ಬಿಕಾನೇರ್ (ರಾಜಸ್ಥಾನ): ಇಲ್ಲಿನ ಪ್ರಖ್ಯಾತ ಅಂತಾರಾಷ್ಟ್ರೀಯ ಒಂಟೆ ಹಬ್ಬ ಶುಕ್ರವಾರ ಪರಂಪರೆಯ ನಡಿಗೆಯೊಂದಿಗೆ ಆರಂಭವಾಗಿದೆ. ಲಕ್ಷ್ಮಿನಾಥ ದೇಗುಲದಿಂದ ರಾಮ್ಪುರಿ ಹವೇಲಿ ವರೆಗೆ ಬಿಕಾನೇರ್ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಕಲೆಗಳನ್ನು ಪ್ರದರ್ಶಿಸುವ ಪರಂಪರೆಯ ನಡಿಗೆಯನ್ನ ಆಯೋಜಿಸಲಾಗಿತ್ತು. ಈ ನಡಿಗೆಯಲ್ಲಿ ದೇಶ - ವಿದೇಶಗಳ ಪ್ರವಾಸಿಗರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಆಡಳಿತಾಧಿಕಾರಿಗಳ ಉಪಸ್ಥಿತಿ: ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಮ್ರತಾ ವೃಷ್ಣಿ, ಪೊಲೀಸ್ ವರಿಷ್ಠಾಧಿಕಾರಿ ಕವೇಂದ್ರ ಸಿಂಗ್ ಸಾಗರ್, ಪಾಲಿಕೆ ಆಯುಕ್ತ ಮಯಾಂಕ್ ಮನೀಶ್, ಬಿಡಿಎ ಕಾರ್ಯದರ್ಶಿ ಅಪರ್ಣಾ ಗುಪ್ತಾ, ಸಿಇಒ ಸೋಯಿನ್‌ಲಾಲ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅನಿಲ್ ರಾಥೋಡ್, ಸಹಾಯಕ ನಿರ್ದೇಶಕ ಕಿಶನ್ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಪವನ್ ಶರ್ಮಾ ಸೇರಿದಂತೆ ಅನೇಕರು ಭಾಗಿಯಾದರು.

ಈ ನಡುವೆಯಲ್ಲಿ ಭಾಗಿಯಾದ ಜಿಲ್ಲಾಧಿಕಾರಿ ನಮ್ರತಾ ವೃಷ್ಟಿ, ಐತಿಹಾಸಿಕ ಬಿಕಾನೇರ್ ಪರಂಪರೆ ನಮ್ಮ ಸಂಸ್ಕೃತಿ ಹಂಚಿಕೊಳ್ಳುತ್ತದೆ. ಅದರ ಬಣ್ಣವೂ ಜಗತ್ತಿನ ಪ್ರವಾಸೋದ್ಯಮ ಭೂಪಟದಲ್ಲಿ ಹರಡಿದೆ. ಈ ಉತ್ಸವಕ್ಕೆ ಆಗಮಿಸಿರುವ ಎಲ್ಲ ಸ್ಥಳೀಯ ಭಾಗಿದಾರರು ಮತ್ತು ಪ್ರವಾಸಿಗರಿಗೆ ಸ್ವಾಗತ ಕೋರುತ್ತೇವೆ ಎಂದ ಅವರು ಈ ಸಂಸ್ಕೃತಿಯಲ್ಲಿ ಭಾಗಿಯಾಗುವ ಮೂಲಕ ಇದನ್ನು ಆಹ್ಲಾದಿಸುವಂತೆ ಕರೆ ನೀಡಿದರು.
ಗಮನ ಸೆಳೆದ ದೊಡ್ಡ ದೊಡ್ಡ ಪೇಟಗಳು: ಈ ನಡಿಗೆಯಲ್ಲಿ ಜಾನಪದ ಕಲಾವಿದ ಪವನ್ ವ್ಯಾಸ್ ಅವರು 2 ಸಾವಿರದ 25 ಅಡಿಯ ದೊಡ್ಡ ಪೇಟವನ್ನು ಧರಿಸಿ ದಾಖಲೆ ನಿರ್ಮಿಸಿದರು. ಈ ಕಾರ್ಯಕ್ರಮದಲ್ಲಿ ನಗಡಾ, ಮಶ್ಕ್, ಚಂಗ್ ಮತ್ತು ಕೊಳಲುಗಳ ವಾದನದ ಜೊತೆಗೆ ಭಜನೆಗಳು ಕೇಳಿ ಬಂದವು. ಮಥೆರನ್ ಬಂದೇಜ್, ಕುಂಬಾರಿಕೆ, ಗೋಲ್ಡನ್ ಪೆನ್ ಕಟ್ಟುವಿಕೆ ಕೌಶಲ್ಯಗಳ ಪ್ರದರ್ಶನ ಕಂಡು ಬಂತು. ಜಾನಪದ ಕಲಾವಿದರು ತಮ್ಮ ಒಂಟೆಗಳನ್ನು ಅದ್ಬುತವಾಗಿ ಅಲಂಕರಿಸಿರುವುದು ಎಲ್ಲರ ಗಮನ ಸೆಳೆಯಿತು. ಬಳೆ, ಶೂ ಮತ್ತು ಚಕ್ರದ ಮೇಲೆ ಮಣ್ಣಿನ ಮಡಕೆ ತಯಾರಿಸುವ ಕಲೆ ಎಲ್ಲರ ಮೆಚ್ಚುಗೆ ಪಡೆಯಿತು. ಐತಿಹಾಸಿಕ ರಮ್ಮತ್ ನಗರದಲ್ಲಿ ಐತಿಹಾಸಿಕ ಸಬ್ಜಿ ಬಜಾರ್ (ತರಕಾರಿ ಮಾರುಕಟ್ಟೆ) ಚೌಕ ಎಲ್ಲರ ಆಕರ್ಷಣೆಯ ಕೇಂದ್ರವಾಯಿತು.

ಬಿಕಾನೇರ್ ಸ್ವಾದ: ಇಲ್ಲಿನ ಪ್ರಸಿದ್ಧ ತಿನಿಸುಗಳಾದ ಬುಜಿಯಾ, ಗೇವರ್ ಮತ್ತು ಜಿಲೇಬಿಯನ್ನು ಜನರು ಇಷ್ಟಪಟ್ಟು ಆಸ್ವಾದಿಸಿದರು . ಮರೂನಯಾಕ್ ಚೌಕ್ ಬಳಿ ಬ್ಲಾಕ್ ಮತ್ತು ಸ್ಕ್ರೀನ್ ಪ್ರಿಂಟಿಂಗ್ ಪ್ರದರ್ಶಿಸಲಾಯಿತು. ಸಂಪ್ರದಾಯಿಕ ಆಹಾರ ತಯಾರಿಕೆ ಪ್ರದರ್ಶನವನ್ನು ಮೊಹತ್ ಚೌಕ್ ಬಳಿ ಅನಾವರಣ ಮಾಡಲಾಯಿತು. ಭಾಗಿದಾರರು ಇಲ್ಲಿ ಕಚೋರಿ ಮತ್ತು ರಾಬರಿ ಮಾಡಿದರು. ಗುಂಗುರ್ ಹಾಗೂ ಮತ್ತು ತೊಗಲು ಗೊಂಬೆಯಾಟಗಳನ್ನು ಜಾನಪದ ಕಲಾವಿದರು ಪ್ರದರ್ಶಿಸಿದರು. ಇಲ್ಲಿನ ಸಂಸ್ಕೃತಿಯನ್ನು ಹತ್ತಿರದಿಂದ ಕಂಡ ಪ್ರವಾಸಿಗರು ಮನ ಸೋತರು. ಇನ್ನು ಈ ನಡಿಗೆಯು ರಾಂಪುರಿಯ ಹವೇರಿಯಲ್ಲಿ ಅಂತ್ಯಗೊಂಡಿದ್ದು, ಅಲ್ಲಿ ಉತ್ಸಕಲಾ, ಅರಮನೆ ಸಂಗೀತ ಮತ್ತು ಕಚ್ಚಿ ಗೊರ ನೃತ್ಯದ ನಾಟಕವನ್ನು ಪ್ರದರ್ಶಿಸಲಾಯಿತು.

ಸೆಲ್ಪಿಯಲ್ಲಿ ಮುಳುಗಿದ ಜನ: ಈ ಪಾರಂಪರಿಕಾ ನಡಿಗೆಯಲ್ಲಿ ಜನರು ವರ್ಣರಂಜಿತ ಉತ್ಸವದ, ಸಂಸ್ಕೃತಿಯ ಪ್ರದರ್ಶನದ ನಡುವೆ ಸೆಲ್ಫಿಗೆ ಮುಗಿಬಿದ್ದರು. ಅನೇಕ ಸ್ಥಳದಲ್ಲಿ ಸ್ಥಳೀಯ ಪ್ರವಾಸಿಗರನ್ನು ಹೂವಿನ ಮಾಲೆಯೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು.
ಒಂಟೆ ಸ್ಪರ್ಧೆ: ಎರಡನೇ ದಿನ ಒಂಟೆ ಸ್ಪರ್ಧೆಯನ್ನು ಜುನಾಗಢದಿಂದ ಕರ್ಣಿ ಸಿಂಗ್ ಸ್ಟೆಡಿಯಂವರೆಗೆ ಆಯೋಜಿಸಲಾಗಿದೆ. ಇದೇ ವೇಳೆ ಒಂಟೆ ನೃತ್ಯ, ಒಂಟೆ ರೇಸ್ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಗಳನ್ನು ಕರ್ಣಿ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ .
ಇದನ್ನೂ ಓದಿ: ಎರಡೂ ಕೈಗಳಿಂದ ಬರೆಯುವ ವಿದ್ಯಾರ್ಥಿಗಳು: ಮಹಾರಾಷ್ಟ್ರದಲ್ಲೊಂದು ವಿಶಿಷ್ಟ ಶಾಲೆ
ಇದನ್ನೂ ಓದಿ: ಐಆರ್ಸಿಟಿಸಿಯಿಂದ ಸೂಪರ್ ಟೂರ್: ಕಣ್ತುಂಬಿಕೊಳ್ಳಿ ಖಜುರಾಹೊದ ಪುರಾತನ ಸೌಂದರ್ಯ & ಗ್ವಾಲಿಯರ್‌ನ ಭವ್ಯತೆ