ಚಾಂಡಿಪುರ(ಒಡಿಶಾ): DRDO Missile: ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಲಾಂಗ್-ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಡಿಆರ್‌ಡಿಒ, ಒಡಿಶಾದ ಚಾಂಡಿಪುರದ ಬಾಲಸೋರ್ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಮಂಗಳವಾರ ಯಶಸ್ವಿಯಾಗಿ ನಡೆಸಿತು. ಮೊಬೈಲ್ ಆರ್ಟಿಕ್ಯುಲೇಟೆಡ್ ಲಾಂಚರ್ ಮೂಲಕ ಪರೀಕ್ಷೆ ನಡೆಸಲಾಗಿದೆ.
ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ (ಇಒಟಿಎಸ್) ಮತ್ತು ಟೆಲಿಮೆಟ್ರಿ ಉಪಕರಣಗಳನ್ನು ಬಳಸಿ ಕ್ಷಿಪಣಿಯ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಅಳೆಯಲಾಗಿದೆ. ತನ್ನ ಹಾರಾಟದ ಸಮಯದಲ್ಲಿ ಕ್ಷಿಪಣಿ, ಪೂರ್ವನಿರ್ಧರಿತ ಗುರಿ ತಲುಪಿದೆ. ವಿವಿಧ ಎತ್ತರ ಮತ್ತು ವೇಗಗಳಲ್ಲಿ ಕುಶಲತೆ ಪ್ರದರ್ಶಿಸಿತು. ಸುಧಾರಿತ ಏವಿಯಾನಿಕ್ಸ್ ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್‌ನೊಂದಿಗೆ ಎಲ್ಆರ್ಎಲ್ಎಸಿಎಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ದೂರದಲ್ಲಿರುವ ಶತ್ರುಸ್ಥಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
Maiden flight-test of Long Range Land Attack Cruise Missile (LRLACM) was conducted today from the Integrated Test Range (ITR), Chandipur off the coast of Odisha. During the test, all sub-systems performed as per expectation and met the primary mission objectives pic.twitter.com/JnJAA4Fy7n
— DRDO (@DRDO_India) November 12, 2024
ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗು ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.
ಯುನಿವರ್ಸಲ್ ವರ್ಟಿಕಲ್ ಲಾಂಚ್ ಮಾಡ್ಯೂಲ್ ಮೂಲಕ ಗ್ರೌಂಡ್-ಬೇಸ್ಡ್ ಮೊಬೈಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ನೌಕಾ ಹಡಗುಗಳ ಮೂಲಕವೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು.
ಭಾರತೀಯ ನೌಕಾಪಡೆ, ವಾಯುಪಡೆ, ಭೂಸೇನೆಯ ಅಧಿಕಾರಿಗಳು ಮತ್ತು DRDO ವಿಜ್ಞಾನಿಗಳು ಪರೀಕ್ಷೆಯನ್ನು ವೀಕ್ಷಿಸಿದರು.
The @DRDO_India has conducted the Maiden Flight Test of Long Range Land Attack Cruise Missile (LRLACM) from a mobile articulated launcher at ITR Chandipur.
— रक्षा मंत्री कार्यालय/ RMO India (@DefenceMinIndia) November 12, 2024
Raksha Mantri, Shri @rajnathsingh has congratulated DRDO, Armed Forces, and Industry on the successful Maiden Flight Test… pic.twitter.com/uHFzmuDC0Y
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ: ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ, ಸಶಸ್ತ್ರ ಪಡೆಗಳು ಮತ್ತು ಭಾರತೀಯ ರಕ್ಷಣಾ ಉದ್ಯಮವನ್ನು ಅಭಿನಂದಿಸಿದ್ದಾರೆ. "ಕ್ಷಿಪಣಿ ಹಾರಾಟದ ಯಶಸ್ಸು ಮತ್ತಷ್ಟು ಸ್ವದೇಶಿ ಕ್ರೂಸ್ ಕ್ಷಿಪಣಿ ಕಾರ್ಯಕ್ರಮಗಳಿಗೆ ಬಾಗಿಲು ತೆರೆಯುತ್ತದೆ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಕ್ಷಣಾ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷರು ಕೂಡಾ ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಿದೆ ಇಸ್ರೋ-ಐಐಟಿ ಮದ್ರಾಸ್: ಏನಿದರ ಉದ್ದೇಶ?