ನವದೆಹಲಿ: ವಿರೋಧ ಪಕ್ಷಗಳು ಒಗ್ಗೂಡದಿದ್ದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಲ್ಪನೆಯ ಮೇಲೆ ರೂಪುಗೊಂಡ ಇಂಡಿಯಾ ಮೈತ್ರಿಕೂಟದಲ್ಲಿ ಇದೀಗ ವಿಘಟನೆಯ ಭೀತಿ ಎದುರಾಗಿದೆ.
ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಎಎಪಿ ಮತ್ತು ಸಮಾಜವಾದಿ ಪಕ್ಷಗಳ ನಡುವಿನ ಬಿರುಕು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೀವ್ರವಾಗಿ ಮುನ್ನೆಲೆಗೆ ಬಂದಿತ್ತು. ಹರಿಯಾಣದಲ್ಲಿ ಕಾಂಗ್ರೆಸ್ಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಅದು ಎಎಪಿಗೆ ಸ್ಥಾನಗಳನ್ನು ಬಿಟ್ಟುಕೊಡದೇ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಆದರೆ, ಪಕ್ಷ ಆಡಳಿತ ವಿರೋಧಿ ಅಲೆಯನ್ನು ಮೀರಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿತ್ತು.
ಸೀಟು ಹಂಚಿಕೆಯೇ ಸವಾಲು:ವಿಶೇಷವಾಗಿ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಇನ್ನೇನು ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ ನಾಯಕರು ಯಾವ ರೀತಿಯಲ್ಲಿ ಸೀಟು ಹಂಚಿಕೆ ನಿರ್ಣಯ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ, ನಿರ್ಣಾಯಕ ಸೀಟು ಹಂಚಿಕೆ ಮಾತುಕತೆಗಳ ಸಮಯದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:6 ವರ್ಷಗಳ ಬಳಿಕ ಜಮ್ಮು & ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆತ: ಹೊಸ ಸರ್ಕಾರಕ್ಕೆ ವೇದಿಕೆ ಸಜ್ಜು
ಮಹಾರಾಷ್ಟ್ರದಲ್ಲೂ ಮುಂಚಿತವಾಗಿ ಸೀಟು ಹಂಚಿಕೆಗೆ ಹಿಂಜರಿಕೆ:ಮಹಾರಾಷ್ಟ್ರದ ಪ್ರಮುಖ ಪಾಲುದಾರರಾದ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಅಲ್ಲಿಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೀಟು ಹಂಚಿಕೆಗೆ ಕಾಂಗ್ರೆಸ್‌ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದೆ ಎಂಬ ಸುದ್ದಿಗಳು ಬರುತ್ತಿವೆ. ಅದೇ ರೀತಿ, JMM ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಗಳು ಜಾರ್ಖಂಡ್‌ನಲ್ಲಿ ಕಷ್ಟಕರವಾಗಬಹುದು. ಈ ನಿರ್ಣಾಯಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಪಾಲುದಾರರೊಂದಿಗೆ ಬೇರ್ಪಡುವ ಮಾರ್ಗಗಳನ್ನು ಪರಿಗಣಿಸಬಹುದು ಎಂಬ ಮುನ್ಸೂಚನೆಗಳಿವೆ. ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಗಣನೀಯ ಸೀಟಗಳ ಗಳಿಕೆ ಮಾಡಿಕೊಂಡಿರುವುದು ಅಷ್ಟು ಸುಲಭಕ್ಕೆ ಮಿತ್ರ ಪಕ್ಷಗಳ ಬೇಡಿಕೆಗೆ ಒಪ್ಪದಿರುವ ಸಾಧ್ಯತೆಗಳಿವೆ.
ಉತ್ತರಪ್ರದೇಶದಲ್ಲಿ ಏಕಾಂಗಿ ಸ್ಪರ್ಧೆಗೆ ಎಸ್‌ಪಿ ನಿರ್ಧಾರ?:ಎಎಪಿ ಮತ್ತು ಸಮಾಜವಾದಿ ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನು ನೀಡಲು ನಿರಾಕರಿಸಿದ ಕಾಂಗ್ರೆಸ್ ಹರಿಯಾಣದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿತ್ತು. ಇದು ಮಿತ್ರಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಎಎಪಿ ನಾಯಕರು ಹರ್ಯಾಣದಲ್ಲಿ ಕಾಂಗ್ರೆಸ್‌ನ ಚುನಾವಣಾ ಸೋಲಿಗೆ ಸೊಕ್ಕಿನ ವರ್ತನೆ ಮತ್ತು ಮೈತ್ರಿಯ ಸಮಗ್ರತೆಯನ್ನು ಹಾಳುಮಾಡಿದೆ ಎಂದು ಆಕ್ರೋಶ ಹೊರ ಹಾಕಿದೆ.