ಕರ್ನಾಟಕ

karnataka

ETV Bharat / bharat

ಬಿಹಾರ ರಾಜ್ಯದ ಲೋಕಸಭಾ 40 ಸೀಟುಗಳ ಪೈಕಿ 14 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ - GENERAL ELECTION RESULTS - GENERAL ELECTION RESULTS

ಬಿಹಾರ ರಾಜ್ಯದ ಲೋಕಸಭಾ 40 ಸೀಟುಗಳ ಪೈಕಿ 18 ಸ್ಥಾನಗಳಲ್ಲಿ ಟ್ರೆಂಡ್ ಬಂದಿದ್ದು, 14 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

GENERAL ELECTION RESULTS  ELECTION RESULT 2024
ಬಿಹಾರ ರಾಜ್ಯದ ಲೋಕಸಭಾ 40 ಸೀಟುಗಳ ಪೈಕಿ 14 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ (ETV Bharat)

By ETV Bharat Karnataka Team

Published : Jun 4, 2024, 10:08 AM IST

ನವದೆಹಲಿ:ಬಿಹಾರ ರಾಜ್ಯದ 40 ಲೋಕಸಭಾ ಕ್ಷೇತ್ರಗಳಲ್ಲಿ ಸ್ಥಾನಗಳ ಎಣಿಕೆ ಮುಂದುವರೆದಿದೆ. 40 ಸೀಟುಗಳ ಪೈಕಿ 18 ಸ್ಥಾನಗಳಲ್ಲಿ ಟ್ರೆಂಡ್ ಬಂದಿದ್ದು, 14 ಸ್ಥಾನಗಳಲ್ಲಿ ಎನ್‌ಡಿಎ ಮುಂದಿದೆ. ಮಹಾಮೈತ್ರಿಕೂಟ 2 ಮತ್ತು ಇತರ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭವಾಯಿತು. ಬಳಿಕ ಇವಿಎಂಗಳ ಎಣಿಕೆ ಆರಂಭವಾಯಿತು. ಬಿಹಾರದಲ್ಲಿ ಎನ್‌ಡಿಎ ಅಥವಾ ಮಹಾಮೈತ್ರಿಕೂಟದ ವಿಜೇತರು ಯಾರು ಎಂಬ ಝಲಕ್ ಮಧ್ಯಾಹ್ನ 12 ಗಂಟೆಯ ನಂತರ ಕಾಣಿಸಿಕೊಳ್ಳಲಿದೆ.

40 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ಮಹಾಮೈತ್ರಿಕೂಟ ಮುಖಾಮುಖಿಯಾಗಿದೆ. ಎನ್‌ಡಿಎಯಲ್ಲಿ ಬಿಜೆಪಿ 17, ಜೆಡಿಯು-16, ಎಲ್‌ಜೆಪಿ(ಆರ್)-5, ಎಚ್‌ಎಎಂ ಪಕ್ಷ-1 ಮತ್ತು ರಾಷ್ಟ್ರೀಯ ಲೋಕ ಮೋರ್ಚಾ-1 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ. ಮಹಾಮೈತ್ರಿಕೂಟದಲ್ಲಿ ಆರ್‌ಜೆಡಿ 23, ಕಾಂಗ್ರೆಸ್- 9, ವಿಐಪಿ- 3, ಸಿಪಿಐ-ಎಂಎಲ್- 3, ಸಿಪಿಐ- 1 ಮತ್ತು ಸಿಪಿಎಂ- 1 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ ಫಲಿತಾಂಶ ಹಿನ್ನೆಲೆ: ದೇವರ ಮೊರೆ ಹೋದ ಅಭ್ಯರ್ಥಿಗಳು - Candidates offer prayers

ABOUT THE AUTHOR

...view details