ETV Bharat / bharat

ಚುನಾವಣೆ ಮುಗಿದು 9 ದಿನ ಕಳೆದರೂ, ಜಾರ್ಖಂಡ್​​ನಲ್ಲೇ ಸಿಲುಕಿದ 80 ಯೋಧರು; ಊಟಕ್ಕೂ ಪರದಾಟ

ಜಾರ್ಖಂಡ್​ ವಿಧಾನಸಭೆ ಚುನಾವಣೆ ಮುಗಿದ 9 ದಿನ ಕಳೆದರೂ, ಬಂದೋಬಸ್ತ್​ ನೀಡಿದ್ದ ತ್ರಿಪುರಾ ರೈಫಲ್ಸ್​ ಯೋಧರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿಲ್ಲ.

ಜಾರ್ಖಂಡ್​​ನಲ್ಲೇ ಸಿಲುಕಿದ 80 ಯೋಧರು
ಜಾರ್ಖಂಡ್​​ನಲ್ಲೇ ಸಿಲುಕಿದ 80 ಯೋಧರು (ETV Bharat)
author img

By ETV Bharat Karnataka Team

Published : Nov 28, 2024, 5:09 PM IST

ಧನ್​​ಬಾದ್ ​(ಜಾರ್ಖಂಡ್) : ಜಾರ್ಖಂಡ್​ ವಿಧಾನಸಭೆ ಚುನಾವಣೆ ಮುಗಿದು 9 ದಿನ ಕಳೆದಿದೆ. ಇಂದು (ನವೆಂವರ್​​ 28) ಸಿಎಂ ಆಗಿ ಹೇಮಂತ್​ ಸೊರೆನ್​ ಅವರು ಪ್ರಮಾಣ ವಚನ ಸ್ವೀಕಾರ ಕೂಡ ಮಾಡಲಿದ್ದಾರೆ. ಆದರೆ, ಚುನಾವಣೆ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ತ್ರಿಪುರಾ ರೈಫಲ್ ದಳದ 80 ಯೋಧರಿಗೆ ಇನ್ನೂ ಕೆಲಸದಿಂದ ಮುಕ್ತಿ ಸಿಕ್ಕಿಲ್ಲ.

ನಿಜ, ಚುನಾವಣೆ ಬಂದೋಬಸ್ತ್​ಗೆ ಹಾಕಲಾಗಿದ್ದ 80 ಯೋಧರು ಜಾರ್ಖಂಡ್​ನಲ್ಲಿಯೇ ಉಳಿದಿದ್ದಾರೆ. ಇನ್ನೂ ಅವರಿಗೆ ತಮ್ಮ ಕೇಂದ್ರ ಸ್ಥಾನಕ್ಕೆ ತೆರಳಲು ಆದೇಶ ಸಿಕ್ಕಿಲ್ಲ. ಹೀಗಾಗಿ ಎಲ್ಲರೂ, ಇಲ್ಲಿನ ಸರ್ಕಾರ ಶಾಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಶಾಲಾ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯುಂಟಾಗಿದೆ.

ತ್ರಿಪುರಾ ರೈಫಲ್​​ನ 80 ಯೋಧರನ್ನು ಧನಬಾದ್​ನ ಪ್ರೌಢಶಾಲೆಯಲ್ಲಿ ಉಳಿಸಲಾಗಿದೆ. ಐದು ವಾಹನಗಳು ಶಾಲೆಯ ಆವರಣದಲ್ಲಿ ನಿಂತಿವೆ. ಚುನಾವಣಾ ಕರ್ತವ್ಯ ಮುಗಿದಿದ್ದರೂ ಅವರನ್ನು ಕೆಲಸದಿಂದ ವಿಮುಕ್ತಿ ಮಾಡಲಾಗಿಲ್ಲ. ಇದರಿಂದ ಅವರು ಕುಟುಂಬಸ್ಥರನ್ನೂ ಭೇಟಿ ಮಾಡಲು ಸಾಧ್ಯವಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಸಬೂಬು ನೀಡುತ್ತಿರುವ ಅಧಿಕಾರಿಗಳು: ಶಾಲೆಯಲ್ಲಿ ಸಿಲುಕಿರುವ ಯೋಧರಿಗೆ ಸೂಕ್ತ ವಸತಿ ವ್ಯವಸ್ಥೆಯೂ ಇಲ್ಲವಾಗಿದೆ. ಊಟಕ್ಕೂ ಪರದಾಡುವಂತಾಗಿದೆ. ನಿಗದಿತ ದಿನ ಮುಗಿದ ಕಾರಣ ಅಧಿಕಾರಿಗಳು ವ್ಯವಸ್ಥೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರೇ, ಸ್ವತಃ ಖರ್ಚಿನಲ್ಲಿ ದಿನ ದೂಡುವಂತಾಗಿದೆ.

ತ್ರಿಪುರಾ ರೈಫಲ್ಸ್​​ ದಳದ ಕೇಂದ್ರ ಕಚೇರಿಯು ಛತ್ತೀಸ್​ಗಢದಲ್ಲಿದೆ. ಚುನಾವಣಾ ಕರ್ತವ್ಯ ಮುಗಿದ ಬಳಿಕ ಎಲ್ಲ ಸಿಬ್ಬಂದಿ ಕೇಂದ್ರ ಸ್ಥಾನಕ್ಕೆ ತೆರಳಿ ವರದಿ ಸಲ್ಲಿಸಬೇಕು. ಆದರೆ, ತೆರಳಲು ಆದೇಶ ಸಿಕ್ಕಿಲ್ಲ. ಇತ್ತ ವಾಹನಗಳಿಗೆ ಡೀಸೆಲ್​ ತುಂಬಿಸಲು ಹಣವೂ ಇಲ್ಲದೆ, ಶಾಲೆಯಲ್ಲಿ ಅವುಗಳನ್ನು ನಿಲ್ಲಿಸಲಾಗಿದೆ. ಯೋಧರು ತೆರಳಲು ರೈಲು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಊಟಕ್ಕೂ ಪರದಾಟ: ಐದು ವಾಹನಗಳನ್ನು ಶಾಲಾ ಆವರಣದಲ್ಲಿ ನಿಲ್ಲಿಸಲಾಗಿದೆ. ಬಿಹಾರದಿಂದ ಈ ವಾಹನಗಳನ್ನು ತರಿಸಲಾಗಿದೆ. ಚುನಾವಣೆ ಮುಗಿದು ವಾಪಸ್ ಹೋಗಬೇಕು. ಆದರೆ, ಹೋಗಲು ಬಿಡುತ್ತಿಲ್ಲ. ಇಲ್ಲಿ ಆಹಾರಕ್ಕೂ ಸಮಸ್ಯೆ ಇದೆ. ನಮ್ಮ ಬಳಿ ಹಣವಿಲ್ಲ. ಪೊಲೀಸ್​ ಇಲಾಖೆಗೆ ಹಣ ಕೇಳಿದರೆ, ಚುನಾವಣೆ ಮುಗಿದಿದೆ. ವ್ಯವಸ್ಥೆ ಮಾಡಲು ಆಗಲ್ಲ ಎನ್ನುತ್ತಿದ್ದಾರೆ ಎಂದು ವಾಹನ ಚಾಲಕ ಮಹೇಶ್ ದಾಸ್ ಹೇಳಿದರು.

ತ್ರಿಪುರಾ ರೈಫಲ್‌ನ ಸುಬೇದಾರ್ ಪರಶುರಾಮ್ ದೇವ್ ವರ್ಮಾ ಮಾತನಾಡಿ, ಯೋಧರು ತೆರಳಲು ರೈಲುಗಳು ಲಭ್ಯವಿಲ್ಲದ ಕಾರಣ ಇಲ್ಲಿಯೇ ಉಳಿಯಬೇಕಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಇಲ್ಲಿನ ಆಡಳಿತದಿಂದ ಯಾವುದೇ ನೆರವು ಸಿಗುತ್ತಿಲ್ಲ. ಸ್ವಂತ ಹಣದಲ್ಲಿ ದಿನದೂಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಇನ್ನೂ ಕೆಲವು ಪಡೆಗಳನ್ನು ಹೀಗೆಯೇ ಉಳಿಸಿಕೊಳ್ಳಲಾಗಿದೆ. ಕರ್ತವ್ಯದಿಂದ ಬಿಡುಗಡೆಗೆ ಆದೇಶ ಬಂದಿಲ್ಲ. ಶಾಲೆಯಲ್ಲಿ ಉಳಿದುಕೊಂಡ ಕಾರಣ, ಮಕ್ಕಳ ವಿದ್ಯಾಭ್ಯಾಸಕ್ಕೂ ಅಡ್ಡಿಯಾಗಿದೆ ಅವರು ತಿಳಿಸಿದರು.

ನಿಯಮಗಳ ಪ್ರಕಾರ, ಚುನಾವಣಾ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ, ಎಲ್ಲಾ ಯೋಧರು ಪ್ರಧಾನ ಕಚೇರಿಗೆ ವರದಿ ಮಾಡಬೇಕು. ಅದರ ನಂತರವೇ ಅವರು ಕರ್ತವ್ಯದಿಂದ ಬಿಡುಗಡೆ ಹೊಂದಲು ಸಾಧ್ಯ. ಇಲ್ಲವಾದಲ್ಲಿ ಶಿಕ್ಷೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ನವಜಾತ ಶಿಶುವಿಗೆ ಗಂಭೀರ ಸಮಸ್ಯೆ: ವೈದ್ಯರ ಮೇಲೆ ನಿರ್ಲಕ್ಷ್ಯ ಆರೋಪ, ತನಿಖೆಗೆ ತಂಡ ರಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.