ಭಿವಾನಿ(ಹರಿಯಾಣ):ರಾಮಮಂದಿರ ಉದ್ಘಾಟನೆಯ ಸಂಭ್ರಮದ ದಿನದಂದು ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ರಾಮಲೀಲಾ ನಾಟಕ ಪ್ರದರ್ಶನ ನಡೆಯುತ್ತಿದ್ದಾಗ ಹನುಮಂತ ಪಾತ್ರಧಾರಿ ವೇದಿಕೆಯಲ್ಲಿ ಕುಸಿದು ಹೃದಯಾಘಾತದಿಂದ ಕೊನೆಯುಸಿರೆಳೆದರು.
ಘಟನೆಯ ಸಂಪೂರ್ಣ ವಿವರ:ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನ ಭಿವಾನಿ ನಗರದಲ್ಲಿ ರಾಮಲೀಲಾ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ಹನುಮಂತನ ಪಾತ್ರ ಮಾಡುತ್ತಿದ್ದ ಹರೀಶ್ ಮೆಹ್ತಾ ಹೃದಯಾಘಾತದಿಂದ ಕುಸಿದು ಶ್ರೀರಾಮನ ಪಾತ್ರಧಾರಿ ಕಲಾವಿದನ ಪಾದಗಳಿಗೆರಗಿ ಸಾವನ್ನಪ್ಪಿದರು. ಆದರೆ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಮೆಹ್ತಾ ಪಾತ್ರ ಮಾಡುತ್ತಿದ್ದಾರೆ ಎಂದೇ ಭಾವಿಸಿದ್ದರು. ಹೀಗಾಗಿ, ವಾಸ್ತವ ವಿಷಯ ತಿಳಿಯದೇ ಚಪ್ಪಾಳೆ ತಟ್ಟುತ್ತಿದ್ದರು.