ನವದೆಹಲಿ: ಆನ್ಲೈನ್ ವಿಷಯಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ ಎಂದು ಆರೋಪಿಸಲಾಗಿದ್ದ, ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪ್ರಸಾರ ಸೇವೆ (ನಿಯಂತ್ರಣ) ಮಸೂದೆ-2024 ಕರಡನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳ ಪ್ರಕಾರ, ಇದೀಗ ಕರಡನ್ನು ಹಿಂಪಡೆಯಲಾಗಿದ್ದು, ಹೆಚ್ಚಿನ ಚರ್ಚೆಗಳ ನಂತರ ಹೊಸ ಕರಡನ್ನು ಬಿಡುಗಡೆ ಮಾಡಲಾಗುವುದು. ಜೊತೆಗೆ ಈ ಕರಡನ್ನು ಹಿಂಪಡೆಯಲು ಮತ್ತೊಂದು ಕಾರಣ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಅಸೋಸಿಯೇಷನ್ ಒತ್ತಡ ಆಗಿದೆ.
ಈ ಕರಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳಿಂದ ಅನೇಕ ಹೇಳಿಕೆ ಮತ್ತು ಶಿಫಾರಸ್ಸುಗಳನ್ನು ಸರ್ಕಾರ ಪಡೆದಿದ್ದು, ಇದಾದ ಬಳಿಕ ಪ್ರಸ್ತುತದ ಕರಡನ್ನು ಹಿಂಪಡೆಯಲಾಗಿದೆ. ಇದೀಗ ಸರ್ಕಾರ ಕರಡಿಗೆ ಸಂಬಂದಿಸಿದಂತೆ ಸಲಹೆ ಮತ್ತು ಅನಿಸಿಕೆಗಳನ್ನು ನೀಡಲು 2024ರ ಅಕ್ಟೋಬರ್ 15ರವರೆಗೆ ಸಮಯ ವಿಸ್ತರಿಸಿದೆ.
ಇನ್ನು ಈ ಕರಡನ್ನು ವಾಪಸ್ ಪಡೆದಿರುವ ಕುರಿತು ಎಂಐಬಿ ಅಧಿಕೃತವಾಗಿ ದೃಢಡಿಸಿಲ್ಲ. ಆದರೆ, ಸೋಮವಾರ ಸಂಜೆ ಮಾತನಾಡಿದ ಸಚಿವಾಲಯ, ಮತ್ತಷ್ಟು ಸಮಾಲೋಚನೆ ಬಳಿಕ ಹೊಸದಾಗಿ ಪ್ರಸಾರ ಮಸೂದೆ ಕರಡನ್ನು ಸಿದ್ಧಪಡಿಸಲಾಗುವುದು ಎಂದಿದೆ.
ಕರಡು ಪ್ರಸಾರ ಸೇವೆ ನಿಯಂತ್ರಣ ಮಸೂದೆಯನ್ನು ಸರ್ಕಾರದ ಕೆಲವು ಸಂಬಂಧಿಸಿದವರೊಂದಿಗೆ ಹಂಚಿಕೆ ಮಾಡಿತು. ಡಿಜಿಪಬ್ ಮತ್ತು ಎಡಿಟರ್ ಗಿಲ್ಡ್ ಆಫ್ ಇಂಡಿಯಾದಂತಹ ಮಾಧ್ಯಮ ಮಂಡಳಿಗಳು, ಡಿಜಿಟಲ್ ಮಾಧ್ಯಮ ಸಂಘಟನೆ ಮತ್ತು ಸಿವಿಲ್ ಸೊಸೈಟಿ ಅಸೋಸಿಯೇಷನ್ಗಳ ಸಮಾಲೋಚನೆ ನಡೆಸಿಲ್ಲ ಎಂದು ಟೀಕೆ ಮಾಡಿದ್ದವು.
ಕರಡು ಮಸೂದೆ ಕುರಿತು ಸಚಿವಾಲಯವು ಅನೇಕರ ಜೊತೆ ಸರಣಿ ಸಮಾಲೋಚನೆ ನಡೆಸಲಿದೆ. ಇದಾದ ಬಳಿಕ ಈ ಕುರಿತು ಟೀಕೆ ಮತ್ತು ಸಲಹೆ ನೀಡಲು ಅಕ್ಟೋಬರ್ 15ರ ವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಕ್ಸ್ನಲ್ಲಿ ತಿಳಿಸಿದೆ.
ವಿವರವಾದ ಸಮಾಲೋಚನೆ ಬಳಿಕ ಹೊಸ ಕರಡನ್ನು ಪ್ರಕಟಿಸಲಾಗುವುದು. ಪ್ರಸಾರ ಸೇವೆ (ನಿಯಂತ್ರಣ) ಮಸೂದೆ ಕರಡಿನ ಸಂಬಂಧ ಕೆಲಸ ಮಾಡಲಾಗುತ್ತಿದೆ. ಸಾಮಾನ್ಯ ಸಾರ್ವಜನಿಕರು ಮತ್ತು ಸಂಬಂಧಿತರ ಹೇಳಿಕೆಯ ವಿವರಣೆ ಪಟ್ಟಿಯ ಜೊತೆಗೆ ಈ ಬಿಲ್ ಅನ್ನು 2023ರ ನವೆಂಬರ್ 10ರಂದು ಸಾರ್ವಜನಿಕ ಡೊಮೈನ್ನಲ್ಲಿ ಇಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಸಂಬಂಧ ಅನೇಕ ಅಸೋಸಿಯೇಷನ್ಗಳಿಂದ ಅನೇಕ ಶಿಫಾರಸು, ಟೀಕೆ ಮತ್ತು ಸಲಹೆಗಳನ್ನು ಪಡೆಯಲಾಗಿದೆ. ಈ ಮಸೂದೆಯಲ್ಲಿ ಆನ್ಲೈನ್ ವಿಷಯ ಕ್ರಿಯೇಟರ್ ಜೊತೆಗೆ ಒಟಿಟಿ ಮತ್ತು ಡಿಜಿಟಲ್ ಸುದ್ದಿ ಪ್ರಸಾರಗಳನ್ನು ಸೇರಿಸಲಾಗಿದೆ. ಇವರನ್ನೆಲ್ಲಾ ಸಚಿವಾಲಯದ ವಿಷಯ ಮತ್ತು ಜಾಹೀರಾತು ಕೋಡ್‌ನ ವ್ಯಾಪ್ತಿಗೆ ತರಲಾಗುವುದು.
ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ - Karnataka Rain forecast