ಖಾವ್ಡಾ, ಗುಜರಾತ್:ಪಾಕಿಸ್ತಾನದ ಗಡಿಗೆ ಹೊಂದಿಕೊಂಡು ನಿರ್ಮಾಣ ಆಗಿರುವ ಜಗತ್ತಿನ ಅತ್ಯಂತ ದೊಡ್ಡ ನವೀಕರಿಸಬಹುದಾದ ಶಕ್ತಿ ಘಟಕ ಭಾರತದ ಪಶ್ಚಿಮ ಬಯಲಿನಲ್ಲಿದೆ. ಈ ಪ್ರದೇಶದಲ್ಲಿ ಪ್ರಜ್ವಲಿಸುವ ಸೂರ್ಯ, ದೊಡ್ಡದಾದ ಗಾಳಿಯನ್ನು ಶಕ್ತಿಯಾಗಿ ರೂಪಿಸುವ ಸೌರ ಫಲಿಕಗಳು ಗಾಳಿ ಟರ್ಬೈನ್ಗಳನ್ನು ನಿರ್ಮಾಣ ಮಾಡಲಾಗಿದೆ. ಈ ನವೀಕರಿಸಬಹುದಾದ ಸೌರ ಶಕ್ತಿ ಬಳಕೆಗೆ ಉತ್ತೇಜಿಸಲಾಗುತ್ತಿದೆ.
ಗುಜರಾತ್ನ ಖಾವ್ಡಾದಲ್ಲಿ 538 ಚದರ ಕಿ.ಮೀ ವಿಸ್ತರ್ಣದಲ್ಲಿ ಹರಡಿರುವ ಈ ಅತ್ಯಂತ ಬೃಹತ್ ಸೌರ ಘಟಕದಲ್ಲಿ 60 ಮಿಲಿಯನ್ ಸೌರ ಫಲಕ ಹಾಗೂ 770 ಗಾಳಿ ಟರ್ಬೈನ್ಗಳಿವೆ. ಇದರ ಗಾತ್ರ ಮೆಗಾಸಿಟಿ ಮುಂಬೈನಷ್ಟಿದೆ.
ಅತ್ಯುತ್ತಮ ನಿರ್ವಹಣೆ :ಒಳ್ಳೆಯ ಬೆಳವಣಿಗೆ ಎಂಬ ಘೋಷ ವಾಕ್ಯದಲ್ಲಿ ಕೆಲವರು ಇದರ ನಿರ್ವಹಣೆ, ಮೇಲ್ವಿಚಾರಣೆ ನಡೆಸುತ್ತಾರೆ. ಈ ನವೀಕರಿಸಬಹುದಾದ ಶಕ್ತಿ ಮೂಲದಿಂದಾಗಿ ಇಂದು ಇಂದು, ನಾವು 11 ಗಿಗಾವ್ಯಾಟ್‌ಗಳವರೆಗೆ ವಿದ್ಯುತ್ ಉತ್ಪಾದಿಸಬಹುದು. ಇದು ಫ್ರಾನ್ಸ್‌ನ ಟೋಟಲ್ ಎನರ್ಜಿಸ್ ಶೇ20 ರಷ್ಟು ಪಾಲನ್ನು ಹೊಂದಿದೆ ಎಂದು ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿಯ ಉಪಾಧ್ಯಕ್ಷ ಮಣಿಂದರ್ ಸಿಂಗ್ ಪೆಂತಲ್ ತಿಳಿಸಿದ್ದಾರೆ.
2029ರಲ್ಲಿ ನಾವು 30 ಗಿಗಾವ್ಯಾಟ್ ಉತ್ಪಾದನೆ ಮಾಡುತ್ತೇವೆ. ಈ ಹೊತ್ತಿನಲ್ಲಿ ಭಾರತವೂ ಮತ್ತೊಂದು ದಾಖಲೆ ಮುರಿಯಲಿದೆ. ಅಂದೇಂದರೆ, ಚೀನಾದ 18 ಗಿಗಾವ್ಯಾಟ್ನ ಮೂರು ಗೋರ್ಜಸ್ ಜಲವಿದ್ಯುತ್ ಅಣೆಕಟ್ಟನ್ನು ಮೀರಿದ ವಿಶ್ವದ ಅತ್ಯಂತ ಶಕ್ತಿಶಾಲಿ ವಿದ್ಯುತ್ ಉತ್ಪಾದನಾ ತಾಣವಾಗಿ ಖಾವ್ಡಾ ರೂಪುಗೊಳ್ಳಲಿದೆ ಎಂದರು.
ಜಗತ್ತಿನಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿರುವ ಜನಸಂಖ್ಯೆ, ಆರ್ಥಿಕ ಬೆಳವಣಿಗೆ ಮತ್ತು ಕ್ಷಿಪ್ರ ನಗರೀಕರಣದ 2000ನೇ ಇಸ್ವಿಯಿಂದ ಇಂಧನದ ಬೇಡಿಕೆ ಹೆಚ್ಚಿದ್ದು, ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇದರ ಬೇಡಿಕೆ ಹೆಚ್ಚಿದೆ.
ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ 2070ರ ಹೊತ್ತಿಗೆ ಇಂಗಾಲದ ತಟಸ್ಥವಾಗಿರಲು ಪ್ರತಿಜ್ಞೆ ಮಾಡಲಿದೆ. ಈ ಸ್ಥಾವರದಿಂದ 2030ಕ್ಕೆ 500ಗಿಗಾ ವ್ಯಾಟ್ ಶಕ್ತಿ ಉತ್ಪಾದನೆಯಾಗಲಿದ್ದು, ಸೌರ ಶಕ್ತಿಯಿಂದಲೇ 300 ಗಿಗಾ ವ್ಯಾಟ್ ಶಕ್ತಿ ಲಭಿಸಲಿದೆ.
ಅಂತಾರಾಷ್ಟ್ರೀಯ ಶಕ್ತಿ ಏಜೆನ್ಸಿಯ ಈ ವರ್ಷದ ವರದಿ ಅನುಸಾರ, ಭಾರತದ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯ 2022ಕ್ಕೆ ಹೋಲಿಕೆ ಮಾಡಿದರೆ 2030ಕ್ಕೆ ಮೂರು ಪಟ್ಟು ಹೆಚ್ಚಲಿದ್ದು, ಅತ್ಯಂತ ಬೃಹತ್ ನವೀಕರಣ ಶಕ್ತಿ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಕಾಯ್ದುಕೊಳ್ಳಲಿದೆ.
ಅದಾನಿ ಸ್ಥಾವರ ಘಟಕ:ದೇಶಾದ್ಯಂತ ಸೌರ ಕ್ರಾಂತಿಗೆ ಮುಂದಾಗುವಂತೆ, ಮನೆಗಳ ಮೇಲೆ ಸೌರಫಲಕ ಅಳವಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದು ನಮ್ಮ ಉತ್ಪಾದನೆಗೆ ಸಹಾಯಕವಾಯಿತು. ಏಕೆಂದರೆ, ಸಣ್ಣ ಘಟಕಗಳಿಗಿಂತ ದೊಡ್ಡ ಘಟಕಗಳೊಂದಿಗೆ ದೇಶದ ಬೇಸ್‌ಲೋಡ್ ಉತ್ಪಾದನೆ ಗಾತ್ರ ಸುಲಭ ಮತ್ತು ಶೀಘ್ರವಾಯಿತು ಎಂದು ಅದಾನಿ ಗ್ರೀನ್ ಎನರ್ಜಿ ಸಿಇಒ ಸಾಗರ್ ಅದಾನಿ ತಿಳಿಸಿದ್ದಾರೆ.
ನವೀಕರಣ ಶಕ್ತಿ ಉತ್ಪಾದನೆಗೆ ಅತಿ ದೊಡ್ಡ ಪ್ರಮಾಣದ ಕೇಂದ್ರೀಕೃತ ದೊಡ್ಡ ಸ್ಥಳಗಳ ಅಗತ್ಯವಿದೆ. 200 ಯೋಜನೆಗಳ ಮೂಲಕ ತಲಾ 50 ಮೆಗಾವ್ಯಾಟ್ ಉತ್ಪಾದನೆ ಮಾಡಬಹುದು. ಅದರಿಂದ ಭಾರತಕ್ಕೆ ಏನೂ ಆಗದು. ಈ ಹಿನ್ನೆಲೆ ಅದಾನಿ 2030 ರ ವೇಳೆಗೆ 35 ಬಿಲಿಯನ್ ಡಾಲರ್ ಶಕ್ತಿ ಉತ್ಪಾದನೆಯ ಪ್ರತಿಜ್ಞೆ ಮಾಡಿದೆ.
ಆದಾಗ್ಯೂ ಕಳೆದ ಕೆಲವು ವಾರಗಳಿಂದ ಈ ಸ್ಥಾವರದ ಮೇಲೆ ಅಮೆರಿಕ ದೋಷಾರೋಪಣೆ ಹೊರೆಸಿದ್ದು, ಸಮಸ್ಯೆ ಹೆಚ್ಚಿಸಿದೆ. ಉದ್ಯಮಿ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಅಧಿನ ಅಧಿಕಾರಗಳ ಮೇಲೆ ವಂಚನೆ ಆರೋಪದ ಬಳಿಕ ಟೋಟಲ್ ಎನರ್ಜಿಸ್ ಸಂಸ್ಥೆಯಲ್ಲಿನ ಎಲ್ಲ ಹೊಸ ಹೂಡಿಕೆಗಳನ್ನು ಸ್ಥಗಿತಗೊಂಡಿದೆ. ಆದರೆ, ಸಂಸ್ಥೆ ಇದನ್ನು ನಿರಾಕರಿಸಿದ್ದು, ಸೌರ ಶಕ್ತಿಯ ಮತ್ತಷ್ಟು ಉತ್ತೇಜನವನ್ನು ಮುಂದುವರೆಸಿದೆ.