಿ ವೈವಿಧ್ಯಮಯ ತರಕಾರಿ ಖರೀದಿ ಮಾಡುತ್ತಾರೆ. ನಂತರ ಅವುಗಳನ್ನು ತಂದು ಸ್ವಚ್ಛಗೊಳಿಸಿ ಮಾಲೆಗಳನ್ನಾಗಿ ಮಾಡುತ್ತಾರೆ. ಅದಾದ ನಂತರ ದೇವಿಗೆ ವಿವಿಧ ಅಭಿಷೇಕ ಸಲ್ಲಿಸುವ ಅರ್ಚಕರು ತರಕಾರಿಗಳಿಂದ ದೇವಿಯನ್ನು ಅಲಂಕರಿಸುತ್ತಾರೆ.

BANASHANKARI DEVI JATRA 2025  HAVERI  DEVI DECORATED WITH VEGETABLES  ಬನಶಂಕರಿ ಜಾತ್ರೆ
ಪಲ್ಲೇದ ಹಬ್ಬ ಕಣ್ತುಂಬಿಕೊಂಡ ಭಕ್ತರು (ETV Bharat)

ಇಲ್ಲಿ ಯಾವ ತರಕಾರಿ ಸಹ ಬಿಡದೆ ಕೆಲವೊಂದು ಸೊಪ್ಪುಗಳಿಂದ ಸಹ ತಾಯಿಯನ್ನು ಅಲಂಕರಿಸಲಾಗುತ್ತದೆ. ಈ ಬಾರಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಅರ್ಚಕರು ಮತ್ತು ಭಕ್ತರು ಶ್ರಮಿಸಿ ಬದನೆಕಾಯಿ, ಸೌತೆಕಾಯಿ, ಹಿರೇಕಾಯಿ, ಬೀನ್ಸ್, ಅವರೇ, ಮೆಣಸಿನಕಾಯಿ, ಸಾಂಬಾರಸವತೆ, ಹೂಕೋಸು, ಈರುಳ್ಳಿ, ಗಜ್ಜರಿ, ಮೂಲಂಗಿ, ಆಲೂಗಡ್ಡೆ, ಶುಂಠಿ, ಬೆಟ್ಟದ ನೆಲ್ಲಿಕಾಯಿ ಸರದಿಂದ ದೇವಿಯನ್ನು ಅಲಂಕರಿಸಿದ್ದಾರೆ. ಈ ವಿಶಿಷ್ಟ ಅಲಂಕಾರ ನೋಡಲು ಭಕ್ತರು ಬನಶಂಕರಿ ದೇವಸ್ಥಾನಕ್ಕೆ ಬೃಹತ್​ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡರು.

ಬನಶಂಕರಿ ತಾಯಿ ಉತ್ಸವ ಮೂರ್ತಿ (ETV Bharat)

ಈ ರೀತಿ ಆಚರಣೆ ಮಾಡಿದರೆ ಇಷ್ಟಾರ್ಥ, ಬೇಡಿಕೆಗಳನ್ನು ದೇವಿ ಈಡೇರಿಸುತ್ತಾಳೆ ಎನ್ನುವ ನಂಬಿಕೆ ಇಲ್ಲಿ ಮನೆ ಮಾಡಿದೆ. ಅಲಂಕಾರ ಮಾಡಿ ತರಕಾರಿಗಳನ್ನು ಮರುದಿನ ಬೆಳಗ್ಗೆ ದೇವಿಯ ಮೂರ್ತಿಯಿಂದ ತೆಗೆದು ಪ್ರಸಾದ ತಯಾರಿಸಲಾಗುತ್ತದೆ. ಈ ಪ್ರಸಾದವನ್ನು ಸಹಸ್ರಾರು ಭಕ್ತರು ಸೇವಿಸುತ್ತಾರೆ. ಐದು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ವಿವಿಧ ರೀತಿಯ ಅಲಂಕಾರ, ಅಭಿಷೇಕ ಮಾಡಲಾಗುತ್ತದೆ. ಜಾತ್ರೆಯ ಮಧ್ಯದ ದಿನವಾದ ಶುಕ್ರವಾರ ಬನಶಂಕರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಸಲಾಗುತ್ತದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿದ್ದು, ವರ್ಷದಿಂದ ವರ್ಷಕ್ಕೆ ಜಾತ್ರಾ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಅಡಳಿತ ಮಂಡಳಿ ಸದಸ್ಯರು ತಿಳಿಸಿದರು.

108 ತರಕಾರಿಗಳಿಂದ ಅಲಂಕಾರಗೊಂಡ ಬನಶಂಕರಿ ತಾಯಿ (ETV Bharat)

ಇದನ್ನೂ ಓದಿ: ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ, ಸಿರಿಧಾನ್ಯ ಮೇಳದ ವಿಶೇಷತೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.