ETV Bharat / state

ಆಹಾರ ಪದ್ಧತಿ, ಒತ್ತಡ ಮುಕ್ತ ಜೀವನ ಶೈಲಿಯಿಂದ ಶುಗರ್​ ನಿಯಂತ್ರಣ ಸಾಧ್ಯ: ವೈದ್ಯರ ಅಭಿಮತ - WORLD DIABETES DAY

ಆಹಾರ ಪದ್ಧತಿ, ಒತ್ತಡ ಮುಕ್ತ ಜೀವನ ಶೈಲಿಯಿಂದ ಶುಗರ್​ ನಿಯಂತ್ರಣ ಸಾಧ್ಯ ಎಂಬುದು ವೈದ್ಯರು ಸಲಹೆಯಾದೆಗಿ. ಈ ಕುರಿತು ಈಟಿವಿ ಭಾರತ ಮೈಸೂರು ಪ್ರತಿನಿಧಿ ಮಹೇಶ್​ ಅವರ ವಿಶೇಷ ವರದಿ ಇಲ್ಲಿದೆ.

WORLD DIABETES DAY 2024  SUGAR CONTROL DIET STRESS FREE LIFESTYLE  MYSURU
ವಿಶ್ವ ಮಧುಮೇಹ ದಿನದ ಅಂಗವಾಗಿ ವಿಶೇಷ ವರದಿ (ETV Bharat)
author img

By ETV Bharat Health Team

Published : Nov 12, 2024, 5:24 PM IST

Updated : Nov 12, 2024, 5:38 PM IST

ಮೈಸೂರು: ನವೆಂಬರ್​ 14 ರಂದು ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಕಾಯಿಲೆ ಕುರಿತು ವೈದ್ಯರು ಮತ್ತು ರೋಗಿಗಳೊಂದಿಗೆ ಈಟಿವಿ ಭಾರತ ಕನ್ನಡ ಪ್ರತಿನಿಧಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

''ಡಯಾಬಿಟಿಕ್‌ ಶೇ 60 ರಷ್ಟು ಜನರಲ್ಲಿ ಕಂಡುಬರುತ್ತದೆ. ಆದರೆ, ಡಯಾಬಿಟಿಸ್‌ ಬಗ್ಗೆ ಭಯ ಬೇಡ. ಜೀವನ ಕ್ರಮಗಳಿಂದ ಅದನ್ನು ಹತೋಟಿಗೆ ತರಬಹುದು. ಡಯಾಬಿಟಿಸ್‌ ಇರುವವರು ಹೇಗೆ ಜೀವನ ಕ್ರಮ ನಡೆಸಬೇಕು'' ಎಂಬುದರ ಬಗ್ಗೆ ಕಳೆದ 28 ವರ್ಷಗಳಿಂದ ಡಯಾಬಿಟಿಸ್ ಕಾಯಿಲೆಗೆ ತುತ್ತಾಗಿರುವ, ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಮೋಹನ್‌ ಕುಮಾರ್‌ ಅವರು ಡಯಾಬಿಟಿಕ್‌ ಕಾಯಿಲೆ ಕುರಿತು ಈಟಿವಿ ಭಾರತ ಕನ್ನಡ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಶುಗರ್​ ಕಾಯಿಲೆ ಮತ್ತು ಜೀವನ ಶೈಲಿ ಬಗ್ಗೆ ಈಟಿವಿ ಭಾರತ ಜೊತೆ ರೋಗಿಗಳು ಅನುಭವ ಹಂಚಿಕೊಂಡರು (ETV Bharat)

ಮೋಹನ್‌ ಕುಮಾರ್‌ ಹೇಳಿದ್ದು ಹೀಗೆ: ಸಕ್ಕರೆ ಕಾಯಿಲೆಯು ನಾವು ಯಾವ ಆಹಾರ ಸೇವನೆ ಮಾಡುತ್ತೇವೆ. ಅದರ ಮೇಲೆಯೂ ಕೂಡ ಆಧಾರಿತವಾಗಿ ಇರುತ್ತದೆ. ಮನುಷ್ಯನ‌ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಡಯಾಬಿಟಿಸ್ ಬರುತ್ತದೆ. ಇದರಿಂದ ಬಾಯಾರಿಕೆ, ಸುಸ್ತು, ಹೊಟ್ಟೆ ಹಸಿವು, ಕಾಲಿನಲ್ಲಿ ನೋವು ಬರುವುದು, ಈ ರೀತಿಯ ಪರಿಣಾಮಗಳು‌ ಆಗುತ್ತವೆ. ದೇಹದಲ್ಲಿ ಸಕ್ಕರೆ ಕಾಯಿಲೆಯು 120MG ಮೇಲೆ ಇದ್ದರೆ ಅವರು ಸಕ್ಕರೆ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತದೆ.

ಇದರಲ್ಲಿ ನಾಲ್ಕು ರೀತಿಯ ವಿಧಗಳು ಇದೆ. ಪ್ರಿಡಯಾಬಿಟಿಕ್, ಗ್ಯಾಸ್ ಟ್ರೊ ಡಯಾಬಿಟಿಕ್, ಟೈಪ್- 1 ಮತ್ತು ಟೈಪ್- 2 ಡಯಾಬಿಟಿಕ್ ಎನ್ನುವ ವಿಧಗಳಿವೆ. ಆದರೆ, ರಕ್ತದಲ್ಲಿ ಗ್ಲುಕೋಸ್ ಹೆಚ್ಚಿಗೆ ಆದ ಕಾರಣ, ಹಲವು ಜನರು ಟೈಪ್ 2 ಡಯಾಬಿಟಿಸ್ ಕಾಯಿಲೆಗೆ ತುತ್ತಾಗುತ್ತಾರೆ. ಕಳೆದ 28 ವರ್ಷಗಳಿಂದ ನನ್ನಗೆ ಡಯಾಬಿಟಿಸ್ ಕಾಯಿಲೆ ಇದೆ. ನಾನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದೆ. ಆವಾಗಿನ ಒತ್ತಡ ಹಾಗೂ ವಂಶಾವಳಿಯ ಕಾರಣದಿಂದ ಬಂದಿದೆ. ನಮ್ಮ ಕುಟುಂಬದಲ್ಲಿ ನನ್ನ ತಾಯಿ, ಅಣ್ಣ, ತಮ್ಮ ಎಲ್ಲರಿಗೂ ಡಯಾಬಿಟಿಸ್ ಇದೆ ಎಂದು ತಿಳಿಸಿದರು.

ಆಹಾರ ಪದ್ಧತಿ, ಒತ್ತಡ ಮುಕ್ತ ಜೀವನ ಶೈಲಿಯಿಂದ ಶುಗರ್​ ನಿಯಂತ್ರಣ ಸಾಧ್ಯ: ವೈದ್ಯರ ಅಭಿಮತ (ETV Bharat)

''ನಾವು ತೆಗೆದುಕೊಳ್ಳುವ ಆಹಾರ ಡಯಾಬಿಟಿಸ್​ಗೆ ಪ್ರಮುಖ ಕಾರಣವಾಗಿರುತ್ತದೆ. ಈಗಿನ ಕಾಲದಲ್ಲಿ ಕೇವಲ 24 ವರ್ಷಕ್ಕೆ ಡಯಾಬಿಟಿಸ್ ಬರುತ್ತದೆ. ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಹತ್ತು ಜನರಲ್ಲಿ ಆರು ಜನಕ್ಕೆ ಈ ಕಾಯಿಲೆ ಇದೆ. ಇಂದಿಗೆ ಬಹಳ ಸಾಮಾನ್ಯವಾಗಿದ್ದು, ಇದು ದೊಡ್ಡ ಕಾಯಿಲೆ ಅಲ್ಲ. ನಾನು ಕಳೆದ 28 ವರ್ಷಗಳಿಂದ ಮಾತ್ರೆ ತೆಗೆದುಕೊಳ್ಳತ್ತಿದ್ದೇನೆ. ನಮ್ಮ ಲೈಫ್ ಸ್ಟೈಲ್ ಸರಿಯಾದ ರೀತಿಯಲ್ಲಿ ಇರಬೇಕು. ನಮ್ಮ ಆಹಾರ ಪದ್ಧತಿ, ಯೋಗ ವ್ಯಾಯಾಮ, ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಯಾವ ಡಯಾಬಿಟಿಸ್ ಏನು ಮಾಡಲು ಸಾಧ್ಯವಿಲ್ಲ. ಡಯಾಬಿಟಿಸ್ ಎಂದರೆ ಭಯ ಪಡಿಸುವವರೇ ಹೆಚ್ಚು. ಅದು ತಿನ್ನಬೇಡ, ಇದು ಬೇಡ ಎಂದು ಮೋಹನ್‌ ಕುಮಾರ್‌ ಹೇಳುತ್ತಾರೆ.

ಆದರೆ, ನಾನು ಸಿಹಿ ತಿಂಡಿಗಳನ್ನು ಸಹ ತಿನ್ನುತ್ತೇನೆ. ನಿಯಮಿತವಾಗಿ ಸೇವಿಸುತ್ತೇನೆ. ಡಯಾಬಿಟಿಸ್ ಎಂದರೆ ಸ್ವಂತ ನಾವೇ ನೋಡಿಕೊಂಡು ಸರಿ ಮಾಡಿಕೊಳ್ಳುವ ಕಾಯಿಲೆ. ನಾವು ಹೇಗೆ ನಮ್ಮ ಲೈಫ್​ ಸ್ಟೈಲ್ ಹೇಗೆ ಇರುತ್ತದೆ‌ಯೋ ಅದರ ಮೇಲೆ ನಿರ್ಧಾರವಾಗುತ್ತದೆ. ಇದರಿಂದ ಭಯ ಪಡುವ ಅಗತ್ಯವಿಲ್ಲ. ವೈದ್ಯರ ಸಲಹೆ ಮತ್ತು ಆಹಾರ ಪದ್ಧತಿಯನ್ನು ಸರಿಯಾಗಿ ನಡೆಸಿಕೊಂಡು ಹೋದರೆ ಈ ಕಾಯಿಲೆ ಏನು ಮಾಡಲು ಸಾಧ್ಯವಿಲ್ಲ ಎಂದರು.

ಮನೆ ಮದ್ದಿನಲ್ಲೂ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತೆ- ಪದ್ಮನಾಭ: ''ನಾನು ಡಯಾಬಿಟಿಸ್ ಕಾಯಿಲೆಗೆ ಒಳಗಾಗಿದ್ದೇನೆ. ಮಾತ್ರೆ ಕೂಡ ತೆಗೆದುಕೊಳ್ಳತ್ತಿದ್ದೇನೆ. ಆದರೆ, ಯಾಕೋ ಮಾತ್ರೆ ತೆಗೆದುಕೊಳ್ಳಲು ಇಷ್ಟ ಇರಲಿಲ್ಲ. ನಾನು ಪುಸ್ತಕದಲ್ಲಿ ಓದಿಕೊಂಡು ಆಲೋವೆರಾ ತೆಗೆದುಕೊಳ್ಳಲು ಪ್ರಾರಂಭ ಮಾಡಿದೆ. ಅದನ್ನು ಬೆಳಗ್ಗೆ ತಿಂಡಿ ತಿನ್ನುವ ಮುನ್ನ, ನೀರಿನಿಂದ ತೊಳೆದು ಮೂರು ಇಂಚು ಅಲೋವೆರಾ ತಿನ್ನಲು ಪ್ರಾರಂಭಿಸಿದೆ. ಬೆಳಗ್ಗೆ ಎದ್ದ ತಕ್ಷಣ ಅದರ ಸಿಪ್ಪೆ ತೆಗೆದು ಮೂರು ಇಂಚು ಅಲೋವೆರಾ ಸೇವಿಸುತ್ತೇನೆ. ಮೂರು ಗಂಟೆಗಳ ಕಾಲ ತಿಂಡಿ ತಿನ್ನದೇ ಇದ್ದರೆ ಸಾಕು. ಅದರ ಪರಿಣಾಮ ಬಹಳ ಚೆನ್ನಾಗಿದೆ ಎಂದು ಮಧುಮೇಹದಿಂದ ಬಳಲುತ್ತಿರುವ ಪದ್ಮನಾಭ ಹೇಳುತ್ತಾರೆ.

ಯಾವ ಮಾತ್ರೆಯನ್ನು ಕೂಡ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸ್ವಾಭಾವಿಕವಾಗಿ ಪರಿಸರದಲ್ಲಿ ಸಿಗುವ ಇದನ್ನು ಉಪಯೋಗಿಸಿದರೆ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನನಗೆ ಕಳೆದ ವರ್ಷದಿಂದ ಈ ಕಾಯಿಲೆಯಿದೆ. ನಾನು ಅಲೋವೆರಾ ಬಿಟ್ಟು, ಬೇರೆ ಮಾತ್ರೆ ತೆಗೆದುಕೊಳ್ಳುವುದಿಲ್ಲ. ಯಾವಾಗಲೂ ನಿಸರ್ಗದತ್ತವಾಗಿ ಸಿಗುವ ಮೆಡಿಸನ್​ಗಳು ಉತ್ತಮ. ಈ ಕಾಯಿಲೆ ಬಂತು ಎಂದು ಚಿಂತೆ ಮಾಡಬಾರದು, ಭಯಪಡಬಾರದು. ನಮ್ಮ ಕೆಲಸ ಏನಿದೆಯೋ ಅದನ್ನು ಮಾಡಿಕೊಂಡು ಹೋಗಬೇಕು. ವೈದ್ಯರ ಸಲಹೆ ಪಡೆದುಕೊಂಡು ಹೆಚ್ಚಿಗೆ ಇಂಗ್ಲಿಷ್ ಮೆಡಿಸನ್ ತೆಗೆದುಕೊಳ್ಳದೇ ನೈಸರ್ಗಿಕವಾಗಿ ಸಿಗುವ ಮದ್ದುಗಳನ್ನು ಬಳಸಬೇಕು ಎಂದು ಸಲಹೆ ನೀಡುತ್ತಾರೆ.

ಒತ್ತಡ ಮುಕ್ತ ಜೀವನದಿಂದ ಶುಗರ್​ ನಿಯಂತ್ರಣ ಮಾಡಬಹುದು- ಡಾಕ್ಟರ್ ಶ್ರೀರಾಮ್: ಇದು ಎಲ್ಲರಿಗೂ ಗೊತ್ತಿರುವ ಕಾಯಿಲೆ, ಅದರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿ ಹಬ್ಬುತ್ತಿರುವ ಕಾಯಿಲೆಯಾಗಿದೆ. ಇದು ಸಾಂಕ್ರಾಮಿಕ ಮಟ್ಟಕ್ಕೆ ತಲುಪಿದೆ. 40 ವರ್ಷ ಮೇಲ್ಪಟ್ಟ ಜನರಲ್ಲಿ ಶೇಕಡ 60ರಷ್ಟು ಜನರಲ್ಲಿ ಈ ಕಾಯಿಲೆ ಕಂಡುಬರುತ್ತದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಈ ಕಾಯಿಲೆಗೆ ಮಾನಸಿಕ ಒತ್ತಡ, ಆಹಾರ ಪದ್ಧತಿ, ಮನುಷ್ಯನ ಜೀವನ ಶೈಲಿ ಹೇಗೆ ಇರುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇದನ್ನು ಎಲ್ಲರೂ ಸರಿಯಾಗಿ‌ ನಿರ್ವಹಣೆ ‌ಮಾಡಬೇಕು. ರಕ್ತ ಪರೀಕ್ಷೆ ಮಾಡಿಸಿಕೊಳ್ಳಲುವ ಮೂಲಕ ಈ ಕಾಯಿಲೆಯ ದೃಢತೆ ಮತ್ತು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ ಎಂದು ಡಾ. ಶ್ರೀರಾಮ್​ ತಿಳಿಸುತ್ತಾರೆ.

ಆಹಾರ ಪದ್ಧತಿಯಲ್ಲಿ ಬದಲಾವಣೆ, ವ್ಯಾಯಾಮ, ಯೋಗ ಇನ್ನಿತರ ಅಭ್ಯಾಸಗಳಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕೆಲವು‌ ಸಕ್ಕರೆ ಕಾಯಿಲೆಗಳು ವ್ಯಾಯಾಮದಲ್ಲಿ ನಿಯಂತ್ರಣಗೊಳ್ಳುತ್ತದೆ. ಕೆಲವು ಸಕ್ಕರೆ ಕಾಯಿಲೆಗಳು ಮಾತ್ರೆ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಈ ಸಕ್ಕರೆ ಕಾಯಿಲೆಯು ಮನುಷ್ಯನ ಅನೇಕ ಅಂಗಾಗಗಳ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮೂತ್ರಪಿಂಡ, ಕಣ್ಣು, ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈಗಿನ ಕಾಲದಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ 40 ವರ್ಷ ಮೇಲ್ಪಟ್ಟವರು ಸಕ್ಕರೆ ಕಾಯಿಲೆ ಪರೀಕ್ಷೆ ‌ಮಾಡಿಸುವುದು ಉತ್ತಮ. ಎಲ್ಲರೂ ದೈಹಿಕ ಶ್ರಮದ ಕೆಲಸ ಮಾಡಬೇಕು. ಇದರಿಂದ ಸಕ್ಕರೆ ಕಾಯಿಲೆ ಬರುವುದು ಕಡಿಮೆ ಆಗುತ್ತದೆ. ಇದರಿಂದ ಯಾರೂ ಭಯ ಪಡುವ ಅಗತ್ಯವಿಲ್ಲ. ಆಹಾರ ಪದ್ಧತಿಯನ್ನು ನಿಯಮಿತವಾಗಿ ನೋಡಿಕೊಳ್ಳಬೇಕು ಎಂದು ಡಾಕ್ಟರ್‌ ಶ್ರೀರಾಮ್‌ ಈಟಿವಿ ಭಾರತ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇವುಗಳನ್ನೂ ಓದಿ:

ಮಧುಮೇಹಕ್ಕೆ ಇದುವೇ ಉತ್ತಮ ಪರಿಹಾರ; ಸಕ್ಕರೆಯ ಪ್ರಮಾಣ ಶೇ 50ರಷ್ಟು ಕಡಿಮೆ ಮಾಡುತ್ತೆ ಈರುಳ್ಳಿ: ವಿಜ್ಞಾನಿಗಳ ಪ್ರತಿಪಾದನೆ

ಜೀವನಶೈಲಿ ಸುಧಾರಿಸುವ ಮೂಲಕ ಶುಗರ್​ ನಿಯಂತ್ರಿಸಬಹುದೇ? ಸಂಶೋಧನೆ, ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

ಮಕ್ಕಳಲ್ಲಿ ಮಧುಮೇಹ, ಬೊಜ್ಜಿನ ಸಮಸ್ಯೆ ಪತ್ತೆಗೆ ರಕ್ತ ಪರೀಕ್ಷೆ ಅಭಿವೃದ್ಧಿಪಡಿಸಿದ ಸಂಶೋಧಕರು!

ಮಧುಮೇಹ ನಿಯಂತ್ರಣ, ಮೂಳೆ, ಹಲ್ಲಿಗೆ ಬಲ ; ಜೋಳದ ರೊಟ್ಟಿ ಮ್ಯಾಜಿಕ್​ ಬಗ್ಗೆ ತಜ್ಞರ ಸಲಹೆ

ಸಕ್ಕರೆ ರೋಗದಿಂದ ಹಿಡಿದು ಅಧಿಕ ತೂಕದವರೆಗೆ ಎಲ್ಲವೂ ಮಾಯ: ಇವೆಲ್ಲದಕ್ಕೂ ರಾಗಿಯೇ ದಿವ್ಯೌಷಧ

Last Updated : Nov 12, 2024, 5:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.