ಪಲಾಮು (ಜಾರ್ಖಂಡ್): ಮಧ್ಯಪ್ರದೇಶದ ಇಟಾರ್ಸಿಯ ವಿವಾಹಿತೆಯೊಬ್ಬಳು ತನ್ನ ಪ್ರಿಯಕರನ ಹುಡುಕಿಕೊಂಡು ಜಾರ್ಖಂಡ್ನ ಪಲಾಮು ತಲುಪಿದ್ದಳು. ಆಪಾದಿತ ಪ್ರೇಮಿಯ ಮನೆಯ ಹೊರಗೆ ಆಕೆ ಗಂಟೆಗಳ ಕಾಲ ಪ್ರತಿಭಟಿಸಿದ್ದಳು. ಬಳಿಕ ಪೊಲೀಸರೇ ಮಧ್ಯಪ್ರವೇಶಿಸಿ ವಿವಾಹಿತೆಯನ್ನು ಆಕೆಯ ಪ್ರಿಯಕರನ ಮನೆಯಲ್ಲಿ ಇರುವಂತೆ ಮಾಡಿದ್ದಾರೆ. ಇತ್ತ ತನ್ನ ಗೆಳತಿ ಮನೆಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಆರೋಪಿ ಪ್ರೇಮಿ ಪರಾರಿಯಾಗಿದ್ದಾನೆ. ಈ ಘಟನೆ ಪಲಮುವಿನ ಹುಸೇನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಯುವಕನ ಪರಿಚಯ:ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಪಲಮುವಿನ ದಿಯೋರಿ ನಿವಾಸಿ ಸೋನು ಕುಮಾರ್, ಕೆಲವು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಲ್ಲಿಯೇ ಸೋನು ಮಧ್ಯಪ್ರದೇಶದ ಇಟಾರ್ಸಿಯ ನಿವಾಸಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಸ್ವಲ್ಪ ಸಮಯದ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಆಕೆಗೆ ಮೊದಲೇ ಮದುವೆಯಾಗಿತ್ತು.
ಸೋನು ಮದುವೆ:ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ ನಂತರ ಸೋನು ಪಲಮುವಿನ ದಿಯೋರಿಯಲ್ಲಿರುವ ತನ್ನ ಮನೆಗೆ ಮರಳಿದ್ದ. ಕಳೆದ ವಾರ ಸೋನು ಮದುವೆಯಾದ. ಈ ವಿಷಯ ಸೋನುವಿನ ಗೆಳತಿಗೆ ತಿಳಿದಿದೆ. ಕೂಡಲೇ ಆಕೆ ಸೋನುವನ್ನು ಹುಡುಕುತ್ತಾ ಪಲಮುವಿನ ದಿಯೋರಿಗೆ ಬಂದಿದ್ದಾಳೆ.