ಕರ್ನಾಟಕ

karnataka

ETV Bharat / bharat

ಬೆಂಗಳೂರಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ರಾಂಚಿಯಲ್ಲಿ ತುರ್ತು ಭೂಸ್ಪರ್ಶ: ಪ್ರಯಾಣಿಕರು ಸುರಕ್ಷಿತ - Helicopter emergency landing - HELICOPTER EMERGENCY LANDING

ಬೆಂಗಳೂರಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್‌ನ ಬುದ್ಧಿವಂತಿಕೆಯಿಂದಾಗಿ ಹೆಲಿಕಾಪ್ಟರ್‌ನಲ್ಲಿದ್ದ ಜನರ ಪ್ರಾಣ ಉಳಿದಿದೆ. ಹೆಲಿಕಾಪ್ಟರ್ ದರ್ಭಾಂಗದಿಂದ ಬೆಂಗಳೂರಿಗೆ ಹೊರಟಿತ್ತು.

EMERGENCY LANDING IN RANCHI  HATIA HELICOPTER LANDING  DHURWA HELICOPTER LANDING  Helicopter emergency landing
ಬೆಂಗಳೂರಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ರಾಂಚಿಯಲ್ಲಿ ತುರ್ತು ಭೂಸ್ಪರ್ಶ (ETV Bharat)

By ETV Bharat Karnataka Team

Published : Jul 13, 2024, 12:34 PM IST

ರಾಂಚಿ (ಜಾರ್ಖಂಡ್‌):ಪೈಲಟ್‌ನ ಜಾಣ್ಮೆಯಿಂದ ರಾಂಚಿಯಲ್ಲಿ ಭಾರೀ ಅವಘಡವೊಂದು ತಪ್ಪಿದೆ. ರಾಂಚಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ, ಭಾರೀ ಮಳೆ ಮತ್ತು ಗಾಳಿಯಿಂದಾಗಿ ಹೆಲಿಕಾಪ್ಟರ್ ಆಕಾಶದಲ್ಲಿ ಸಮತೋಲನ ಕಳೆದುಕೊಳ್ಳಲು ಪ್ರಾರಂಭಿಸಿತು. ನಂತರ ಹೆಲಿಕಾಪ್ಟರ್ ರಾಂಚಿಯ ಸ್ಮಾರ್ಟ್ ಸಿಟಿಯಲ್ಲಿರುವ ಮೈದಾನದಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.

ಅಸುರಕ್ಷಿತ ಸ್ಥಳದಲ್ಲಿ ಲ್ಯಾಂಡಿಂಗ್: ರಾಂಚಿಯಲ್ಲಿ ಭಾರೀ ಮಳೆಯಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಹೆಲಿಕಾಪ್ಟರ್ ರಾಂಚಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗುತ್ತಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣ ಅಸುರಕ್ಷಿತ ಸ್ಥಳದಲ್ಲಿ ಇಳಿಯಬೇಕಾಯಿತು. ವಾಸ್ತವವಾಗಿ, ಹೆಲಿಕಾಪ್ಟರ್ ಪೈಲಟ್ ನಿಗದಿತ ಸ್ಥಳಕ್ಕೆ ತಲುಪಲು ತುಂಬಾ ತೊಂದರೆ ಅನುಭವಿಸಿದರು.

ದರ್ಭಾಂಗದಿಂದ ಬೆಂಗಳೂರಿಗೆ ಹೋಗುವ ಈ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದ ಜಾರ್ಖಂಡ್‌ನ ಆಚೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಈ ಹೆಲಿಕಾಪ್ಟರ್ ಇಂಧನ ತುಂಬಿದ ನಂತರ ರಾಂಚಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಆದರೆ, ಅದು ದರ್ಭಾಂಗದಿಂದ ಬೆಂಗಳೂರಿಗೆ ಬರುತ್ತಿತ್ತು. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.

ರಾಂಚಿ ವಿಮಾನ ನಿಲ್ದಾಣಕ್ಕೆ ಬರಲು ಯೋಚಿಸಿದ್ದ ಪೈಲಟ್:ಮಾಹಿತಿ ಪ್ರಕಾರ, ಪೈಲಟ್ ಒಡಿಶಾದ ಝರ್ಸುಗುಡಾವನ್ನು ತಲುಪಿದ್ದರು. ಆದರೆ ನಂತರ ಅವರು ಭಾರೀ ಮಳೆ ಮತ್ತು ಕಡಿಮೆ ಬೆಳಕಿನ ಹಿನ್ನೆಲೆ ಹೆಲಿಕಾಪ್ಟರ್ ಗೊತ್ತುಪಡಿಸಿದ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಕಷ್ಟಪಟ್ಟರು. ಆದ್ದರಿಂದ ಪೈಲಟ್, ಹೆಲಿಕಾಪ್ಟರ್ ಅನ್ನು ರಾಂಚಿ ಕಡೆಗೆ ತೆಗೆದುಕೊಂಡು ಹೋದರು. ಈ ವೇಳೆ ರಾಂಚಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಬಳಿಕ, ಪೈಲಟ್ ಧುರ್ವಾದಲ್ಲಿರುವ ಸ್ಮಾರ್ಟ್ ಸಿಟಿ ಪ್ರದೇಶದ ಖಾಲಿ ಜಾಗದಲ್ಲಿ ಹೆಲಿಕಾಪ್ಟರ್ ಅನ್ನು ನಿನ್ನೆ (ಜುಲೈ 12 ರಂದು ) ಇಳಿಸಿದರು.

ಇಂದು ಮತ್ತೆ ಹೆಲಿಕಾಪ್ಟರ್ ಟೇಕಾಫ್:ಪ್ರತಿಕೂಲ ಹವಾಮಾನದಿಂದಾಗಿ ಸ್ಮಾರ್ಟ್ ಸಿಟಿಯಲ್ಲಿರುವ ಮೈದಾನದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ರಾಂಚಿಯ ಹಟಿಯಾ ಡಿಎಸ್ಪಿ ಪ್ರಮೋದ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಪೈಲಟ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇಂದು (ಶನಿವಾರ) ಬೆಳಗ್ಗೆ ಮತ್ತೆ ಹೆಲಿಕಾಪ್ಟರ್ ಟೇಕಾಫ್ ಆಯಿತು.

ಇದನ್ನೂ ಓದಿ:ಉತ್ತರ ಪ್ರದೇಶ ಭೀಕರ ಪ್ರವಾಹ: 8 ಜಿಲ್ಲೆಗಳಲ್ಲಿ ಆವರಿಸಿದ ನೆರೆ, 700ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ, 11 ಜನ ಸಾವು - Uttar Pradesh severe floods

ABOUT THE AUTHOR

...view details