Simple One Gen 1.5 Electric Scooter Launched: ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಕಂಪೆನಿ ಸಿಂಪಲ್ ಎನರ್ಜಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಸಿಂಪಲ್ ಒನ್‌ನ ಅಪ್ಡೇಟ್ ವರ್ಷನ್ ಜೊತೆಗೆ ಬಂದ ಫ್ಲ್ಯಾಗ್ಶೀಪ್ ಸ್ಕೂಟರ್ ಆಗಿದೆ. ಸಿಂಪಲ್ ಎನರ್ಜಿ ಇದನ್ನು ಹೊಸ ಸಾಫ್ಟ್‌ವೇರ್ ಮತ್ತು ಹೊಸ ಡಿಸೈನ್ನೊಂದಿಗೆ ರಚಿಸಿದೆ. ಅಷ್ಟೇ ಅಲ್ಲ, ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಟೂ-ವೀಲರ್ಸ್ ನೀಡುವ ವಾಹನಗಳಲ್ಲಿ ಅತ್ಯಧಿಕ ರೇಂಜ್ನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.
ಸಿಂಪಲ್ ಒನ್ ಜೆನ್ 1.5 ಲಾಂಚ್: ಹೊಸ ಸ್ಕೂಟರ್‌ನ ಹೆಸರು 'ಒನ್ ಜೆನ್ 1.5'. ಇದನ್ನು 248 ಕಿ.ಮೀ ಮೈಲೇಜ್ ರೇಂಜ್ನಲ್ಲಿ ಪರಿಚಯಿಸಲಾಗಿದೆ. ಹಿಂದಿನ ಮಾದರಿಗಿಂತ 36 ಕಿ.ಮೀ. ಹೆಚ್ಚು ಮೈಲೇಜ್ ನೀಡುತ್ತದೆ. ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಟೂ-ವೀಲರ್ ನೀಡುವ ವಾಹನಗಳಲ್ಲಿ ಅತ್ಯುನ್ನತ ಶ್ರೇಣಿಯಾಗಿದೆ. ಆದರೆ, ಹಿಂದಿನ ಮಾದರಿಯಾದ 'ಸಿಂಪಲ್ ಒನ್ ಜೆನ್ 1' ಸ್ಕೂಟರ್‌ನಲ್ಲಿ 212 ಕಿ.ಮೀ. ರೇಂಜ್ ನೀಡುತ್ತದೆ.
ಫೀಚರ್ಸ್: 'ಸಿಂಪಲ್ ಒನ್ ಜೆನ್ 1.5' ಸ್ಕೂಟರ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳಿವೆ. ಬ್ಲೂಟೂತ್, ಕಾಲ್, ಎಸ್ಎಮ್ಎಸ್ ಮತ್ತು ವಾಟ್ಸ್‌ಆ್ಯಪ್ ನೋಟಿಫಿಕೇಶನ್ ಒದಗಿಸುವ ಆ್ಯಪ್ ಇಂಟಿಗ್ರೇಷನ್ ಜೊತೆ ನ್ಯಾವಿಗೇಷನ್, OTA ಅಪ್ಡೇಟ್ಸ್, ಆಟೋ ಬ್ರೈಟ್ನೆಸ್, ಟೈರ್‌ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹೊಸ ರೈಡ್ ಮೋಡ್ಸ್, ಪಾರ್ಕ್ ಅಸಿಸ್ಟಂಟ್ ಫೀಚರ್, ಫೈಂಡ್ ಮೈ ವೆಹಿಕಲ್ ಫೀಚರ್ಸ್, ರೀಜನರೆಟಿವ್ ಬ್ರೇಕಿಂಗ್, ರ್ಯಾಪಿಡ್ ಬ್ರೇಕ್, ಡ್ಯಾಶ್ ಥೀಮ್, ಟ್ರಿಪ್ ಹಿಸ್ಟರಿ ಮತ್ತು ಸ್ಟಾಟಿಸ್ಟಿಕ್ಸ್, USB ಚಾರ್ಜಿಂಗ್ ಪೋರ್ಟ್ ಮತ್ತು ಸೌಂಡ್ನಂತಹ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಪವರ್‌ಟ್ರೇನ್: 'ಸಿಂಪಲ್ ಒನ್ ಜೆನ್ 1.5' ಎಲೆಕ್ಟ್ರಿಕ್ ಸ್ಕೂಟರ್ ಮೋಟಾರ್ 8.5kW ಪವರ್ ಮತ್ತು 72Nm ಟಾರ್ಕ್ ಉತ್ಪಾದಿಸುತ್ತದೆ. ಸ್ಕೂಟರ್ ಕೇವಲ 2.77 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 40 ಕಿ.ಮೀ. ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. 30 ಲೀಟರ್‌ಗಳಿಗಿಂತ ಹೆಚ್ಚು ಬೂಟ್‌ಸ್ಪೇಸ್ ಹೊಂದಿದೆ. ಅಂದರೆ, ಸೀಟಿನ ಕೆಳಗಿರುವ ಮುಕ್ತ ಸ್ಥಳ. ಆದ್ದರಿಂದ ಇದನ್ನು ಅತ್ಯುತ್ತಮ ಬೂಟ್‌ಸ್ಪೇಸ್ ಎಲೆಕ್ಟ್ರಿಕ್ ಸ್ಕೂಟರ್ ಎಂದು ಕರೆಯುತ್ತದೆ.
ಬ್ಯಾಟರಿ ಪ್ಯಾಕ್: ಸ್ಕೂಟರ್‌ನಲ್ಲಿ ಒದಗಿಸಲಾದ ಬ್ಯಾಟರಿ ಸೆಟಪ್‌ನಲ್ಲಿ ಫಿಕ್ಸ್ಡ್ 3.7kWh ಬ್ಯಾಟರಿ ಪ್ಯಾಕ್ ಮತ್ತು 1.2kWh ರಿಮೂವ್ಬಲ್ ಬ್ಯಾಟರಿ ಒದಗಿಸಿದೆ. ಆದರೂ ಸ್ಕೂಟರ್‌ನ ಮೈಲೇಜ್ ರೇಂಜ್ ಹೆಚ್ಚಿಸಲು, ಬಳಕೆದಾರರು ಈ ಎರಡು ಬ್ಯಾಟರಿಗಳನ್ನು ಸಾಫ್ಟ್‌ವೇರ್‌ನೊಂದಿಗೆ ಅತ್ಯುತ್ತಮವಾಗಿಸುವ ಅಗತ್ಯವಿದೆ. ಇವುಗಳ ಜೊತೆಗೆ, ಸ್ಕೂಟರ್ 7 ಇಂಚಿನ ಡಿಜಿಟಲ್ ಡಿಸ್ಪ್ಲೇ ಮತ್ತು LED ಲೈಟಿಂಗ್ ಅನ್ನು ಸಹ ಹೊಂದಿದೆ.
ಬೆಲೆ ಎಷ್ಟು?: ಬೆಂಗಳೂರಿನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 1.66 ಲಕ್ಷ (ಎಕ್ಸ್ ಶೋ ರೂಂ).
ಮಾರುಕಟ್ಟೆ ಸ್ಪರ್ಧಿಗಳು: ಸಿಂಪಲ್ ಎನರ್ಜಿ ಭಾರತದ 23 ರಾಜ್ಯಗಳಲ್ಲಿ 150 ಡೀಲರ್‌ಶಿಪ್‌ಗಳು ಮತ್ತು 200 ಸರ್ವೀಸ್ ಸೆಂಟರ್ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಂಪೆನಿಯ ಈ ಹೊಸ 'ಸಿಂಪಲ್ ಒನ್ ಜೆನ್ 1.5' ಸ್ಕೂಟರ್, 'ಓಲಾ ಎಸ್1 ಪ್ರೊ ಜೆನ್-3' ಮತ್ತು 'ಅಥರ್ 450ಎಕ್ಸ್' ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಠಕ್ಕರ್ ನೀಡಬಲ್ಲದು.
ಇದನ್ನೂ ಓದಿ: 'ಕ್ರೂ-10' ಮಿಷನ್ ಉಡ್ಡಯನ ದಿನ ಘೋಷಿಸಿದ ನಾಸಾ: ಶೀಘ್ರದಲ್ಲೇ ಸುನೀತಾ, ಬುಚ್ ಭೂಮಿಗೆ