ETV Bharat / spiritual

ಮಹಾ ಶಿವರಾತ್ರಿಯಂದೇ ಶಿವನನ್ನು ಏಕೆ ಪೂಜಿಸಲಾಗುತ್ತದೆ?: ಜನರ ನಂಬಿಕೆ ಏನು? ಜ್ಯೋತಿಷಿಗಳು ಹೇಳುವುದಿಷ್ಟು! - WHY IS LORD SHIVA WORSHIPPED

ಭಾರತದಾದ್ಯಂತ ಭೋಲೆನಾಥನ ಆರಾಧನೆ ಜೋರಾಗಿ ಸಾಗಿದೆ. ಎಲ್ಲ ಮಂದಿರಗಳಲ್ಲಿ ಹರ್ - ಹರ್ ಮಹಾದೇವ್ ಪ್ರತಿಧ್ವನಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಇವತ್ತೇ ಶಿವನನ್ನು ಏಕೆ ಆರಾಧಿಸಬೇಕು ಗೊತ್ತಾ?

why-is-lord-shiva-worshipped-on-mahashivratri-know-the-belief-from-astrologer
ಮಹಾ ಶಿವರಾತ್ರಿಯಂದೇ ಶಿವನನ್ನು ಏಕೆ ಪೂಜಿಸಲಾಗುತ್ತದೆ?: ಜನರ ನಂಬಿಕೆ ಏನು? ಜ್ಯೋತಿಷಿಗಳು ಹೇಳುವುದಿಷ್ಟು! (ETV Bharat)
author img

By ETV Bharat Karnataka Team

Published : Feb 26, 2025, 12:45 PM IST

ಹರಿದ್ವಾರ, ಉತ್ತರಾಖಂಡ: ಇಂದು ಮಹಾಶಿವರಾತ್ರಿ, ದೇಶಾದ್ಯಂತ ಶಿವನ ಆರಾಧನೆ ಭರ್ಜರಿ ಆಗಿಯೇ ನಡೆಯುತ್ತಿದೆ. ಭಕ್ತರು ಭೋಲೆನಾಥನಿಗೆ ದುಗ್ಧಾಭಿಷೇಕ ಮತ್ತು ರುದ್ರಾಭಿಷೇಕವನ್ನು ಶಿವಾಲಯಗಳಲ್ಲಿ ನಡೆಸುತ್ತಿದ್ದಾರೆ. ವಿವಿಧೆಡೆ ಶಿವಾಲಯಗಳಲ್ಲಿ ಭಂ.. ಭಂ ಭೋಲೆನಾಥ್ ಜಯಘೋಷದೊಂದಿಗೆ ಅನುರಣಿಸುತ್ತಿದೆ.

ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ನಡೆಯಿತು ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಈ ಹಬ್ಬವನ್ನು ಮಹಾಶಿವರಾತ್ರಿ ಎಂದು ಪೂಜಿಸಲಾಗುತ್ತದೆ. ಭಗವಾನ್ ಭೋಲೆನಾಥನನ್ನು ಮಹಾಶಿವರಾತ್ರಿಯಂದು ಪೂಜಿಸಲಾಗುತ್ತದೆ.

ಹರಿದ್ವಾರದ ಪ್ರಸಿದ್ಧ ಜ್ಯೋತಿಷಿ ಪಂಡಿತ್ ಮನೋಜ್ ತ್ರಿಪಾಠಿ ಈ ಬಗ್ಗೆ ಹೇಳುವುದಿಷ್ಟು: ಮಹಾಶಿವರಾತ್ರಿಯ ದಿನದಂದು ಭಗವಾನ್ ಭೋಲೆನಾಥನು ತಾಯಿ ಪಾರ್ವತಿಯ ತಪಸ್ಸಿಗೆ ಸಂತುಷ್ಟನಾಗಿ ಅವಳನ್ನು ಶಿವಲಿಂಗದ ರೂಪದಲ್ಲಿ ಸ್ವೀಕರಿಸಿದನು. ಈ ದಿನ ಶಿವ, ಪಾರ್ವತಿಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುವುದಾಗಿ ಭರವಸೆ ನೀಡಿದ್ದನು. ಮೊದಲಿಗೆ ಪಾರ್ವತಿಯನ್ನು ತಪಸ್ಸಿನ ಮೂಲಕ ಪರೀಕ್ಷಿಸಿದ ಬಳಿಕ ಶಿವ ಒಪ್ಪಿಕೊಂಡ. ಹೀಗಾಗಿಯೇ ಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿಯರ ಸಂಗಮದ ದಿನ ಎಂದು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ: ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ, ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಬಹಳವೇ ಮುಖ್ಯ. ಈ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಎಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ನಡೆಯಿತು ಎಂಬ ಧಾರ್ಮಿಕ ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ದಿನಾಂಕದಂದು ಮಹಾಶಿವರಾತ್ರಿಯನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ ಎಂದು ಜ್ಯೋತಿಷಿ ಮನೋಜ್ ತ್ರಿಪಾಠಿ ಹೇಳಿದ್ದಾರೆ.

ವರ್ಷದಲ್ಲಿ ನಡೆಯುತ್ತವೆ 12 ಶಿವರಾತ್ರಿ: ಶಿವರಾತ್ರಿಯನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಹೀಗೆ ಒಂದು ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳು ಬರುತ್ತವೆ. ಈ ದಿನದಂದು ಮಹಾದೇವ ಮತ್ತು ತಾಯಿ ಪಾರ್ವತಿಗೆ ವಿಶೇಷ ಪೂಜೆ ಮತ್ತು ಉಪವಾಸ ಆಚರಣೆ ಮೂಲಕ ಸ್ಮರಿಸಲಾಗುತ್ತದೆ.

ಶಿವನನ್ನು ಪ್ರಸನ್ನಗೊಳಿಸುವುದು ಹೇಗೆ? ಈ ಪ್ರಶ್ನೆಗೆ ಮನೋಜ್ ತ್ರಿಪಾಠಿ ಹೇಳುವುದೇನು?: ದೇವರು ಒಂದು ಕ್ಷಣದಲ್ಲಿ ಕೋಪಗೊಳ್ಳುತ್ತಾನೆ ಮತ್ತು ಆ ಕ್ಷಣದಲ್ಲೇ ಸಂತುಷ್ಟನಾಗುತ್ತಾನೆ. ಭಗವಾನ್ ಭೋಲೆನಾಥನನ್ನು ಮನವೊಲಿಸುವುದು ಸುಲಭ. ಭಗವಾನ್ ಭೋಲೇನಾಥ್ ನಿಮ್ಮ ಸಣ್ಣ ಪ್ರಯತ್ನಗಳಿಂದಲೂ ಸಂತೋಷ ಪಡುತ್ತಾನೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಒಬ್ಬರ ಇಷ್ಟಾರ್ಥವನ್ನು ಪೂರೈಸಲು ನಾಲ್ಕು ಗಂಟೆಗಳ ಪೂಜೆಯನ್ನು ಮಾಡಲಾಗುತ್ತದೆ. ಈ ನಾಲ್ಕು ಗಂಟೆಗಳ ಪೂಜೆಯಲ್ಲಿ ದೇವರಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ ಎಂದು ಮನೋಜ್ ತ್ರಿಪಾಠಿ ತಿಳಿಸಿದರು.

ಸಾಮಾನ್ಯ ರುದ್ರಾಭಿಷೇಕದಲ್ಲಿ ಬಳಸುವ ವಸ್ತುವನ್ನು ಮಹಾ ಶಿವರಾತ್ರಿಯ ಪೂಜೆಯ ಸಮಯದಲ್ಲಿ 5 ಪಟ್ಟು ಹೆಚ್ಚು ಬಳಸಲಾಗುತ್ತದೆ. ಭಗವಾನ್ ಭೋಲೆನಾಥನ 1008 ನಾಮಗಳನ್ನು ಪಠಿಸಲಾಗುತ್ತದೆ. ಆಗ ಮಾತ್ರ ದೇವರು ನಿಮ್ಮ ಹೃದಯದ ಬಯಕೆಯನ್ನು ಪೂರೈಸುತ್ತಾನೆ ಅಂತಾರೆ ಜ್ಯೋತಿಷಿ ಪಂಡಿತ್ ಮನೋಜ್ ತ್ರಿಪಾಠಿ.

ರಾತ್ರಿಯಿಡೀ ಭೋಲೆನಾಥನಿಗೆ ಹಾಲು, ಮೊಸರು, ಜೇನುತುಪ್ಪ ಮತ್ತು ಕಬ್ಬಿನ ರಸ ಇತ್ಯಾದಿಗಳಿಂದ ಅಭಿಷೇಕ ಮಾಡುತ್ತಾರೆ. ಬಿಲ್ವಪತ್ರೆ ಮೂಲಕ ಶಿವನನ್ನು ವಿಶೇಷ ಆರಾಧನೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.