ETV Bharat / bharat

Watch.. ಅಪರೂಪದ ಘಟನೆ: ಒಂದೇ ಬಸ್​ನ ಕಂಡಕ್ಟರ್​ ಮತ್ತು ಡ್ರೈವರ್​ ಆಗಿ ಕರ್ತವ್ಯ ನಿರ್ವಹಿಸಿದ ತಾಯಿ - ಮಗ!

ಕೇರಳದ ಕೆಎಸ್‌ಆರ್‌ಟಿಸಿ ಸ್ವಿಫ್ಟ್ ಬಸ್​ ಡ್ರೈವರ್​ ಆಗಿ ನೇಮಕಗೊಂಡಿರುವ ಮಗ, ಕಂಡಕ್ಟರ್‌ ಆಗಿರುವ ತನ್ನ ತಾಯಿ ಜೊತೆ ಮೊದಲನೇ ದಿನ ಕರ್ತವ್ಯ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಶ್ರೀರಾಗ್ ಮತ್ತು ಯಮುನಾ
ಶ್ರೀರಾಗ್ ಮತ್ತು ಯಮುನಾ (ETV Bharat)
author img

By ETV Bharat Karnataka Team

Published : Nov 12, 2024, 8:32 PM IST

ತಿರುವನಂತಪುರಂ(ಕೇರಳ): ಇಲ್ಲಿನ ಕನ್ನಮ್ಮೂಲ ಮತ್ತು ವೈದ್ಯಕೀಯ ಕಾಲೇಜು ನಡುವೆ ಸಂಚರಿಸಿದ ಕೆಎಸ್‌ಆರ್‌ಟಿಸಿ ಸ್ವಿಫ್ಟ್ ಬಸ್​ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಹೌದು, ಇತ್ತೀಚಿಗೆ ಕೆಎಸ್‌ಆರ್‌ಟಿಸಿ ಸ್ವಿಫ್ಟ್ ಬಸ್​ಗೆ ಡ್ರೈವರ್​ ಆಗಿ ನೇಮಕಗೊಂಡಿರುವ ಶ್ರೀರಾಗ್ ಆರ್.ವೈ ಎಂಬುವವರು, ಕಂಡಕ್ಟರ್‌ ಆಗಿರುವ ತನ್ನ ತಾಯಿ ಯಮುನಾ ಆರ್ ಅವರ ಜೊತೆ ಮೊದಲನೇ ದಿನ ಕರ್ತವ್ಯ ನಿರ್ವಹಿಸಿ ಎಲ್ಲರ ಗಮನ ಸೆಳೆದರು. ಡ್ರೈವರ್​ ಮಗನೊಂದಿಗೆ ಕಂಡಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದ ತಾಯಿ ಸಂತಸಪಟ್ಟರು.

ಯಮುನಾ ಅವರು 2009 ರಿಂದ ಕೆಎಸ್‌ಆರ್‌ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2022 ಕೆಎಸ್‌ಆರ್‌ಟಿಸಿಯು ಹೊಸದಾಗಿ ಕೆ - ಸ್ವಿಫ್ಟ್ ಬಸ್​ ಸೇವೆ ಪ್ರಾರಂಭಿಸಿತು. ಇದಕ್ಕೆ ಮೊದಲ ಮಹಿಳಾ ಕಂಡಕ್ಟರ್ ಆಗಿ ಯಮುನಾ ನಿಯೋಜನೆಗೊಂಡರು. ತನ್ನ ಮಗ ಶ್ರೀರಾಗ್ ಡ್ರೈವರ್ ಆಗಬೇಕು ಎಂದು ಯಮುನಾ ಕನಸು ಕಂಡಿದ್ದರು. ನಾಲ್ಕು ತಿಂಗಳ ಹಿಂದೆ ಯಮುನಾ ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಹುದ್ದೆ ಖಾಲಿ ಇರುವ ಬಗ್ಗೆ ತಿಳಿದುಕೊಂಡು ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮಗನಿಗೆ ತಿಳಿಸಿದ್ದರು.

ಒಂದೇ ಬಸ್​ನ ಕಂಡಕ್ಟರ್​ ಮತ್ತು ಡ್ರೈವರ್​ ಆಗಿ ಕರ್ತವ್ಯ ನಿರ್ವಹಿಸಿದ ತಾಯಿ - ಮಗ (ETV Bharat)

ಯಮುನಾ ಮಾತನಾಡಿ, "ನನ್ನ ಮಗನಿಗೆ ಬಾಲ್ಯದಿಂದಲೂ ಡ್ರೈವಿಂಗ್‌ ಬಗ್ಗೆ ಹೆಚ್ಚು ಒಲವಿತ್ತು. ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಚಾಲಕನಾಗಿದ್ದ ಶ್ರೀರಾಗ್ ಲೈಸೆನ್ಸ್ ಹೊಂದಿದ್ದ. ಕೆಲ ತಿಂಗಳ ಹಿಂದೆ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಇತ್ತೀಚಿಗೆ ಕೆ - ಸ್ವಿಫ್ಟ್ ಬಸ್​ ಚಾಲಕನನ್ನಾಗಿ ಶ್ರೀರಾಗ್ ನೇಮಕಗೊಂಡಿದ್ದಾನೆ. ತನ್ನ ತಾಯಿಯೊಂದಿಗೆ ಮೊದಲ ದಿನ ಕರ್ತವ್ಯ ನಿರ್ವಹಿಸಬೇಕೆಂಬ ಶ್ರೀರಾಗ್‌ನ ಆಸೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಡೇರಿಸಿದ್ದಾರೆ" ಎಂದು ಸಂತಸಪಟ್ಟರು.

ಶ್ರೀರಾಗ್ ಮತನಾಡಿ, "ನಾನು ಕೆ - ಸ್ವಿಫ್ಟ್‌ನಲ್ಲಿ ಕೆಲಸ ಮಾಡಬೇಕೆಂಬುದು ನನ್ನ ತಾಯಿಯ ಆಸೆಯಾಗಿತ್ತು. ಕೆಲ ತಿಂಗಳ ಹಿಂದೆ ಡ್ರೈವರ್​ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ದರು. ವಾಹನ ಚಲಾಯಿಸುವಾಗ ನಾನು ತಪ್ಪು ಮಾಡಿದರೆ ಅಮ್ಮ ಬಂದು ತಿದ್ದುತ್ತಿದ್ದರು. ನಾನು ಜವಾಬ್ದಾರಿಯುತವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡುವುದನ್ನು ನೋಡಿ ಅವರು ತುಂಬಾ ಸಂತೋಷಪಟ್ಟರು. ಅಂದು ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡಿದೆವು. ಅಮ್ಮನೊಂದಿಗೆ ಕೆಲಸ ಮಾಡಿದ್ದು ನನಗೆ ಮರೆಯಲಾಗದ ದಿನ" ಎಂದು ಹೇಳಿದರು.

ಯಮುನಾ ಅವರ ಪತಿ ರಾಜೇಂದ್ರನ್ ಆಸಾರಿ ವರ್ಕ್‌ಶಾಪ್ ಉದ್ಯೋಗಿಯಾಗಿದ್ದರೆ, ಅವರ ಕಿರಿಯ ಮಗ ಸಿದ್ಧಾರ್ಥ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಮುನಾ ಸಿಟಿ ಡಿಪೋಗೆ ವರ್ಗಾವಣೆಗೊಂಡ ಹಿನ್ನೆಲೆ ಮಹಿಳಾ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗ ಕುಸಿತಕ್ಕೆ ಒಂದು ವರ್ಷ: ದೇಶ ಕಂಡ ಅತ್ಯುತ್ತಮ ರಕ್ಷಣಾ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.