How to Make Chicken Samosa at Home: ಸಮೋಸವು ಅತ್ಯಂತ ಜನಪ್ರಿಯ ಸ್ಟ್ರೀಟ್ ಫುಡ್ಗಳಲ್ಲಿ ಒಂದಾಗಿದೆ. ವಾತಾವರಣ ತಂಪಾಗಿರುವ ಸಮಯದಲ್ಲಿ ಅದರಲ್ಲೂ ಸಂಜೆ ವೇಳೆಯಲ್ಲಿ, ಗರಂ ಚಾಯ್ ಕಾಂಬಿನೇಷನ್ ಆಗಿ ಸಮೋಸ ಸೇವಿಸಿದರೆ ಆ ಖುಷಿಯೇ ಬೇರೆಯಾಗಿರುತ್ತದೆ. ಸಮೋಸ ಎಂದರೆ ಪ್ರಮುಖವಾಗಿ ಈರುಳ್ಳಿ ಸಮೋಸ, ಆಲೂ ಸಮೋಸ ಸೇರಿದಂತೆ ವಿವಿಧ ವೆಜ್ ಸಮೋಸಗಳ ನೆನಪಿಗೆ ಬರುತ್ತವೆ. ಈ ಸಮೋಸಗಳನ್ನು ಮಾತ್ರ ಮನೆಯಲ್ಲಿ ಮಾಡಲಾಗುತ್ತದೆ.
ಆದರೆ, ವೆಜ್ ಸಮೋಸಾ ತಿಂದು ಬೇಜಾರಾಗುತ್ತದೆ. ಇದರಿಂದ ಈ ಬಾರಿ ಸೂಪರ್ ಟೇಸ್ಟಿ ಚಿಕನ್ ಸಮೋಸ ಮಾಡಿ ನೋಡಿ. ರುಚಿಯಂತ ಅದ್ಭುತವಾಗಿದೆ. ಚಿಕನ್ ಅನ್ನು ಇಷ್ಟಪಡುವವರು ಈಗಲೂ ಇದೇ ಸಮೋಸವನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಈ ರೆಸಿಪಿಗೆ ಬೇಕಾಗುವ ಸಾಮಾಗ್ರಿಗಳು ಹಾಗೂ ತಯಾರಿಸುವ ವಿಧಾನದ ಬಗ್ಗೆ ಇಲ್ಲಿ ತಿಳಿಯೋಣ.
ಚಿಕನ್ ಸಮೋಸ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು?:
- ಮೈದಾ ಹಿಟ್ಟು - ಒಂದೂವರೆ ಕಪ್
- ಉಪ್ಪು - ಅರ್ಧ ಟೀಸ್ಪೂನ್
- ಅಜವಾನ - ಅರ್ಧ ಟೀಸ್ಪೂನ್
- ತುಪ್ಪ - 3 ಟೀಸ್ಪೂನ್
- ಎಣ್ಣೆ - 3 ಟೀಸ್ಪೂನ್
- ಈರುಳ್ಳಿ - 2
- ಹಸಿಮೆಣಸಿನಕಾಯಿ - 2
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಅರ್ಧ ಟೀಸ್ಪೂನ್
- ಚಿಕನ್ ಕೀಮಾ - 200 ಗ್ರಾಂ
- ಅರಿಶಿನ - ಕಾಲು ಟೀಸ್ಪೂನ್
- ಖಾರದ ಪುಡಿ - ಒಂದೂವರೆ ಟೀಸ್ಪೂನ್
- ಧನಿಯಾ ಪುಡಿ - ಅರ್ಧ ಟೀಸ್ಪೂನ್
- ಗರಂ ಮಸಾಲಾ - ಅರ್ಧ ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ ಪುಡಿ - ಅರ್ಧ ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾಗುವಷ್ಟು
ಚಿಕನ್ ಸಮೋಸ ತಯಾರಿಸುವ ವಿಧಾನ:
- ಮೊದಲು ಹಿಟ್ಟನ್ನು ತಯಾರಿಸಿ. ಅದಕ್ಕಾಗಿ ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು. ಅದಕ್ಕೆ 3/4 ಚಮಚ ಉಪ್ಪು, ತುಪ್ಪ ಹಾಕಿ ಕಲಸಿ. ಅದರ ನಂತರ ಸ್ವಲ್ಪ ನೀರು ಸುರಿಯಿರಿ ಹಾಗೂ ಪೇಸ್ಟ್ ಮಾಡಿ, ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಮುಚ್ಚಿ ಹಾಗೂ ಅದನ್ನು ಪಕ್ಕಕ್ಕೆ ಇಡಿ.
- ಈಗ ಚಿಕನ್ ಫಿಲ್ಲಿಂಗ್ ತಯಾರಿಸಲು, ಒಲೆ ಆನ್ ಮಾಡಿ ಮತ್ತು ಪ್ಯಾನ್ ಹಾಕಿ ಎಣ್ಣೆ ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಪೀಸ್ಗಳನ್ನು ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಈರುಳ್ಳಿ ಹೊಂಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
- ಅದರ ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಾಗೂ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
- ಶುಂಠಿಯ ಹಸಿ ವಾಸನೆ ಹೋದ ನಂತರ ಚಿಕನ್ ಕೀಮಾ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.
- ಅದಾದ ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಪುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಹಾಗೂ ಸ್ವಲ್ಪ ಫ್ರೈ ಮಾಡಿ. ಅದರ ನಂತರ ಜೀರಿಗೆ ಪುಡಿ ಹಾಗೂ ಧನಿಯಾ ಪುಡಿ ಸೇರಿಸಿ, ಬಳಿಕ ಸ್ಟವ್ ಆಫ್ ಮಾಡಿ.
- ಚಿಕನ್ ಮಿಶ್ರಣ ತಣ್ಣಗಾದ ನಂತರ ಮಿಕ್ಸಿಂಗ್ ಜಾರ್ಗೆ ಹಾಕಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಿ.
- ಈಗ ಮೈದಾ ಹಿಟ್ಟಿನ ಮಿಶ್ರಣವನ್ನು ಮತ್ತೊಮ್ಮೆ ಮಿಶ್ರಣ ಮಾಡಿ ಹಾಗೂ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ. ಅದರಲ್ಲಿ ಒಂದು ಉಂಡೆಯನ್ನು ತೆಗೆದುಕೊಂಡು ಚಪಾತಿ ಮಣೆಯ ಮೇಲೆ ಒಣ ಹಿಟ್ಟನ್ನು ಸಿಂಪಡಿಸಿ ಚಪಾತಿಯಂತೆ ಮಾಡಿಕೊಳ್ಳಿ.
- ಚಪಾತಿಗಳನ್ನು ಮೂರು ಇಂಚು ಅಗಲ ಮತ್ತು ಒಂಬತ್ತು ಇಂಚು ಉದ್ದ ಇರುವಂತೆ ಮಾಪಕದ ಸಹಾಯದಿಂದ ಕತ್ತರಿಸಿಕೊಳ್ಳಿ. ಎಲ್ಲ ಹಿಟ್ಟನ್ನು ಇದೇ ರೀತಿ ಮಾಡಿ.
- ಅಂದ್ರೆ, ಈ ಹಿಟ್ಟನ್ನು ಸಮೋಸಾ ಹಾಳೆಗಳಂತೆ ಪ್ಯಾಕ್ ಮಾಡುವಂತೆ ಮಾಡಿಕೊಳ್ಳಿ. ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ.
- ಬಳಿಕ ನಿಮ್ಮ ಕೈಯಲ್ಲಿ ಸಮೋಸಾ ಹಾಳೆಯಂತಿರು ಹಿಟ್ಟಿನೊಳಗೆ ಒಳಗೆ ಮೊದಲೆ ಸಿದ್ಧಪಡಿಸಿದ ಚಿಕನ್ ಮಸಾಲೆಯನ್ನು (ಚಿಕನ್ ಫಿಲ್ಲಿಂಗ್) ಹಾಕಿ ಅದನ್ನು ತ್ರಿಕೋನ ರಚಿಸಿ.
- ಚಿಕನ್ ಫಿಲ್ಲಿಂಗ್ ಅನ್ನು ಸ್ವಲ್ಪ ಹಾಕಿದ ಬಳಿಕ ಹಾಳೆಯಂತಿರುವ ಎಲ್ಲ ತುದಿಗಳಿಗೆ ಮೈದಾ ಪೇಸ್ಟ್ ಮುಚ್ಚಿ. ಎಲ್ಲ ಹಿಟ್ಟಿನ ಹಾಳೆಗಳು ಖಾಲಿಯಾಗುವವರೆಗೆ ಸಮೋಸಾಗಳನ್ನು ತಯಾರಿಸಿ ಹಾಗೂ ಅವುಗಳನ್ನು ತಟ್ಟೆಯಲ್ಲಿ ಇರಿಸಿ.
- ನಂತರ ಕಡಾಯಿಯನ್ನು ಒಲೆಯ ಮೇಲೆ ಇಡಿ, ಕರಿಯಲು ಬೇಕಾದಷ್ಟು ಎಣ್ಣೆಯನ್ನು ಸುರಿಯಿರಿ. ಎಣ್ಣೆ ಬಿಸಿಯಾದ ನಂತರ, ಸಮೋಸಾವನ್ನು ಎಣ್ಣೆಯಲ್ಲಿ ಹಾಕಿ ಹಾಗೂ ಉರಿಯನ್ನು ಮಧ್ಯಮ ಉರಿಯಲ್ಲಿ ಇರಿಸಿ, ಗೋಲ್ಡನ್ ಬ್ರೌನ್ ಬಣ್ಣಕ್ಕೆ ಫ್ರೈ ಮಾಡಿ.
- ಇದಾದ ನಂತರ ಅವುಗಳನ್ನು ತಟ್ಟೆಯಲ್ಲಿ ತೆಗೆದುಕೊಂಡು ಬಡಿಸಿ.. ತುಂಬಾ ಕುರುಕಲು ಮತ್ತು ತುಂಬಾ ಗರಿಗರಿಯಾದ ಬಾಯಲ್ಲಿ ನೀರೂರಿಸುವ ಚಿಕನ್ ಸಮೋಸಾ ಸಿದ್ಧ! ಸಮೋಸ ಜೊತೆಗೆ ಟೊಮೆಟೊ ಕೆಚಪ್ ಅಥವಾ ಪುದೀನ ಚಟ್ನಿ ಇದ್ದರೆ ಮತ್ತಷ್ಟು ರುಚಿ ಹೆಚ್ಚುತ್ತದೆ.
ಇದನ್ನೂ ಓದಿ: ಒಂದೇ ಹಿಟ್ಟಿನಿಂದ ಸ್ಪಂಜಿನಂತಹ ಇಡ್ಲಿ, ಖಡಕ್ ದೋಸೆ, ಪಡ್ಡು ಸಿದ್ಧ: ರುಚಿಯೂ ಅದ್ಭುತ!