ಜೈಪುರ (ರಾಜಸ್ಥಾನ) : ದೇಶದಲ್ಲಿ ಹೆಚ್ಎಂಪಿವಿ ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಿವೆ. ರಾಜಸ್ಥಾನದ ರಾಜಧಾನಿ ಜೈಪುರದ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಗುರುವಾರ ಎರಡು ಹೊಸ ಪ್ರಕರಣಗಳು ವರದಿಯಾಗಿವೆ. ಇಬ್ಬರೂ ರೋಗಿಗಳನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸವಾಯಿ ಮಾನ್ಸಿಂಗ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ದೀಪಕ್ ಮಹೇಶ್ವರಿ ಅವರು ಮಾಹಿತಿ ನೀಡಿದ್ದು, HMPV ಲಕ್ಷಣಗಳುಳ್ಳ ಎರಡು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರನ್ನೂ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ. ಇದೇ ಮೊದಲ ಬಾರಿಗೆ ವಯಸ್ಕರಲ್ಲಿ HMPV ಲಕ್ಷಣಗಳು ಕಂಡುಬಂದಿದೆ. ಇದಕ್ಕೂ ಮೊದಲು, ಈ ವೈರಸ್‌ನ ಲಕ್ಷಣಗಳು ಇಬ್ಬರು ಮಕ್ಕಳಲ್ಲಿ ಕಂಡುಬಂದಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು HMPV ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಅದರ ನಂತರ ರಾಜ್ಯದ ವೈದ್ಯಕೀಯ ಇಲಾಖೆಯೂ ಎಚ್ಚರಿಕೆ ವಹಿಸಿತ್ತು. ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಔಷಧ ಲಭ್ಯವಿಲ್ಲ. ರೋಗಿಗಳ ಲಭ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೋವಿಡ್ ಮಾದರಿ ಲಕ್ಷಣಗಳು: HMPV ವೈರಸ್ ಮಕ್ಕಳಿಂದ ಹಿಡಿದು 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೂ ಪರಿಣಾಮ ಬೀರುತ್ತಿದೆ. ಈ ವೈರಸ್ ಸೋಂಕಿಗೆ ಒಳಗಾದ ನಂತರ, ರೋಗಿಯು ಕೋವಿಡ್ ಮಾದರಿಯ ಲಕ್ಷಣಗಳಿವೆ. ವೈರಸ್ ಸೋಕಿದ ಬಳಿಕ ಶೀತ, ಕೆಮ್ಮು, ಜ್ವರ ಮತ್ತು ಗಂಟಲು ನೋವು, ಉಸಿರಾಟದ ತೊಂದರೆ, ನ್ಯುಮೋನಿಯಾ, ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ವೈರಸ್ ತಡೆಯುವುದು ಹೇಗೆ?: ಕೊರೊನಾ ಸಮಯದಲ್ಲಿ ಅನುಸರಿಸಿದ ನಿಯಮಗಳನ್ನು ಈ ವೈರಸ್ಗೂ ಪಾಲಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಿಸಿ. ಅನಾರೋಗ್ಯಕ್ಕೀಡಾದರೆ, ಇತರರ ಜೊತೆ ಬೆರೆಯಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸಿ. ಜನದಟ್ಟಣೆ ಸ್ಥಳಗಳಿಂದ ದೂರವಿರಿ. ಶೀತ ಬಂದರೆ ಶೀತ ಮತ್ತು ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ಹೆಚ್ಎಂಪಿವಿ ಕೋವಿಡ್ ವೈರಸ್ನಂತೆ ಭಯಾನಕವಲ್ಲ : ತಜ್ಞ ವೈದ್ಯರೊಂದಿಗೆ ಈಟಿವಿ ಭಾರತ ಸಂದರ್ಶನ