ಮೆಡಾರಂ(ತೆಲಂಗಾಣ): ಮೇಡಾರಂ ಮಹಾ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಡೊಳ್ಳು ಬಾರಿಸುವ ಸಡಗರದ ನಡುವೆ ಪಗಿದ್ದರಾಜು (ಸಮ್ಮಕ್ಕನ ಪತಿ) ಮೇಡಾರಂ ತಲುಪಲಿದ್ದಾರೆ. ಜಾತ್ರೆ ನಿಮಿತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಹಾ ಜಾತ್ರೆಗೆ ತೆಲಂಗಾಣ ಸಾರಿಗೆ ನಿಗಮ ವಿಶೇಷ ಬಸ್ಗಳನ್ನ ಬಿಟ್ಟಿದೆ. ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯಗಳನ್ನು ಬಿಂಬಿಸುವ ತೆಲಂಗಾಣ ಕುಂಭ ಮೇಳ ಮೇಡಾರಂ ಮಹಾ ಜಾತ್ರೆ ಬುಧವಾರದಿಂದ ಆರಂಭವಾಗುತ್ತಿದೆ. ಎರಡು ವರ್ಷಕ್ಕೊಮ್ಮೆ ಮಾಘ ಮಾಸದ ಹುಣ್ಣಿಮೆಯಂದು ಈ ಜಾತ್ರೆ ನಡೆಯುವುದು ಸಂಪ್ರದಾಯ. ಕಳೆದ ಬುಧವಾರ ಮಂದಮೇಳಿಗೆ ಉತ್ಸವದೊಂದಿಗೆ ಜಾತ್ರೆ ಉದ್ಘಾಟನೆಗೊಂಡಿದೆ. ಕಾಡು ತೊರೆದು ಬರುವ ವನದೇವತೆಗಳ ಆಗಮನದೊಂದಿಗೆ ನಿಜವಾದ ಮಹಾ ಜಾತ್ರೆ ಆರಂಭವಾಗುತ್ತದೆ.
ಲಕ್ಷಾಂತರ ಜನರ ಮಧ್ಯೆ ಸಮ್ಮಕ್ಕ ಸರಳಮ್ಮ, ಪಗಿದ್ದರಾಜು ಗೋವಿಂದರಾಜರ ಆಗಮನವಾಗಲಿದೆ. ಬುಧವಾರದಿಂದ ಆರಂಭವಾಗುವ ಜಾತ್ರೆಗೆ ಮೆಹಬೂಬಾಬಾದ್ ಜಿಲ್ಲೆಯ ಗಂಗಾರಾಂ ಮಂಡಲದ ಪೂನುಗೊಂಡಾಲದ ಪಗಿದ್ದರಾಜು ಅವರು ಇಂದು ಡೊಳ್ಳು ಬಾರಿಸುವವರೊಂದಿಗೆ ಶಿವಸಟ್ಟುಲು(ಭಕ್ತರ) ಕುಣಿತದ ನಡುವೆ ಮೇಡಾರಂಗೆ ತೆರಳಲಿದ್ದಾರೆ. ದೇವಸ್ಥಾನದಿಂದ ಆರಂಭವಾದ ಸ್ವಾಮಿಯ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗಿತು. ಕಾಡಿನ ಹಾದಿಯಲ್ಲಿ 70 ಕಿಲೋಮೀಟರ್ ನಡೆದು ನಾಳೆ ಸಂಜೆ ಮೆಡಾರಂಗೆ ತಲುಪಲಿದ್ದಾರೆ. ಆ ವೇಳೆಗೆ ಕನ್ನೆಪಲ್ಲಿಯಿಂದ ಸರಳಮ್ಮ ಹಾಗೂ ಏತೂರು ನಗರಂ ಮಂಡಲದ ಕೊಂಡಾಯಿಯಿಂದ ಗೋವಿಂದರಾಜ್ ಸಿಂಹಾಸನ ಏರಲಿದ್ದಾರೆ.