ಕಾರ್ಗಿಲ್ (ಲಡಾಖ್): ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಇಂದು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.0 ಎಂದು ಅಳೆಯಲಾಗಿದೆ. ಭೂಕಂಪದ ಆಳವು ಭೂಮಿಯ ಮೇಲ್ಮೈಯಿಂದ ಐದು ಕಿಲೋಮೀಟರ್ ಒಳಗೆ ಇದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಈ ಮಾಹಿತಿಯನ್ನು ನೀಡಿದೆ. ಸದ್ಯ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ದೊರೆತಿಲ್ಲ. ಭೂಕಂಪದ ಅನುಭವವಾದ ತಕ್ಷಣ ಜನರು ಭಯಭೀತರಾಗಿದ್ದರು.
ಚೀನಾದಲ್ಲಿ ಪ್ರಬಲ ಭೂಕಂಪ: ಚೀನಾದ ವಾಯವ್ಯ ಕ್ಸಿನ್‌ಜಿಯಾಂಗ್ ಪ್ರದೇಶದ ಅಕಿ ಕೌಂಟಿಯಲ್ಲಿ ಇಂದು ಮಧ್ಯಾಹ್ನ 12:14 ಕ್ಕೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಈ ಮಾಹಿತಿಯನ್ನು ನೀಡಿದೆ.
ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರದ ಪ್ರಕಾರ, ಭೂಕಂಪವು ಸುಮಾರು 11 ಕಿಲೋಮೀಟರ್ (6.8 ಮೈಲಿಗಳು) ಆಳದಲ್ಲಿ ಸಂಭವಿಸಿದೆ. ಚೀನಾದ ಸ್ಥಳೀಯ ಅಧಿಕಾರಿಗಳ ಪ್ರಕಾರ, ಭೂಕಂಪನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದೆ. ಆದರೆ, ಯಾವುದೇ ಪ್ರಾಣಹಾನಿ ಅಥವಾ ಮನೆ ಕುಸಿತದ ಬಗ್ಗೆ ಇನ್ನೂ ವರದಿಯಾಗಿಲ್ಲ. ಭೂಕಂಪದ ಕೇಂದ್ರಬಿಂದುವಿನ ಸುತ್ತಲಿನ ಪ್ರದೇಶಗಳು ಅತಿಯಾದ ಜನಸಂಖ್ಯೆಯನ್ನು ಹೊಂದಿವೆ.