ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ನನ್ನ ಜೊತೆ ಏನೂ ಚರ್ಚೆಯಾಗಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಸಿಎಂ, ಡಿಸಿಎಂ, ಕಾಂಗ್ರೆಸ್ ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿ ಮಾತುಕತೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಕಲ್ಯಾಣ ಕರ್ನಾಟಕ ಭಾಗ ಮತ್ತು ನಮ್ಮ ಇಲಾಖೆಯಲ್ಲಿ ಏನೇನ್ ಅಭಿವೃದ್ಧಿ ಆಗಿದೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇನೆ. ಬೇರೆ ವಿಷಯದ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಇದನ್ನೂ ಓದಿ: ನನ್ನನ್ನ ಅರೆಸ್ಟ್ ಮಾಡ್ತಾರೆ ಬಿಡಿಸಿಕೊಡಿ ಎಂದು ಯಾರ ಬಳಿಯೂ ಕೇಳಿಲ್ಲ : ಶಾಸಕ ಜಿ ಟಿ ದೇವೇಗೌಡ
ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗಿ ಎಂದರೆ ರೆಡಿನಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಹೇಳಿದ ಮೇಲೆ ಆ ವಿಚಾರ ಪ್ರಸ್ತಾಪ. ಈಗ ಯಾಕೆ ಎಂದು ಇದೇ ವೇಳೆ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅಧ್ಯಕ್ಷರಿದ್ದಾರೆ. ಅವರು ಹೇಳಿಕೆ ಕೊಡಬಹುದು, ಕೊಟ್ಟಿದ್ದಾರೆ. ಡಿಕೆಶಿ ಹೇಳಿಕೆಗೆ ನಾನೇನು ಕಮೆಂಟ್ ಮಾಡಲಿಕ್ಕೆ ಹೋಗಲ್ಲ. ಸಚಿವನಾಗಿದ್ದೇನೆ, ಅರಣ್ಯ ಮತ್ತು ಜೀವ ಶಾಸ್ತ್ರ ಇಲಾಖೆಯ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಗುಂಪುಗಾರಿಕೆ ನಮಗೆ ದೌರ್ಬಲ್ಯ, ಕಾಂಗ್ರೆಸ್ಗೆ ನಮ್ಮ ದೌರ್ಬಲ್ಯವೇ ಶಕ್ತಿ, ಅಸ್ತ್ರ: ಡಿ.ವಿ.ಸದಾನಂದ ಗೌಡ