ಕರ್ನಾಟಕ

karnataka

ETV Bharat / bharat

ದೇಶದ ಅತಿ ದುಬಾರಿ ನಗರವಾಗಿಯೇ ಮುಂದುವರೆದ ಮುಂಬೈ: ನಂತರದ ಸ್ಥಾನದಲ್ಲಿದೆ ದೆಹಲಿ: ಬೆಂಗಳೂರಿನ ಸ್ಥಾನವೆಷ್ಟು? - most expensive city - MOST EXPENSIVE CITY

ಮುಂಬೈ ದೇಶದ ಅತ್ಯಂತ ದುಬಾರಿ ನಗರವಾಗಿದೆ ಎಂದು ಸಮೀಕ್ಷೆ ಹೇಳಿದೆ. ದೇಶದಲ್ಲಿ ಭಾರತದ ನಂತರ ದೆಹಲಿ ಎರಡನೇ ಅತಿ ದುಬಾರಿ ನಗರವಾಗಿದೆ. ನಮ್ಮ ಬೆಂಗಳೂರು ಈ ಪಟ್ಟಿಯಲ್ಲಿ 195ನೇ ಸ್ಥಾನದಲ್ಲಿದ್ದು ಕಳೆದ ಬಾರಿಗಿಂತ 6 ಸ್ಥಾನ ಕುಸಿತ ಕಂಡಿದೆ.

ದೇಶದ ಅತಿ ದುಬಾರಿ ನಗರವಾಗಿ ಮುಂದುವರೆದ ಮುಂಬೈ
ದೇಶದ ಅತಿ ದುಬಾರಿ ನಗರವಾಗಿ ಮುಂದುವರೆದ ಮುಂಬೈ (IANS (ಸಂಗ್ರಹ ಚಿತ್ರ))

By ETV Bharat Karnataka Team

Published : Jun 17, 2024, 12:31 PM IST

ಮುಂಬೈ : ದೇಶದ ಆರ್ಥಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈ ಮಹಾನಗರವು ದೇಶದ ಅತ್ಯಂತ ದುಬಾರಿ ನಗರಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಇದರ ನಂತರದ ಸ್ಥಾನದಲ್ಲಿದೆ. ಏಷ್ಯಾದ ದುಬಾರಿ ದೇಶಗಳ ಪಟ್ಟಿಯಲ್ಲಿ ಮುಂಬೈ ಮತ್ತು ದೆಹಲಿ ಮೇಲ್ಮಟ್ಟಕ್ಕೇರಿವೆ. ಮುಂಬೈ ಆರು ಸ್ಥಾನ ಮೇಲೇರಿದರೆ, ದೆಹಲಿ ಎರಡು ಸ್ಥಾನ ಮೇಲೇರಿದೆ.

ಇದರ ಪರಿಣಾಮವಾಗಿ ಮುಂಬೈ ಈಗ ಏಷ್ಯಾದ 21 ನೇ ಅತ್ಯಂತ ದುಬಾರಿ ನಗರವಾಗಿದೆ ಮತ್ತು ದೆಹಲಿ 30 ನೇ ಸ್ಥಾನದಲ್ಲಿದೆ ಎಂದು ಮರ್ಸರ್​ನ (Mercer) '2024 ಜೀವನ ವೆಚ್ಚ ಸಮೀಕ್ಷೆ' ತಿಳಿಸಿದೆ.

"ಜಾಗತಿಕ ಆರ್ಥಿಕ ಸವಾಲುಗಳ ಎದುರಿನಲ್ಲಿ ಭಾರತವು ಬಹುತೇಕ ದೃಢವಾಗಿ ನಿಂತಿದೆ" ಎಂದು ಮರ್ಸರ್​ನ ಇಂಡಿಯಾ ಮೊಬಿಲಿಟಿ ಲೀಡರ್ ರಾಹುಲ್ ಶರ್ಮಾ ಹೇಳಿದರು.

ಭಾರತೀಯ ಆರ್ಥಿಕತೆಯು ಗಮನಾರ್ಹ ಬೆಳವಣಿಗೆಯಾಗುತ್ತಿದೆ. ಮುಖ್ಯವಾಗಿ ದೇಶೀಯ ಬೇಡಿಕೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸೇವಾ ವಲಯದಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಉದ್ಯೋಗ ಬೆಳವಣಿಗೆ, ಹೆಚ್ಚುತ್ತಿರುವ ಮಧ್ಯಮ ವರ್ಗ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯಂತಹ ಅಂಶಗಳು ದೇಶದ ಜೀವನ ವೆಚ್ಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ ಎಂದು ಸಮೀಕ್ಷೆ ತಿಳಿಸಿದೆ.

"ದುಬಾರಿ ನಗರಗಳ ಶ್ರೇಯಾಂಕದಲ್ಲಿ ಮುಂಬೈನ ಏರಿಕೆಯ ಹೊರತಾಗಿಯೂ, ಭಾರತೀಯ ನಗರಗಳಲ್ಲಿ ಒಟ್ಟಾರೆಯಾಗಿ ಕೈಗೆಟುಕುವಿಕೆಯ ಮಟ್ಟದಲ್ಲಿ ಜೀವಿಸುವ ಅನುಕೂಲತೆಗಳು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅಥವಾ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಬಯಸುವ ಭಾರತೀಯ ಕಂಪನಿಗಳಿಗೆ ಪ್ರಮುಖ ಅಂಶಗಳಾಗಿವೆ" ಎಂದು ಶರ್ಮಾ ಹೇಳಿದರು.

ಜಾಗತಿಕವಾಗಿ, ಹಾಂಕಾಂಗ್ ಮತ್ತೊಮ್ಮೆ ವಾಸಿಸಲು ಅತ್ಯಂತ ದುಬಾರಿ ನಗರವಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ದುಬಾರಿ ನಗರಗಳ ಪಟ್ಟಿಯಲ್ಲಿ ಈ ವರ್ಷ ಮುಂಬೈ 11 ಸ್ಥಾನ ಮೇಲಕ್ಕೇರಿ 136 ನೇ ಸ್ಥಾನದಲ್ಲಿದೆ.

ಜಾಗತಿಕ ದುಬಾರಿ ನಗರಗಳ ಪಟ್ಟಿಯಲ್ಲಿರುವ ಇತರ ಭಾರತೀಯ ನಗರಗಳು ಹೀಗಿವೆ:

  • ನವದೆಹಲಿ 164 ನೇ ಸ್ಥಾನದಲ್ಲಿ (4 ಸ್ಥಾನ ಮೇಲೇರಿದೆ)
  • ಚೆನ್ನೈ 189 ನೇ ಸ್ಥಾನದಲ್ಲಿದೆ (5 ಸ್ಥಾನ ಕುಸಿದಿದೆ)
  • ಬೆಂಗಳೂರು 195ನೇ ಸ್ಥಾನ (6 ಸ್ಥಾನ ಕುಸಿದಿದೆ)
  • ಹೈದರಾಬಾದ್ 202 ನೇ ಸ್ಥಾನ
  • ಪುಣೆ 205ನೇ ಸ್ಥಾನ
  • ಕೋಲ್ಕತಾ 207ನೇ ಸ್ಥಾನ

ಇಂಧನ ಮತ್ತು ದಿನಬಳಕೆ ವಸ್ತುಗಳ ವಿಷಯದಲ್ಲಿ ಮುಂಬೈ ಮತ್ತು ಪುಣೆ ಅತ್ಯಂತ ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ : ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ ಖಚಿತ: ಕೇಂದ್ರ ಸಚಿವ ಮೇಘವಾಲ್ ಸ್ಪಷ್ಟನೆ - New Criminal Laws

ABOUT THE AUTHOR

...view details