ಪುಣೆ (ಮಹಾರಾಷ್ಟ್ರ): ಆಹಾರ ಪ್ರಿಯರ ನಗರ ಎಂದು ಪ್ರಸಿದ್ಧಿ ಪಡೆದಿರುವ ಪುಣೆ ನಗರದಲ್ಲಿ ಚಿಕ್ಕ ಹೋಟೆಲ್ ನಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳ ವರೆಗೆ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಈ ಹಿನ್ನೆಲೆ ಆಹಾರಕ್ಕಾಗಿ ದಿನ ನಿತ್ಯ ಸಾವಿರಾರು ಜನರು ಹೋಟೆಲ್ಗಳಿರುವ ಪ್ರದೇಶಗಳಿಗೆ ಆಗಮಿಸುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಟ್ರಾಫಿಕ್ ಸಮಸ್ಯೆಯಿಂದ ಸವಾರರು ಪರದಾಡುತ್ತಿದ್ದಾರೆ. ಇದನ್ನು ತಡೆಯಲು ಮೊಟ್ಟ ಮೊದಲ ಬಾರಿಗೆ ಮಹಿಳಾ ಬೌನ್ಸರ್ಗಳನ್ನು ನೇಮಕ ಮಾಡಲಾಗಿದೆ.
ಹೌದು, ಪುಣೆಯ ಡಿಪಿ ರಸ್ತೆಯಲ್ಲಿರುವ ಹೌಸಿಂಗ್ ಸೊಸೈಟಿ ಎಂಬ ಪ್ರದೇಶದಲ್ಲಿ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೊರೆಂಟ್ಗಳು ಇವೆ. ಹೀಗಾಗಿ ಇಲ್ಲಿ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ನಿತ್ಯವೂ ಈ ಪ್ರದೇಶಕ್ಕೆ ಸಾವಿರಾರು ಜನರು ಆಹಾರಕ್ಕಾಗಿ ಆಗಮಿಸುತ್ತಾರೆ. ಇಲ್ಲಿನ ಹೋಟೆಲ್ಗಳಲ್ಲಿ ಟೀ, ಕಾಫಿಯಿಂದ ಹಿಡಿದು ವಿವಿಧ ರುಚಿಕರವಾಗಿರುವ ಆಹಾರ ಪದಾರ್ಥಗಳನ್ನು ಸವಿಯುವ ಕಾರಣದಿಂದ ಹೆಚ್ಚಿನ ಜನರು ಇಲ್ಲಿಗೆ ಆಗಮಿಸಿ ರುಚಿಯನ್ನು ಆಸ್ವಾದಿಸುತ್ತಾರೆ. ಜತೆಗೆ ಮನೆಗೆಳಿಗೂ ತೆಗೆದುಕೊಂಡು ಹೋಗುತ್ತಾರೆ.
ಈ ಪ್ರದೇಶದಲ್ಲಿ ವಿವಿಧ ಬಗೆಯ ಆಹಾರ ದೊರೆಯುವುದರಿಂದ ಬೆಳಗಾದರೇ ಸಾಕು ಈ ರಸ್ತೆಯೂ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಹಾಗಾಗಿ ಇದೇ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ದಿನವೂ ಸಮಸ್ಯೆ ಎದುರಿಸುವಂತಾಗಿದೆ. ಪರಿಣಾಮ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ವಾಹನ ಸವಾರರು ರೋಸಿ ಹೋಗಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕರಿಗೆ ಮತ್ತು ಸಂಬಂಧ ಪಟ್ಟ ಸೊಸೈಟಿ ಅಧ್ಯಕ್ಷರಿಗೆ ದೂರನ್ನೂ ಕೂಡಾ ನೀಡಲಾಗಿದೆ. ಆದರೆ, ಬರುವ ಜನರು ಈ ಬಗ್ಗೆ ಕೇರ್ ಮಾಡುತ್ತಿಲ್ಲ.