ಪ್ರಯಾಗ್ರಾಜ್ (ಉತ್ತರ ಪ್ರದೇಶ) :ನಾಗಾ ಸಾಧುಗಳು ಎಂದರೆ ಯಾರು? ಅವರ ಪ್ರಾಮುಖ್ಯತೆ ಏನು? ಮತ್ತು ನಾಗನಾಗುವ ನಿಯಮಗಳು ಮತ್ತು ನಿಬಂಧನೆಗಳು ಯಾವುವು? ಎಂಬ ಬಗ್ಗೆ ಜ್ಯೋತಿಷಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಜಿ ಮಹಾರಾಜ್ ಅವರು ಮಾತನಾಡಿದ್ದಾರೆ.
ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದರು ನಾಗ ಎಂಬ ಪದವು ನಾಗನಿಂದ ಬಂದಿದೆ ಎಂದು ವಿವರಿಸುತ್ತಾರೆ. ನಾಗ್ ಎಂದರೆ ಪರ್ವತ. ಚಲಿಸದ, ಒಂದೇ ಸ್ಥಳದಲ್ಲಿ ಸ್ಥಿರವಾಗಿರುತ್ತದೆ. ಅದರ ಹೆಸರು ನಾಗ್. ಅದರ ಅರ್ಥ ದೃಢವಾದ, ಶಕ್ತಿಯ ಸಂಕೇತ. ಎಂದಿಗೂ ನುಣುಚಿಕೊಳ್ಳುವುದಿಲ್ಲ, ಕದಲುವುದಿಲ್ಲ. ಅಂತಹ ಸಿದ್ಧಾಂತವನ್ನು ಹೊಂದಿರುವ ವ್ಯಕ್ತಿಯನ್ನು ನಾಗ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.
ನಾಗಾಗಳು ಏಕೆ ಬೆತ್ತಲೆಯಾಗಿ ಉಳಿಯುತ್ತಾರೆ?:ಒಬ್ಬ ವ್ಯಕ್ತಿಯು ಸನ್ಯಾಸ ತೆಗೆದುಕೊಂಡಾಗ ಅವನು ಎಲ್ಲವನ್ನೂ ತೊರೆದು ಉತ್ತರದ ಹಿಮಾಲಯದ ಕಡೆಗೆ ಸಂಪೂರ್ಣವಾಗಿ ಬೆತ್ತಲೆಯಾಗಿ ಚಲಿಸುತ್ತಾನೆ. ಈ ಸಮಯದಲ್ಲಿ ಗುರುಗಳು ಅವರನ್ನು ತಡೆದು ಸಾಧನೆ ಮಾಡಲು ಆದೇಶಿಸಿಸುತ್ತಾರೆ.
ಬಟ್ಟೆಯಿಲ್ಲದೇ ಬದುಕುವ ತಪಸ್ವಿಗಳನ್ನು ನಾಗರೆಂದು ಕರೆಯುತ್ತಾರೆ. ಅವರನ್ನು ದಿಗಂಬರ ಎಂದೂ ಕರೆಯುತ್ತಾರೆ. ಅಂದರೆ, ಸನಾತನ ಧರ್ಮದಲ್ಲಿ, ನಾಗಾ ಸಾಧುಗಳು ತಮ್ಮ ಜೀವನದಲ್ಲಿ ದೇವರ ಭಕ್ತಿಯಲ್ಲಿ ಮಗ್ನರಾಗಿರುವವರು ಮತ್ತು ಎಂದಿಗೂ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಕರೆಯಲ್ಪಡುತ್ತಾರೆ.
ನಾಗಾಗಳ ಪ್ರಾಮುಖ್ಯತೆ ಏನು ?:ಪ್ರಾಚೀನ ಕಾಲದಲ್ಲಿ ಅನೇಕ ಆಕ್ರಮಣಕಾರರು ತಮ್ಮ ಧರ್ಮವನ್ನು ಹರಡಲು ಇತರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಆ ಆಕ್ರಮಣಕಾರರನ್ನು ತಡೆಯಲು ಈ ನಾಗಾ ಸಾಧುಗಳು ಮುಂದೆ ಬಂದು ಅನೇಕ ಯುದ್ಧಗಳನ್ನು ಮಾಡಿದರು. ನಾಗಾಗಳು ತಮ್ಮ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಈ ಕಾರಣದಿಂದಾಗಿ, ಅವರ ಮಹತ್ವ ಮತ್ತು ಹಿರಿಮೆಯು ಸಾಮಾನ್ಯ ಜನರ ಮನಸ್ಸಿನಲ್ಲಿ ಮತ್ತಷ್ಟು ಹೆಚ್ಚಾಯಿತು. ಅವರು ಧೈರ್ಯಶಾಲಿ ವ್ಯಕ್ತಿ, ಧರ್ಮದ ರಕ್ಷಕ ಮತ್ತು ಧಾರ್ಮಿಕ ನಾಯಕ ಎಂದು ಗುರುತಿಸಲ್ಪಟ್ಟರು.
ಇವರು ಸಮರ ಕಲೆ ಪ್ರವೀಣರೂ ಕೂಡಾ ಹೌದು:ನಾಗಾ ಸಾಧುಗಳು ಹಿಂದೂ ಧಾರ್ಮಿಕ ಸಾಧುಗಳಾಗಿದ್ದು, ಅವರು ಯಾವಾಗಲೂ ಬೆತ್ತಲೆಯಾಗಿರುತ್ತಾರೆ ಮತ್ತು ಸಮರ ಕಲೆಗಳಲ್ಲಿ ಪ್ರವೀಣತೆಯನ್ನೂ ಕೂಡಾ ಪಡೆದುಕೊಂಡಿರುತ್ತಾರೆ. ಅವರು ವಿವಿಧ ಅಖಾಡಾಗಳಲ್ಲಿ ತಮ್ಮ ವಾಸಸ್ಥಾನ ಹೊಂದಿದ್ದಾರೆ. ಹೆಚ್ಚಿನ ನಾಗಾ ಸಾಧುಗಳು ಜುನಾ ಅಖಾರಾದಲ್ಲಿದ್ದಾರೆ. ನಾಗಾ ಸಾಧುಗಳು ಅಖಾಡದಲ್ಲಿ ವಾಸಿಸುವ ಸಂಪ್ರದಾಯವನ್ನು ಆದಿಗುರು ಶಂಕರಾಚಾರ್ಯರು ಪ್ರಾರಂಭಿಸಿದರು.
ಇದನ್ನೂ ಓದಿ :ಮಹಾಕುಂಭ ಮೇಳ: 3.5 ಕೋಟಿ ಭಕ್ತರು, ಸಾಧು - ಸಂತರಿಂದ 'ಅಮೃತ ಸ್ನಾನ' - MAHAKUMBHA MELA