ETV Bharat / bharat

ಕಾಶ್ಮೀರಿ ಪಂಡಿತ್​​ ಹೌಸಿಂಗ್ ಸೊಸೈಟಿ ಮೌಲ್ಯಮಾಪನಕ್ಕೆ ಕೇಂದ್ರ ಸರ್ಕಾರದ ಸಮಿತಿ ರಚನೆ

ಮೂವರು ಸದಸ್ಯರನ್ನು ಒಳಗೊಂಡ ಈ ಸಮಿತಿ ದೆಹಲಿಯಲ್ಲಿ ಕೇಂದ್ರ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ಅವರನ್ನು ಗುರುವಾರ ಭೇಟಿಯಾಗಿ ಚರ್ಚೆ ನಡೆಸಿತು.

central-government-to-set-up-panel-to-evaluate-first-kashmiri-pandit-housing-society-in-srinagar-kashmir
ಶ್ರೀನಗರದಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಶೋಭಾ ಯಾತ್ರೆಯಲ್ಲಿ ಕಾಶ್ಮೀರಿ ಪಂಡಿತರು (ಎಎನ್ಐ)
author img

By ETV Bharat Karnataka Team

Published : 2 hours ago

Updated : 1 hours ago

ಶ್ರೀನಗರ: ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರಿಗೆ ಶಾಶ್ವತ ನೆಲೆ ಕಲ್ಪಿಸಲು ಸ್ಥಾಪಿಸಲಾಗುತ್ತಿರುವ ಮೊದಲ ಹೌಸಿಂಗ್ ಸೊಸೈಟಿಯ ಮೌಲ್ಯಮಾಪನ ಮಾಡಲು ಕೇಂದ್ರದಿಂದ ಸಮಿತಿ ರಚಿಸಲಾಗುವುದು ಎಂದು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಭರವಸೆ ನೀಡಿದೆ.

ಮೂವರು ಸದಸ್ಯರನ್ನು ಒಳಗೊಂಡ ಈ ಸಮಿತಿ ಗುರುವಾರ ದೆಹಲಿಯಲ್ಲಿ ಕೇಂದ್ರ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿಯಾಗಿದೆ. ಸಮಿತಿಯಲ್ಲಿ ಹೌಸಿಂಗ್​ ಸೊಸೈಟಿ ಅಧ್ಯಕ್ಷ ಅಶೋಕ್​ ಮನ್ವಿತಾ, ಕಾರ್ಯದರ್ಶಿ ಸತೀಶ್​​ ಮಹಲ್ದಾರ್​ ಮತ್ತು ಸದಸ್ಯರಾಗಿ ಕಮಲ್​ ಚೌಧರಿ ಇದ್ದು, ವಲಸಿಗರ ಆಸ್ತಿಗಳ ಮೇಲಿನ ಅತಿಕ್ರಮಣ ಮತ್ತು ಸರ್ಕಾರದ ವಾಪಸಾತಿ ಮತ್ತು ಪುನರ್ವಸತಿ ನೀತಿ ಬಗ್ಗೆ ಚರ್ಚಿಸಿದರು.

ಈ ಕುರಿತು ಈಟಿವಿ ಭಾರತ್​ ಜೊತೆಗೆ ಮಾತಾನಾಡಿದ ಮಹಲ್ದಾರ್​, ತಮ್ಮ ನೆಲದಲ್ಲಿ ಕಾಶ್ಮೀರ ಪಂಡಿತರ ನೆಲಸಲು ಕಾಶ್ಮೀರದಲ್ಲಿ ಮೊದಲ ಹೌಸಿಂಗ್​ ಸೊಸೈಟಿ ಸ್ಥಾಪಿಸಿದ್ದಕ್ಕೆ ಸಚಿವರು ಪ್ರಶಂಸಿದರು. ಭೂಮಿಗಾಗಿ ಆರ್ಥಿಕ ಬೆಂಬಲ ಮತ್ತು ಸಬ್ಸಿಡಿ ನೀಡುವ ಭರವಸೆ ಜೊತೆಗೆ ಸರ್ಕಾರದಿಂದ ಯಾವುದೇ ಸಾಧ್ಯವಾದ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಖಾಸಗಿ ಸೊಸೈಟಿಯ ಮೂಲಕ ಸ್ಥಾಪಿಸಲಾಗುತ್ತಿರುವ ಕಾಶ್ಮೀರಕ್ಕೆ ಹೌಸಿಂಗ್​ ಸೊಸೈಟಿ ಪ್ರಸ್ತಾಪಕ್ಕೆ ಸರ್ಕಾರದಿಂದ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲವನ್ನು ಮೌಲ್ಯಮಾಪನ ಮಾಡಲು ಸಮಿತಿಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕಾಶ್ಮೀರ ಸರ್ಕಾರದ ಜೊತೆಗೆ ಶೀಘ್ರ ಚರ್ಚೆ: ಕಾಶ್ಮೀರಿ ಪಂಡಿತ್ ಸಮುದಾಯವು ಕಣಿವೆ ರಾಜ್ಯದಿಂದ ನಿರ್ಗಮಿಸಿದಾಗಿನಿಂದಲೂ ಮರಳು ಮತ್ತು ಪುನರ್ವಸತಿಗಾಗಿ ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಬಿತರಾಗಿತ್ತು. ಈ ಹಿಂದೆ, ಸಮುದಾಯಕ್ಕಾಗಿ ವಿಶೇಷ ನೆಲೆ ಕಲ್ಪಿಸುವ ಸರ್ಕಾರದ ಪ್ರಸ್ತಾಪಕ್ಕೆ ಪ್ರಮುಖ ಪಕ್ಷಗಳು ಟೀಕಿಸಿದ್ದವು. ಸರ್ಕಾರವೂ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೊತೆಗೆ ಭೂ ವಿಚಾರ ಕುರಿತು ಮಾತನಾಡಲಿದ್ದು, ಶೀಘ್ರ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಶಾಶ್ವತ ನೆಲೆಗಾಗಿ ಇದೀಗ ಕಾಶ್ಮೀರಿ ಪಂಡಿತರು ಔಪಚಾರಿಕವಾಗಿ ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರಾರ್ ಸಹಕಾರ ಸಂಘಗಳೊಂದಿಗೆ ಸ್ಥಳಾಂತರಗೊಂಡ ಕಾಶ್ಮೀರಿ ನಿವಾಸಿಗಳ ವಸತಿ ಸಹಕಾರ, ಶ್ರೀನಗರದಲ್ಲಿ ನೋಂದಾಯಿಸಿದ್ದಾರೆ. ಹೌಸಿಂಗ್ ಸೊಸೈಟಿಯು 11 ಕಾಶ್ಮೀರಿ ಪಂಡಿತರು ಮತ್ತು ಇಬ್ಬರು ಸಿಖ್ಖರನ್ನು ಒಳಗೊಂಡಿದೆ. ಇವರೆಲ್ಲರೂ 1989ರಲ್ಲಿ ಉಂಟಾದ ಉಗ್ರವಾದ ಬಳಿಕ ತಮ್ಮ ನೆಲೆ ತೊರೆದವರಾಗಿದ್ದಾರೆ.

ಸರ್ಕಾರದಿಂದ 70ರಷ್ಟು ಸಹಾಯಧನ: ಯಾವುದು ಕೂಡ ಉಚಿತವಾಗಿ ಲಭ್ಯವಾಗುವುದಿಲ್ಲ. ಕಾಶ್ಮೀರಿ ಪಂಡಿತರು ತಮ್ಮ ಸ್ವಂತಃ ಭೂಮಿಗೆ ಕೆಲವು ಸಾಮಾನ್ಯ ದರಗಳನ್ನು ನೀಡಬೇಕಿದೆ. ತಾತ್ಕಲಿಕವಾಗಿ ಸರ್ಕಾರವೂ ಶೇ 70ರಷ್ಟುನ್ನು ನೀಡಲಿದ್ದು, ಉಳಿದವುಗಳನ್ನು ಕಾಶ್ಮೀರಿ ಪಂಡಿತರ ಕುಟುಂಬ ತಮ್ಮ ಕೈಯಿಂದ ನೀಡಬೇಕು ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಹಲ್ದಾರ್​ ತಿಳಿಸಿದರು.

2019ರಿಂದ ಜಮ್ಮು ಮತ್ತು ಕಾಶ್ಮೀರ ಶಾಂತಿ ವೇದಿಕೆ ಅಧ್ಯಕ್ಷರಾಗಿರುವ ಮಹಲ್ದಾರ್​​, ಕಣಿವೆ ರಾಜ್ಯದಿಂದ ವಲಸೆ ಹೋಗಿರುವ 419 ಕಾಶ್ಮೀರಿ ಪಂಡಿತರ ಕುಟುಂಬಗಳು ಕಣಿವೆಗೆ ಮರಳುವ ಇಚ್ಛೆ ವ್ಯಕ್ತಪಡಿಸಿವೆ. ಈ ಪಟ್ಟಿಯನ್ನು ಕೇಂದ್ರ ಸಚಿವರಿಗೆ ನಿಯೋಗ ನೀಡಿದೆ.

ಸುರಕ್ಷತಾ ದೃಷ್ಟಿಯಿಂದ ಕಣಿವೆ ರಾಜ್ಯದಿಂದ ನವದೆಹಲಿ ಸೇರಿದಂತೆ ದೇಶದ ಇತರ ಪ್ರದೇಶಗಳಿಗೆ ಸುಮಾರು 62,000 ಕುಟುಂಬಗಳು ವಲಸೆ ಹೋಗಿವೆ. ಹೀಗೆ ಹೋದವರ ಮನೆಗಳನ್ನು ಲೂಟಿ ಮತ್ತು ಅತಿಕ್ರಮಣ ಮಾಡಲಾಗಿದೆ ಎಂದು ಅನೇಕರು ಹೇಳಿದ್ದಾರೆ. ಮತ್ತೆ ಕೆಲವರು ತಮ್ಮ ಆಸ್ತಿಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ಗುರಿಯಾದೆವು ಎಂದಿದ್ದಾರೆ. ಈ ಕುರಿತು ವರದಿ ಮಾಡಲು ಸರ್ಕಾರ 2021ರ ಆಗಸ್ಟ್​ನಲ್ಲಿ ಆನ್‌ಲೈನ್ ಪೋರ್ಟಲ್ ಆರಂಭಿಸಿತ್ತು. ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರ ಆಸ್ತಿಗಳ ಮೇಲಿನ ಅತಿಕ್ರಮಣ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ವಲಸಿಗರ ಸ್ಥಿರಾಸ್ಥಿ ಕಾಯ್ದೆ 1997 ಅವರನ್ನು ವಲಸಿಗರು ಎಂದು ವ್ಯಾಖ್ಯಾನಿಸಿದೆ. ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ 2015 ಮತ್ತು ಪ್ರಧಾನ ಮಂತ್ರಿಗಳ ಪುನರ್ನಿರ್ಮಾಣ ಯೋಜನೆ 2008 ರ ಅಡಿ ಅವರ ಮರಳುವಿಕೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಕಣಿವೆ ರಾಜ್ಯದಲ್ಲಿ ಪಂಡಿತರಿಗೆ 6,000 ಉದ್ಯೋಗಗಳನ್ನು ಸೃಷ್ಟಿಸಿದೆ. ಇದರಲ್ಲಿ 5724 ಕಾಶ್ಮೀರಿ ವಲಸಿಗರು ನೇಮಕಗೊಂಡಿದ್ದಾರೆ ಎಂದು 2024ರ ಆಗಸ್ಟ್​​ ಅಧಿಕೃತ ದತ್ತಾಂಶ ತಿಳಿಸಿದೆ.

ಇದನ್ನೂ ಓದಿ: ನೈನಿತಾಲ್​ ಅರಣ್ಯದಲ್ಲೊಂದು ಅಚ್ಚರಿ: ಇದು ಮುಟ್ಟಿದ್ರೆ ನಗುವ ಮರ

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.