ಕರ್ನಾಟಕ

karnataka

ETV Bharat / bharat

7 ವರ್ಷಗಳಲ್ಲಿ 19 ಸಾವಿರ ಎಕರೆ ಅಕ್ರಮ ಅಫೀಮು ಬೆಳೆ ನಾಶ: ಮಣಿಪುರ ಸರ್ಕಾರದ ವರದಿ

ಮಣಿಪುರದಲ್ಲಿ 19 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಫೀಮು ಬೆಳೆಯನ್ನು ನಾಶಪಡಿಸಲಾಗಿದೆ.

7 ವರ್ಷಗಳಲ್ಲಿ 19 ಸಾವಿರ ಎಕರೆ ಅಕ್ರಮ ಅಫೀಮು ಬೆಳೆ ನಾಶ: ಮಣಿಪುರ ಸರ್ಕಾರದ ವರದಿ
ಮಣಿಪುರದಲ್ಲಿ ಅಕ್ರಮ ಅಫೀಮು ಬೆಳೆ ನಾಶ (IANS)

By ETV Bharat Karnataka Team

Published : 4 hours ago

ಇಂಫಾಲ್: ಮಣಿಪುರ ಪೊಲೀಸರು ಸೇರಿದಂತೆ ವಿವಿಧ ಕಾನೂನು ಜಾರಿ ಸಂಸ್ಥೆಗಳು 2017ರಿಂದ 2024ರ ನಡುವೆ ರಾಜ್ಯದ 12 ಜಿಲ್ಲೆಗಳ 19,135.60 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಯಲಾದ ಅಫೀಮು ಬೆಳೆಯನ್ನು ನಾಶಪಡಿಸಿವೆ ಎಂದು ಅಧಿಕೃತ ವರದಿಯೊಂದು ಸೋಮವಾರ ತಿಳಿಸಿದೆ.

ಮಣಿಪುರ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (ಮಾರ್ಸಾಕ್) ಸಿದ್ಧಪಡಿಸಿದ ವರದಿಯ ಪ್ರಕಾರ, ಪರ್ವತಮಯ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ, ಕಳೆದ ಏಳು ವರ್ಷಗಳಲ್ಲಿ (2017-2024) ಅತ್ಯಧಿಕ 4,454.4 ಎಕರೆ ಅಕ್ರಮ ಅಫೀಮು ಬೆಳೆಯನ್ನು ನಾಶಪಡಿಸಲಾಗಿದೆ. ಉಖ್ರುಲ್​ನಲ್ಲಿ 3,348 ಎಕರೆ ಮತ್ತು ಚುರಾಚಂದ್ ಪುರದಲ್ಲಿ 2,713.8 ಎಕರೆ ಅಫೀಮು ಬೆಳೆ ನಾಶ ಪಡಿಸಲಾಗಿದೆ. ಮಾರ್ಸಾಕ್ ಇದು ಮಣಿಪುರ ಸರ್ಕಾರದ ಯೋಜನಾ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸರ್ಕಾರಿ ಸಂಸ್ಥೆಯಾಗಿದೆ.

ಇತರ ಜಿಲ್ಲೆಗಳಾದ ತೆಂಗ್ನೌಪಾಲ್​ನಲ್ಲಿ 2,575 ಎಕರೆ, ಚಂದೇಲ್​ನಲ್ಲಿ 1,982.5 ಎಕರೆ, ಸೇನಾಪತಿಯಲ್ಲಿ 1,682 ಎಕರೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ 737.9 ಎಕರೆ ಅಫೀಮು ಬೆಳೆ ನಾಶಪಡಿಸಲಾಗಿದೆ. ರಾಜ್ಯದ 16 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ಹೆಚ್ಚಾಗಿ ಪರ್ವತ ಪ್ರದೇಶಗಳಲ್ಲಿವೆ.

ವರದಿಯ ಪ್ರಕಾರ ಅಕ್ರಮವಾಗಿ ಅಫೀಮು ಬೆಳೆಯಲಾದ 19,135.60 ಎಕರೆ ಪೈಕಿ 2020-21 ರಲ್ಲಿ 4,652 ಎಕರೆ ಮತ್ತು 2022-23 ರಲ್ಲಿ 4,305.10 ಎಕರೆ ಬೆಳೆ ನಾಶಪಡಿಸಲಾಗಿದೆ.

2021-22ರಲ್ಲಿ ಚಂದೇಲ್, ಚುರಾಚಂದ್ ಪುರ, ಕಾಮ್ ಜಾಂಗ್, ಕಾಂಗ್ ಪೋಕ್ಪಿ, ನೋನಿ, ಸೇನಾಪತಿ, ತಮೆಂಗ್ಲಾಂಗ್, ತೆಂಗ್ನೌಪಾಲ್, ಉಖ್ರುಲ್ ಈ ಒಂಬತ್ತು ಜಿಲ್ಲೆಗಳ 28,598.91 ಎಕರೆ ಪ್ರದೇಶದಲ್ಲಿ ಅಕ್ರಮ ಅಫೀಮು ಬೆಳೆಯಲಾಗಿತ್ತು. ಇದು 2023-24ರಲ್ಲಿ 11,288.1 ಎಕರೆಗೆ ಇಳಿದಿದೆ. ಒಟ್ಟಾರೆಯಾಗಿ, 2022-2023 ರ ವರ್ಷಕ್ಕೆ ಹೋಲಿಸಿದರೆ 2023-2024 ರಲ್ಲಿ ರಾಜ್ಯದಲ್ಲಿ ಅಫೀಮು ಗಸಗಸೆ ಕೃಷಿಯು ಶೇಕಡಾ 32.13 ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. 2021 ಮತ್ತು 2023 ರ ನಡುವೆ ಅಕ್ರಮ ಗಸಗಸೆ ಕೃಷಿಯಲ್ಲಿ ಎಕರೆವಾರು ಶೇಕಡಾ 60 ರಷ್ಟು ಕುಸಿತ ಕಂಡುಬಂದಿದೆ.

ಮಾರ್ಚ್ 29, 2022 ರಂದು ನಡೆದ ಮಾದಕವಸ್ತು ವಿರೋಧಿ ಕಾರ್ಯಪಡೆಯ ಮೊದಲ ಸಭೆಯ ನಂತರ ಕೈಗೊಂಡ ಕ್ರಮದ ಪ್ರಕಾರ, ಮಾರ್ಸಾಕ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಣಿಪುರದ ಬಹುತೇಕ ಜಿಲ್ಲೆಗಳಲ್ಲಿ ಅಫೀಮು ಗಸಗಸೆ ಕೃಷಿ ಪ್ರದೇಶಗಳ ವಾರ್ಷಿಕ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಬಾಂಗ್ಲಾದೇಶ ಬಿಕ್ಕಟ್ಟು ಪರಿಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಲಿ: ಸಿಎಂ ಮಮತಾ

ABOUT THE AUTHOR

...view details