ETV Bharat / state

ಹಳಿ ಮೇಲೆ ನಡೆದುಕೊಂಡು ಬರುತ್ತಿದ್ದ ಯುವಕರ ಮೇಲೆ ಹರಿದು ರೈಲು: ಮೂವರ ದುರ್ಮರಣ - YOUTH RUNS OVER BY TRAIN

ರೈಲು ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ.

Doddaballapur Railway station, train runs over, Train hits youth, ಯುವಕರ ಮೇಲೆ ಹರಿದ ರೈಲು
ದೊಡ್ಡಬಳ್ಳಾಪುರ ರೈಲು ನಿಲ್ದಾಣ (ETV Bharat)
author img

By ETV Bharat Karnataka Team

Published : Feb 20, 2025, 10:19 AM IST

ದೊಡ್ಡಬಳ್ಳಾಪುರ: ಕೆಲಸ ಮುಗಿಸಿಕೊಂಡು ಟ್ರ್ಯಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದ ದಾರುಣ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ. ಘಟನೆಯಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಹುಲ್, ಲಲ್ಲನ್ ಮತ್ತು ಬಿಕೇಶ್ ಎಂಬ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಯುವಕರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಮುತ್ತೂರಿನಲ್ಲಿ ವಾಸವಾಗಿದ್ದ ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಕೊನ್ನಘಟ್ಟ ಗ್ರಾಮದಲ್ಲಿ ಕೆಲಸ ಮುಗಿಸಿದ ಮೂವರು ಸ್ನೇಹಿತರು ಜೊತೆಯಲ್ಲಿಯೇ ಆಟೋದಲ್ಲಿ ಬಂದು ಜಗದೀಶ್ ವೃತ್ತದಲ್ಲಿ ಇಳಿದಿದ್ದರು. ಅಲ್ಲಿಂದ ಮನೆಗೆ ರೈಲ್ವೆ ಹಳೆಯ ಮೇಲೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಆಯತಪ್ಪಿ ರೈಲು ಹಳಿಗಳ ಮೇಲೆ ಬಿದ್ದಾಗ ಪುಟ್ಟಪರ್ತಿ-ಬೆಂಗಳೂರು ರೈಲು ಯುವಕರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.

ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಕುಳಿತುಕೊಳ್ಳುವ ವಿಚಾರಕ್ಕೆ ಗಲಾಟೆ : ಚಲಿಸುತ್ತಿದ್ದ ರೈಲಿನಿಂದ ತಳ್ಳಿ ವ್ಯಕ್ತಿಯ ಹತ್ಯೆ- ಇಬ್ಬರ ಬಂಧನ

ಇದನ್ನೂ ಓದಿ: ಹಳಿ ತಪ್ಪಿದ ಪ್ರಯಾಣಿಕರಿಲ್ಲದ ಮಹಾಕುಂಭದ ವಿಶೇಷ ರೈಲಿನ ಇಂಜಿನ್​: ತಪ್ಪಿದ ಅನಾಹುತ, ತನಿಖೆಗೆ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.