ಕರ್ನಾಟಕ

karnataka

ETV Bharat / bharat

ಪಿಒಕೆ ಇಲ್ಲದೇ ಜಮ್ಮು- ಕಾಶ್ಮೀರ ಅಪೂರ್ಣ, ಪಾಕಿಸ್ತಾನ ಉಗ್ರರಿಗೆ ನೆರವು ನಿಲ್ಲಿಸಲಿ: ರಾಜನಾಥ್​ ಸಿಂಗ್​ - RAJNATH SINGH ON PAKISTAN

ಜಮ್ಮುವಿನ ಅಖ್ನೂರ್​​ನಲ್ಲಿ ಇಂದು ನಡೆದ 9ನೇ ಸಶಸ್ತ್ರ ಪಡೆಗಳ ಹಿರಿಯರ ದಿನದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಪಾಕ್​ ವಿರುದ್ಧ ಗುಡುಗಿದರು.

ರಕ್ಷಣಾ ಸಚಿವ ರಾಜನಾಥ್​ ಸಿಂಗ್
ರಕ್ಷಣಾ ಸಚಿವ ರಾಜನಾಥ್​ ಸಿಂಗ್ (ANI)

By ETV Bharat Karnataka Team

Published : Jan 14, 2025, 4:59 PM IST

ಜಮ್ಮು :ಪಾಕ್ ಆಕ್ರಮಿತ ಕಾಶ್ಮೀರವಿಲ್ಲದೇ (ಪಿಒಕೆ) ಜಮ್ಮು ಮತ್ತು ಕಾಶ್ಮೀರ ಅಪೂರ್ಣ. ಪಾಕಿಸ್ತಾನವು ಪಿಒಕೆಯನ್ನು ಉಗ್ರ ತಾಣವನ್ನಾಗಿ ಮಾಡಿಕೊಂಡು, ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

ಮಂಗಳವಾರ ಇಲ್ಲಿ ನಡೆದ 9ನೇ ಸಶಸ್ತ್ರ ಪಡೆಗಳ ಹಿರಿಯರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಒಕೆ ಭಾರತಕ್ಕೆ ಸೇರಿದ್ದು ಎಂದು ಗೊತ್ತಿದ್ದರೂ, ಪಾಕಿಸ್ತಾನವು ತನ್ನ ಉದ್ಧಟನತನ ಮುಂದುವರಿಸಿದೆ. ಅಲ್ಲಿ ಭಯೋತ್ಪಾದಕ ನೆಲೆಗಳನ್ನು ಸೃಷ್ಟಿಗೆ ನೆರವು ನೀಡುತ್ತಿದೆ. ಇದನ್ನು ಆ ದೇಶವು ಮೊದಲು ನಿಲ್ಲಿಸಬೇಕು ಎಂದು ಚಾಟಿ ಬೀಸಿದರು.

ಪಿಒಕೆ ಇಲ್ಲದೇ ಭಾರತದ ಜಮ್ಮು ಮತ್ತು ಕಾಶ್ಮೀರ ಪೂರ್ಣವಾಗದು. ಪಿಒಕೆ ಪಾಕಿಸ್ತಾನಕ್ಕೆ ಸಂಬಂಧವಿರದ ಪ್ರದೇಶವಾಗಿದೆ. ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು, ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಪಾಕ್​ ಕುತಂತ್ರಕ್ಕೆ ತಕ್ಕ ಉತ್ತರ:ಭಾರತದೊಂದಿಗಿನ ಪ್ರತಿ ಸಂಘರ್ಷದಲ್ಲೂ ಪಾಕಿಸ್ತಾನ ಸೋಲು ಕಂಡಿದೆ. ಆದಾಗ್ಯೂ ಅದು, ಕೀಟಲೆ ಮುಂದುವರಿಸಿದೆ. 1965 ರಿಂದ ಹಿಡಿದು ಇಲ್ಲಿಯವರೆಗೂ ಪಾಕಿಸ್ತಾನವು ಭಾರತದ ಎದುರು ನಿಲ್ಲುವ ಶಕ್ತಿ ತೋರಿಸಿಲ್ಲ. ಪಾಕ್​ ಸೇನೆಯ ಎಲ್ಲ ಕುತಂತ್ರಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದರು.

ಉಗ್ರರು ಅಕ್ರಮವಾಗಿ ಭಾರತದ ಗಡಿಯೊಳಗೆ ನುಗ್ಗಲು ಪಾಕಿಸ್ತಾನ ಸೇನೆ ಅನುವು ಮಾಡಿಕೊಡುತ್ತಿದೆ. 1965ರ ಸಂಘರ್ಷದಲ್ಲಿ ಭಾರತ ಸರ್ಕಾರ ಕಠಿಣ ನಿಯಮ ತಾಳಿದ್ದರೆ, ಅಂದೇ ಈ ನುಸುಳುವಿಕೆಗೆ ತಿಲಾಂಜಲಿ ಹಾಡ ಬಹುದಿತ್ತು. ಆದರೆ, ಅಂದಿನ ಸರ್ಕಾರ ಪಾಕಿಸ್ತಾನ ಸೋಲಿನ ಪ್ರಯೋಜನವನ್ನ ಪಡೆದುಕೊಳ್ಳಲಿಲ್ಲ ಎಂದು ಹೇಳಿದರು.

ಭಾರತದೊಳಗೆ ಪ್ರವೇಶಿಸುವ ಭಯೋತ್ಪಾದಕರಲ್ಲಿ ಶೇಕಡಾ 80 ಕ್ಕೂ ಹೆಚ್ಚು ಜನರು ಪಾಕಿಸ್ತಾನಿಗಳು. ದೆಹಲಿ ಮತ್ತು ಜಮ್ಮು- ಕಾಶ್ಮೀರದ ಜನರ ನಡುವಿನ ಹೃದಯದ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಹೊಸದಾಗಿ ಚುನಾಯಿತವಾಗಿರುವ ಸರ್ಕಾರವೂ ಇದೇ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂಬ ಭರವಸೆ ಇದೆ ಎಂದರು.

ಇದನ್ನೂ ಓದಿ:ಜಮ್ಮು - ಕಾಶ್ಮೀರದಲ್ಲಿ ನೆಲಬಾಂಬ್‌ ಸ್ಫೋಟ: 6 ಸೈನಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

ABOUT THE AUTHOR

...view details