ETV Bharat / bharat

ಕಾಕಿನಾಡ ಬಂದರಿನ ಮೂಲಕ ಅಕ್ಕಿ ಕಳ್ಳಸಾಗಣೆ: ಪಶ್ಚಿಮ ಆಫ್ರಿಕಾದ ಹಡಗಿನಲ್ಲಿ 640 ಟನ್​ ಪಿಡಿಎಸ್​ ರೈಸ್​ ವಶಕ್ಕೆ - 640 TONNES OF PDS RICE SEIZED

ಅಕ್ಕಿ ಅಕ್ರಮ ಸಾಗಣೆಯ ಕುರಿತು ಖಚಿತ ಮಾಹಿತಿ ಮೇರೆಗೆ ದಿಢೀರ್​ ದಾಳಿ ಮಾಡಿದ ಕಾಕಿನಾಡ ಜಿಲ್ಲಾಧಿಕಾರಿ ಶಾನ್​ ಮೋಹನ್ ಪಶ್ಚಿಮ ಆಫ್ರಿಕಾಕ್ಕೆ ತೆರಳುತ್ತಿದ್ದ ಹಡಗಿನಲ್ಲಿದ್ದ 640 ಟನ್​ ಪಿಡಿಎಸ್​ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

Rice smuggling through Kakinada port: 640 tonnes of PDS rice seized from West African ship
ಕಾಕಿನಾಡ ಬಂದರಿನ ಮೂಲಕ ಅಕ್ಕಿ ಕಳ್ಳಸಾಗಣೆ: ಪ್ರಶ್ಚಿಮ ಆಫ್ರಿಕಾದ ಹಡಗಿನಲ್ಲಿ 640 ಟನ್​ ಪಿಡಿಎಸ್​ ಅಕ್ಕಿ ವಶ (ETV Bharat)
author img

By ETV Bharat Karnataka Team

Published : Nov 28, 2024, 4:04 PM IST

ಕಾಕಿನಾಡ (ಆಂಧ್ರಪ್ರದೇಶ): ಕಾಕಿನಾಡ ಬಂದರಿನ ಮೂಲಕ ವಿದೇಶಕ್ಕೆ ಪಿಡಿಎಸ್​ ಅಕ್ಕಿ ಕಳ್ಳಸಾಗಣೆ ಮುಂದುವರಿದಿದ್ದು, ಬುಧವಾರ ಬಂದರಿನಲ್ಲಿ ಪರಿಶೀಲನೆ ನಡೆಸಿದ ಕಾಕಿನಾಡ ಜಿಲ್ಲಾಧಿಕಾರಿ ಶಾನ್​ ಮೋಹನ್​ ಹಡಗಿನಲ್ಲಿದ್ದ 640 ಟನ್​ ಪಿಡಿಎಸ್​ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಆಂಕಾರೇಜ್​ ಬಂದರಿನಲ್ಲಿ ದಿಢೀರ್​ ತಪಾಸಣೆ ವೇಳೆ ಪಶ್ಚಿಮ ಆಫ್ರಿಕಾಕ್ಕೆ ತೆರಳಲು ಸಿದ್ಧವಾಗಿದ್ದ ಸ್ಟೆಲ್ಲಾ ಎಲ್​ ಹಡಗಿನಲ್ಲಿ 640 ಮೆಟ್ರಿಕ್​ ಟನ್​ ಪಿಡಿಎಸ್​ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಅಕ್ಕಿ ಸಾಗಣೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಾರ್ಜ್​ ಬರ್ತಿಂಗ್​ ಪ್ರದೇಶದ ಪೊಲೀಸ್​, ಕಂದಾಯ ಮತ್ತು ನಾಗರಿಕ ಸರಬರಾಜು ತಂಡದೊಂದಿಗೆ ದಿಢೀರ್​ ದಾಳಿ ನಡೆಸಿದ ಜಿಲ್ಲಾಧಿಕಾರಿ, ಸುಮಾರು ಒಂದು ಗಂಟೆ ಕಾಲ ಸಮುದ್ರದಲ್ಲಿ ಪ್ರಯಾಣಿಸಿ, ಪಶ್ಚಿಮ ಆಫ್ರಿಕಾಕ್ಕೆ ಹೋಗಲು ಸಿದ್ಧವಾಗಿದ್ದ ಸ್ಟೆಲ್ಲಾ ಎಲ್​ ಹಡಗನ್ನು ಪರಿಶೀಲಿಸಿದರು. ಈ ವೇಳೆ ಹಡಗಿನ ಐದು ಕೊಠಡಿಗಳಲ್ಲಿ ಅಕ್ಕಿ ದಾಸ್ತಾನುಗಳಿರುವುದು ಗೊತ್ತಾಗಿದೆ. ಐದೂ ಕೊಠಡಿಗಳಲ್ಲಿ ಸಂಗ್ರಹಿಸಿದ್ದ ಅಕ್ಕಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡ ಅಕ್ಕಿಯನ್ನು ಸ್ಥಳದಲ್ಲಿಯೇ ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಯಿತು.

"52 ಸಾವಿರ ಟನ್​ ಸಾಮರ್ಥ್ಯದ ಹಡಗಿನಲ್ಲಿ 38 ಸಾವಿರ ಟನ್​ ಅಕ್ಕಿ ತುಂಬಲಾಗಿದೆ. ಅದರಲ್ಲಿ 640 ಟನ್​ ಪಿಡಿಎಸ್​​ ಅಕ್ಕಿ ಇರುವುದು ಪತ್ತೆಯಾಗಿದೆ. ಕಾಕಿನಾಡ ಬಂದರಿನಿಂದ ವಿದೇಶಕ್ಕೆ ಅಕ್ಕಿಯನ್ನು ರಫ್ತು ಮಾಡುವ ಹಡಗಿಗೆ ಲೋಡ್ ಮಾಡಲಿರುವ ಬಾರ್ಜ್ IV0073 ರಲ್ಲಿ 1,064 ಟನ್ ಅಕ್ಕಿ ದಾಸ್ತಾನುಗಳಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಇವು ಲವನ್ ಮತ್ತು ಸಾಯಿ ತೇಜಾ ಎಕ್ಸ್‌ಪೋರ್ಟ್ಸ್‌ಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಸ್ಟಾಕ್‌ಗಳ ಮಾದರಿಗಳು PDS ನ ಲಕ್ಷಣಗಳನ್ನು ತೋರಿಸಿವೆ. ಬ್ಯಾಂಕ್ ಗ್ಯಾರಂಟಿಯೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಪಿಡಿಎಸ್ ಸ್ಟಾಕ್‌ಗಳು ಎಂದು ಅವರು ಹೇಳುತ್ತಿದ್ದು, ದಾಖಲೆಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿಗೆ ಟ್ರಾಲಿ ಬ್ಯಾಗ್​ಗಳಲ್ಲಿ ಕಳ್ಳಸಾಗಣೆ ಯತ್ನ: ಏರ್​ಪೋರ್ಟ್​ನಲ್ಲಿ 40 ವನ್ಯಜೀವಿಗಳ ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.