IND vs SA 3rd T20 Highlights: ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ 4 ಪಂದ್ಯಗಳ ಟಿ20 ಸರಣಿ (T20 Series)ಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ತಂಡ ಸರಣಿಯಲ್ಲಿ 2-1ರ ಮುನ್ನಡೆ ಪಡೆಯಿತು.
ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ತಿಲಕ್ ವರ್ಮಾ (107*) ಮತ್ತು ಅಭಿಷೇಕ್ ಶರ್ಮಾ (50) ಸ್ಫೋಟಕ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಪೇರಿಸಿತು.
ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೂಡ ಕಠಿಣ ಪ್ರತಿರೋಧ ತೋರಿತು. ಆರಂಭಿಕ ಎರಡು ಓವರ್‌ಗಳಲ್ಲಿ ಅಬ್ಬರಿಸಿ 27 ರನ್ ಕಲೆ ಹಾಕಿದರು. ಈ ವೇಳೆ ಎದುರಾಳಿ ತಂಡದ ಓಟಕ್ಕೆ ಅರ್ಷದೀಪ್ ಸಿಂಗ್ ಕಡಿವಾಣ ಹಾಕಿದರು. 20 ರನ್ ಗಳಿಸಿದ್ದ ರಿಕಲ್ಟನ್ ವಿಕೆಟ್ ಉರುಳಿಸಿದರು. ಪವರ್ ಪ್ಲೇ ಮುಕ್ತಾಯಕ್ಕೆ 3 ಓವರ್ ಬಾಕಿ ಇದ್ದಾಗ ವರುಣ್ ಚಕ್ರವರ್ತಿ ರಿಝ್ ಹೆಂಡ್ರಿಕ್ಸ್ (21) ಅವರ ವಿಕೆಟ್ ಪಡೆದರು. ಉಳಿದ ಬ್ಯಾಟರ್ಗಳ ಪೈಕಿ ಕ್ಲಾಸೇನ್ (41), ಮಾರ್ಕೋ ಜಾನ್ಸೆನ್ (54) ಉತ್ತಮ ಪ್ರದರ್ಶನ ತೋರಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ ಮಿಕ್ಕ ಬ್ಯಾಟರ್ಗಳ ಸಹಾಯದಿಂದ ದಕ್ಷಿಣ ಆಫ್ರಿಕಾ 208/7 ಗಳಿಸಲಷ್ಟೇ ಶಕ್ತವಾಯಿತು. ಭಾರತ 11 ರನ್ಗಳ ರೋಚಕ ಗೆಲುವು ಸಾಧಿಸಿತು.
For his match-winning Maiden T20I Century, Tilak Varma is adjudged the Player of the Match 👏👏
— BCCI (@BCCI) November 13, 2024
Scorecard - https://t.co/JBwOUChxmG#TeamIndia | #SAvIND | @TilakV9 pic.twitter.com/kvVhaYwOG7
ತಿಲಕ್ ವರ್ಮಾ ಶತಕದ ಸೊಗಸು: ತಿಲಕ್ ವರ್ಮಾ ಅಜೇಯ ಶತಕಸಮೇತ 107 ರನ್ ಕಲೆ ಹಾಕುವ ಮೂಲಕ ಹೊಸ ದಾಖಲೆ ಬರೆದರು. ತೆಲುಗು ಬ್ಯಾಟರ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ 12ನೇ ಭಾರತೀಯ ಎನಿಸಿಕೊಂಡರು. ಜೊತೆಗೆ ಯಶಸ್ವಿ ಜೈಸ್ವಾಲ್ (Yashasvi Jaiswal) ನಂತರ T20Iನಲ್ಲಿ ಶತಕ ಸಿಡಿಸಿದ ಕಿರಿಯ ಬ್ಯಾಟರ್ ಎನಿಸಿಕೊಂಡರು.
ಚೊಚ್ಚಲ ಶತಕ ಸಿಡಿಸಿದ ಕಿರಿಯ ಬ್ಯಾಟರ್‌ಗಳು:
- ಯಶಸ್ವಿ ಜೈಸ್ವಾಲ್ ಅವರು ನೇಪಾಳ ವಿರುದ್ಧ 2023ರಲ್ಲಿ ನಡೆದ ಟಿ20 ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಈ ವೇಳೆ ಅವರಿಗೆ 21 ವರ್ಷ 279 ದಿನ ವಯಸ್ಸಾಗಿತ್ತು.
- ಇದೀಗ ತಿಲಕ್ ವರ್ಮಾ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಆಗಿದ್ದಾರೆ. ಇವರು 22 ವರ್ಷ 5ನೇ ದಿನದಂದು ಶತಕ ಸಿಡಿಸಿ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
- ಮೂರನೇ ಸ್ಥಾನದಲ್ಲಿ ಶುಭಮನ್ ಗಿಲ್ ಇದ್ದಾರೆ. ಇವರು 23 ವರ್ಷ 146ನೇ ದಿನದಂದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದ್ದರು. 2023ರಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು.
- ಈ ಪಟ್ಟಿಯಲ್ಲಿ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಕೂಡ ಇದ್ದಾರೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧ 2010ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ್ದರು. ಈ ವೇಳೆ ಅವರಿಗೆ 23 ವರ್ಷ 156 ದಿನ ವಯಸ್ಸಾಗಿತ್ತು.
ಮುಂದಿನ ಪಂದ್ಯ: ನಾಲ್ಕನೇ ಮತ್ತು ಕೊನೆಯ ಟಿ20 ಪಂದ್ಯ ನ.15ರಂದು ಜೋಹ್ನ್ಸ್ಬರ್ಗ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಗೊಯೆಂಕಾ ವಿಷಯ ಅಲ್ಲವೇ ಅಲ್ಲ, ಆ 2 ಕಾರಣಕ್ಕೆ ನಾನು ಲಕ್ನೋ ತೊರೆದೆ: ಕೆ.ಎಲ್.ರಾಹುಲ್