ETV Bharat / bharat

ಪ್ರಧಾನಿ ಮೋದಿ ದೇಶದ ಅತಿ ಪ್ರಭಾವಿ ವ್ಯಕ್ತಿ: ರಾಹುಲ್​ ಗಾಂಧಿಗೆ 4ನೇ ಸ್ಥಾನ, ನಾಯ್ಡು ಪವರ್​ಫುಲ್​ ಸಿಎಂ - NARENDRA MODI

ದೇಶದ ಅತಿ ಪ್ರಭಾವಿ ರಾಜಕಾರಣಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರಿದಿದ್ದಾರೆ. ನಂತರದಲ್ಲಿ ಅಮಿತ್​ ಶಾ ಇದ್ದರೆ, ರಾಹುಲ್​ ಗಾಂಧಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ಮಿಂಚಿದ್ದಾರೆ.

ಪ್ರಧಾನಿ ಮೋದಿ ದೇಶದ ಅತಿ ಪ್ರಭಾವಿ ವ್ಯಕ್ತಿ
ಪ್ರಧಾನಿ ಮೋದಿ ದೇಶದ ಅತಿ ಪ್ರಭಾವಿ ವ್ಯಕ್ತಿ (ETV Bharat)
author img

By ETV Bharat Karnataka Team

Published : Nov 13, 2024, 8:14 PM IST

ನವದೆಹಲಿ: ದೇಶದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಪಟ್ಟಿಯನ್ನು ಮಾಧ್ಯಮ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​​ಎಸ್​​ಎಸ್​) ಮುಖ್ಯಸ್ಥರಾದ ಮೋಹನ್​ ಭಾಗವತ್​ ಎರಡನೇ, ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಅವರ ಮೂರನೇ ಪವರ್​ಫುಲ್​​ ರಾಜಕಾರಣಿಯಾಗಿದ್ದಾರೆ.

ದೇಶದ ರಾಜಕೀಯ ಸ್ಥಿತಿ ಮತ್ತು 2024 ರಲ್ಲಿ ನಾಯಕರ ಕಾರ್ಯಕ್ಷಮತೆ ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಬಂದಿಲ್ಲ ಎಂದು ತಿಳಿಸಿದೆ.

60 ವರ್ಷಗಳ ದಾಖಲೆ ಪುಡಿ: ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ 60 ವರ್ಷಗಳ ದಾಖಲೆಯನ್ನು ತಿದ್ದಿ ಬರೆದಿದ್ದಾರೆ. ಒಂದೆಡೆ ಅಮೆರಿಕ, ಇನ್ನೊಂದೆಡೆ ರಷ್ಯಾ, ಉಕ್ರೇನ್​, ಇಸ್ರೇಲ್​ ಜೊತೆಗೆ ಸೌಹಾರ್ದ ಸಂಬಂಧವನ್ನು ಏಕಕಾಲಕ್ಕೆ ಉಳಿಸಿಕೊಂಡು ಭಾರತದ ಆರ್ಥಿಕತೆಯನ್ನು 4 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದು ಅವರ ವರ್ಚಸ್ಸನ್ನು ಹೆಚ್ಚಿಸಿದೆ ಎಂದಿದೆ ಸಮೀಕ್ಷೆ.

ಪ್ರಧಾನಿಯ ಕಣ್ಣು ಮತ್ತು ಕಿವಿ: ಪ್ರಧಾನಿ ಮೋದಿ ನಂತರ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ಹೆಸರಾಗಿರುವ ಅಮಿತ್ ಶಾ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಪ್ರಧಾನಿಯ ಕಣ್ಣು ಮತ್ತು ಕಿವಿಯಂತೆ ಕೆಲಸ ಮಾಡುತ್ತಾರೆ. ಕೇಂದ್ರದ ಪ್ರತಿಯೊಂದು ನಿರ್ಧಾರವು ಅವರ ಅನುಮೋದನೆಯ ನಂತರ ಜಾರಿಗೆ ಬರುತ್ತದೆ.

ಆರ್​ಎಸ್​ಎಸ್​​ನ ಮುಖ್ಯಸ್ಥ ಮೋಹನ್​ ಭಾಗವತ್ ಅವರು ಎರಡನೇ ಸ್ಥಾನದಲ್ಲಿದ್ದು ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ವಿಶೇಷವೆಂದರೆ, ಸತತ ಟೀಕೆಗಳಿಗೆ ಗುರಿಯಾಗಿದ್ದ ರಾಹುಲ್​ ಗಾಂಧಿ ಅವರು ಪ್ರಭಾವಿ ರಾಜಕಾರಣಿಗಳ ಪಟ್ಟಿಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ದೇಶದ ಅತಿ ಪ್ರಭಾವಿಗಳಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಅಲಂಕರಿಸಿದ್ದು, ಅವರ ಖ್ಯಾತಿ ಹೆಚ್ಚಿಸಿದೆ.

ಸಿಎಂಗಳಲ್ಲಿ ಬಾಬು ಸ್ಟ್ರಾಂಗ್​: ಇನ್ನೂ, ಮುಖ್ಯಮಂತ್ರಿಗಳ ಪೈಕಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ದೇಶದ ಅತ್ಯಂತ ಶಕ್ತಿಶಾಲಿ ಮುಖ್ಯಮಂತ್ರಿ ಎಂದು ಗುರುತಿಸಲ್ಪಟ್ಟಿದ್ದಾರೆ. 2019ರ ಚುನಾವಣೆಯಲ್ಲಿ ಸೋಲಿನ ನಂತರ ಜೈಲು ಪಾಲಾದರು. ಬಳಿಕ 2024ರ ಚುನಾವಣೆಯಲ್ಲಿ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿ, ಕೇಂದ್ರ ಸರ್ಕಾರದಲ್ಲೂ ಮಹತ್ವದ ಪಾಲುದಾರಿಕೆ ಪಡೆದರು.

ಬಿಹಾರದ ಸಿಎಂ ನಿತೀಶ್ ಕುಮಾರ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ತಮಿಳುನಾಡು ಸಿಎಂ ಸ್ಟಾಲಿನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ವಯನಾಡ್ ಉಪಚುನಾವಣೆ: ಭಾವನೆ, ಕಣ್ಣೀರು, ಸಾಂತ್ವನಕ್ಕೆ ಸಾಕ್ಷಿಯಾದ ಮತಗಟ್ಟೆಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.