ಹೈದರಾಬಾದ್(ತೆಲಂಗಾಣ): ರಾಮೋಜಿ ಗ್ರೂಪ್ ಸಂಸ್ಥಾಪಕರಾದ ದಿವಂಗತ ರಾಮೋಜಿ ರಾವ್ ಅವರ 88ನೇ ಜನ್ಮದಿನದ ಸ್ಮರಣಾರ್ಥವಾಗಿ ಇಂದು ಮಾರ್ಗದರ್ಶಿ ಚಿಟ್ ಫಂಡ್ ಮೂರು ಹೊಸ ಶಾಖೆಗಳನ್ನು ಉದ್ಘಾಟಿಸಲಾಯಿತು. ವನಪರ್ಥಿ, ಶಂಶಾಬಾದ್ ಮತ್ತು ಹೈದರಾಬಾದ್ನ ಹಸ್ತಿನಾಪುರದಲ್ಲಿ ನೂತನ ಶಾಖೆಗಳನ್ನು ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ರಾಮೋಜಿ ಫಿಲ್ಮ್ ಸಿಟಿಯಿಂದ ವರ್ಚುಯಲ್ ಮೂಲಕ ಉದ್ಘಾಟಿಸಿದರು.
ಈ ಮೂಲಕ ಕಳೆದ ಆರು ದಶಕಗಳಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೇವೆ ನೀಡುತ್ತಿರುವ ಮಾರ್ಗದರ್ಶಿ ಇಂದು 118 ಶಾಖೆಗಳಿಗೆ ವಿಸ್ತರಿಸಿದೆ. ಮಾರ್ಗದರ್ಶಿ ಎಂ.ಡಿ.ಶೈಲಜಾ ಕಿರಣ್ ಅವರು ಮೊದಲು ಇಂದು (ಶನಿವಾರ) ಬೆಳಗ್ಗೆ ವನಪರ್ಥಿ ಜಿಲ್ಲಾ ಕೇಂದ್ರದಲ್ಲಿ 116ನೇ ಶಾಖೆಯನ್ನು ಉದ್ಘಾಟಿಸಿ, ಸಿಬ್ಬಂದಿಗೆ ಶುಭಾಶಯ ಕೋರಿದರು. ಸಿಇಇ ಮಧುಸೂದನ್, ಉಪಾಧ್ಯಕ್ಷ ಬಲರಾಮಕೃಷ್ಣ ದೀಪ ಬೆಳಗಿಸಿ ಶಾಖೆಯ ಚಟುವಟಿಕೆಗೆ ಚಾಲನೆ ನೀಡಿದರು.
ಸಂಜೆ 4 ಗಂಟೆಗೆ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್ ಮಂಡಲದ ರಾಳ್ಲಗೂಡದಲ್ಲಿ 117ನೇ ಶಾಖೆಯನ್ನು ಉದ್ಘಾಟಿಸಲಾಯಿತು. ಸಿಇಒ ಸತ್ಯನಾರಾಯಣ ಹಾಗೂ ಶಾಖಾ ವ್ಯವಸ್ಥಾಪಕ ಅರುಣ್ ಕುಮಾರ್ ದೀಪ ಬೆಳಗಿಸುವ ಮೂಲಕ ಶಾಖೆಯ ಚಟುವಟಿಕೆಯನ್ನು ಪ್ರಾರಂಭಿಸಿದರು. ಬಳಿಕ 118ನೇ ಶಾಖೆಯನ್ನು ರಂಗಾರೆಡ್ಡಿ ಜಿಲ್ಲೆಯ ಹಸ್ತಿನಾಪುರದಲ್ಲಿ ಉದ್ಘಾಟಿಸಲಾಯಿತು. ಈ ವೇಳೆ ನಿರ್ದೇಶಕ ವೆಂಕಟಸ್ವಾಮಿ ಇದ್ದರು.