ETV Bharat / state

ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಶುಭಸುದ್ದಿ: 5,000 ರೂಪಾಯಿ ಸಹಾಯಧನ ಘೋಷಣೆ

ಹಿಂದೂ ಧಾರ್ಮಿಕ ಕ್ಷೇತ್ರಗಳ ಯಾತ್ರಾರ್ಥಿಗಳಿಗೆ ಸಹಾಯಧನ ನೀಡುವ ಕುರಿತಂತೆ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ವೈಷ್ಣೋದೇವಿ ದೇವಾಲಯ ಯಾತ್ರಾರ್ಥಿಗಳಿಗೆ ಸಹಾಯಧನ ಘೋಷಣೆ
ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಸಹಾಯಧನ ಘೋಷಣೆ (ETV Bharat)
author img

By ETV Bharat Karnataka Team

Published : Nov 14, 2024, 7:57 AM IST

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ರಾಜ್ಯದ ಯಾತ್ರಾರ್ಥಿಗಳಿಗೆ ತಲಾ 5,000 ರೂ ಸಹಾಯಧನ ನೀಡುವುದಾಗಿ ಮುಜರಾಯಿ ಇಲಾಖೆ ಘೋಷಿಸಿದೆ. ಜೊತೆಗೆ, ಸರ್ಕಾರದ ಬಹುಮಹಡಿಗಳ ಕಟ್ಟಡದ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದಲ್ಲಿ 'ಧಾರ್ಮಿಕ ಸೌಧ' ನಿರ್ಮಿಸಲು ಇಲಾಖೆ ತೀರ್ಮಾನಿಸಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

120 ವರ್ಷಗಳಷ್ಟು ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕೂಡಾ ತೀರ್ಮಾನಿಸಲಾಗಿದೆ.

ಇತರೆ ತೀರ್ಮಾನಗಳು:

  • ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯ ಸರ್ವೇ. ಒತ್ತುವರಿ ತೆರವುಗೊಳಿಸಿ ದಾಖಲೆ ನೀಡುವುದು.
  • ಅವಧಿ ಮುಗಿಯುವ 14 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅವಧಿ ಮುಗಿದ ನಂತರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು, ಅರ್ಜಿ ಸ್ವೀಕಾರವಾಗಿರುವ 28 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅರ್ಜಿ ಸ್ವೀಕಾರವಾಗದೇ ಇರುವ 13 ದೇವಾಲಯಗಳಿಗೆ ಪುನಃ ಅರ್ಜಿ ಕರೆಯಲು ಹಾಗೂ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಖಾಲಿ ಇರುವ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುವುದು.
  • ಸರ್ಕಾರ ನೀಡಿದ ಸೌಲಭ್ಯಗಳ ಫಲಕ ಅಳವಡಿಕೆ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾದ ಸೌಲಭ್ಯಗಳ ಬಗ್ಗೆ ಸಾರ್ವಜನಿಕ ಮಾಹಿತಿಗಾಗಿ ಪ್ರಮುಖ ದೇವಾಲಯಗಳ ಮುಂದೆ ವಿವರವಾದ ಬೋರ್ಡ್ (ಫಲಕ) ಅಳವಡಿಕೆ.
  • ಫಲಕದಲ್ಲಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅರ್ಚಕರಿಗೆ ತಲಾ 2 ಲಕ್ಷ ರೂ ಸಹಾಯಧನ, ಕಾಶಿ ಯಾತ್ರೆ, ಚಾರ್ ಧಾಮ್ ಯಾತ್ರೆ ಮತ್ತು ಮಾನಸ ಸರೋವರ ಹಾಗೂ ವೈಷ್ಣೋದೇವಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನ ಮಂಜೂರು. ಸರ್ಕಾರದ ವತಿಯಿಂದ ಭಾರತ್ ಗೌರವ್ ಯಾತ್ರೆ ಅಡಿಯಲ್ಲಿ ಕಾಶಿ, ಗಯಾ, ಅಯೋಧ್ಯೆ, ಪ್ರಯಾಗ್ ರಾಜ್ ಯಾತ್ರೆ.
  • ದಕ್ಷಿಣ ಭಾರತ ಯಾತ್ರೆ: ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ. ದ್ವಾರಕ ಯಾತ್ರೆ: ದ್ವಾರಕ, ನಾಗೇಶ್ವರ, ಸೋಮನಾಥ್, ಶ್ರೀ ತ್ರಯಂಭತೇಶ್ವರ. ಪುರಿ ಜಗನ್ನಾಥ್ ಯಾತ್ರೆ: ಪುರಿ, ಕೊನಾರ್ಕ್, ಗಂಗಾಸಾಗರ್, ಕೋಲ್ಕತಾ. ಭಾರತ್ ಗೌರವ್ ಯಾತ್ರೆ ಅಡಿಯಲ್ಲಿ ಮುಜರಾಯಿ ದೇವಾಲಯಗಳ ಅರ್ಚಕರು ಹಾಗೂ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಒಟ್ಟು 2,400 ಜನರಿಗೆ ಉಚಿತ ಯಾತ್ರೆ ವ್ಯವಸ್ಥೆ ಕಲ್ಪಿಸುತ್ತಿರುವ ಬಗ್ಗೆ ಪ್ರಕಟಿಸಲು ತೀರ್ಮಾನ.
  • ಸಿ ವರ್ಗದ ಆನುವಂಶಿಕ ಅರ್ಚಕರ ನೇಮಕಾತಿ ಅಧಿಕಾರವನ್ನು ಆಯಾ ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವುದು. ಸಿ ವರ್ಗದ ಆನುವಂಶಿಕ ಅರ್ಚಕರು ಅನಾರೋಗ್ಯ ನಿಮಿತ್ತ ಕಾರ್ಯನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅವರ ಕುಟುಂಬದವರಿಗೆ ನೇಮಕಾತಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವುದು. ಆಯಾ ಮುಜರಾಯಿ ದೇವಾಲಯಗಳ ಹಣವನ್ನು ದೇವಾಲಯಗಳಿಗೆ ಮಾತ್ರವೇ ಉಪಯೋಗಿಸಲಾಗುತ್ತಿದೆ ಎಂಬ ಮಾಹಿತಿ, ಮಾಂಗಲ್ಯ ಭಾಗ್ಯ ಯೋಜನೆಯಡಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುವ ಬಗ್ಗೆ ಫಲಕದಲ್ಲಿ ಮಾಹಿತಿ ನೀಡುವುದು.

ಇದನ್ನೂ ಓದಿ: ವಿವಾದದ ಕೇಂದ್ರಬಿಂದು ವಿಜಯಪುರದಲ್ಲಿ ವಕ್ಫ್ ಆಸ್ತಿ ಎಷ್ಟಿದೆ? ಎಷ್ಟು ಎಕರೆ ಒತ್ತುವರಿಯಾಗಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.