ಅಮರಾವತಿ (ಆಂಧ್ರಪ್ರದೇಶ): ಹಾವುಗಳು ಸಹಜವಾಗಿ ಕಪ್ಪು, ಕಂದು ಬಣ್ಣದಲ್ಲಿ ಬರುತ್ತವೆ. ಮಾನವನ ಆವಾಸ್ಥ ಸ್ಥಾನದಿಂದ ದೂರದಲ್ಲಿ ಬದುಕುವ ಅವು ಆಗಾಗ್ಗೆ ಜನರ ಮಧ್ಯೆ ಗೋಚರಿಸುವುದುಂಟು. ಇಂತಿಪ್ಪ, ಆಂಧ್ರಪ್ರದೇಶದಲ್ಲಿ ಬಂಗಾರದ ಹಾವು ಕಂಡುಬಂದಿದೆ.
ಗಾಬರಿ ಬೇಡ. ಬಂಗಾರದ ಹಾವು ಎಂದರೆ, ಥೇಟ್ ಬಂಗಾರದ್ದೇ ಅಲ್ಲ. ಚಿನ್ನದ ಹೊಳಪಿನ ನಾಗರಹಾವು ಇದಾಗಿದೆ. ವಿಶಾಖದ ಯಾರಾಡ ಡಾಲ್ಫಿನ್ ಹಿಲ್ಸ್ನಲ್ಲಿರುವ ನೌಕಾಪಡೆಯ ಕ್ವಾರ್ಟರ್ಸ್ನಲ್ಲಿ ಇಂಥದ್ದೊಂದು ಹಾವು ಪತ್ತೆಯಾಗಿದೆ. ಇದರ ಹೆಡೆ ಮತ್ತು ದೇಹದ ಭಾಗ ಚಿನ್ನದಂತೆ ಹೊಳೆಯುತ್ತಿದೆ.
ಹಾವುಗಳ ಸಂರಕ್ಷಕ ನಾಗರಾಜ್ ಎಂಬುವರು ಈ ಚಿನ್ನದ ನಾಗರಹಾವನ್ನು ಹಿಡಿದಿದ್ದಾರೆ. ನೌಕಾಪಡೆಯ ನೌಕರರೊಬ್ಬರು ಶೆಡ್ನಲ್ಲಿ ಕಾರನ್ನು ತೆಗೆಯುವಾಗ ಈ ಸರೀಸೃಪ ಕಂಡುಬಂದಿದೆ. ತಕ್ಷಣವೇ ನಾಗರಾಜ್ ಅವರಿಗೆ ಮಾಹಿತಿ ನೀಡಲಾಗಿತ್ತು. ಹಾವಿನ ಮುಂಭಾಗ ಮತ್ತು ಹಿಂಭಾಗ ಚಿನ್ನದ ಬಣ್ಣ ಹೊಂದಿದೆ. ಬಂಗಾರದ ಹಾವನ್ನು ಕಂಡ ಸ್ಥಳೀಯರು ಕುತೂಹಲ ವ್ಯಕ್ತಪಡಿಸಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಇಂಥಹದ್ದೇ ಹಾವನ್ನು ನೋಡಿದ್ದೆ ಎಂದು ಹಾವು ಹಿಡಿಯುವ ನಾಗರಾಜ್ ಅವರು
ಇದನ್ನೂ ಓದಿ: Watch.. ನಾಗರಹಾವು - ಮುಂಗುಸಿ ನಡುವೆ ರಣಭೀಕರ ಕಾಳಗ: ಕೊನೆಯಲ್ಲೊಂದು ಬಿಗ್ ಟ್ವಿಸ್ಟ್