ಎಲೂರು, ಆಂಧ್ರಪ್ರದೇಶ: ಸಾಂಪ್ರಾದಾಯಿಕ ಕೃಷಿ ಪ್ರಾಬಲ್ಯ ಹೊಂದಿರುವ ಎಲೂರಿನಲ್ಲಿ ಯುವ ರೈತನೊಬ್ಬ ನಾವೀನ್ಯತೆ ಕೃಷಿ ಪದ್ದತಿ ಮೂಲಕ ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಇಲ್ಲಿನ ಪಂಚಾಯತ್ ಕಾರ್ಯದರ್ಶಿ ವೆಂಕಟೇಶ್ ಕೇವಲ ಕೃಷಿ ಮಾತ್ರವೇ ಮಾಡದೇ ತೆಲುಗು ರಾಜ್ಯದಲ್ಲಿನ ಅನೇಕ ಯುವ ರೈತರಿಗೆ ಕೃಷಿ ಭವಿಷ್ಯ ರೂಪಿಸುತ್ತಿದ್ದಾರೆ. ಭಾರತದಲ್ಲಿ ಅಪರೂಪಕ್ಕೆ ಕಾಣುವ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಸ್ವರ್ಗದ ಹಣ್ಣು ಎಂದು ಗುರುತಿಸಿಕೊಂಡಿರುವ ಜಿಎಸಿ ಎಂಬ ವಿಶಿಷ್ಟ ಹಣ್ಣಿನಿಂದ ಇವರ ಕೃಷಿ ಕ್ರಾಂತಿ ಆರಂಭವಾಗಿದೆ.
ಜಿಎಸಿ ಹಣ್ಣು ಸಮೃದ್ಧ ಪೋಷಕಾಂಶಗಳಿದ್ದ ಕೂಡಿದ್ದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜಾಗತಿಕವಾಗಿ ಸಾಕಷ್ಟು ಬೇಡಿಕೆ ಹೊಂದಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಇದು ಕಾಣಸಿಗುವುದು ಅಪರೂಪ. ಇದೇ ಕಾರಣದಿಂದ ವೆಂಕಟೇಶ್, ಇದನ್ನು ಬೆಳೆಯುವ ನಿರ್ಧಾರ ಮಾಡಿದ್ದರು. ಎಲೂರಿನಲ್ಲಿ ಈ ಹಣ್ಣಿನ ಕೃಷಿ ಆರಂಭಿಸಿದ ವೆಂಕಟೇಶ್ ಕೇವಲ ತಮ್ಮ ಜೀವನ ಪರಿವರ್ತಿಸುವಲ್ಲಿ ಮಾತ್ರ ಕಾರಣವಾಗದೇ, ಯಶಸ್ಸನ್ನು ಸಾಧಿಸುವ ನಾವಿನ್ಯತೆ ದಾರಿ ಹುಡುಕುವ ಅನೇಕ ಯುವ ರೈತರಿಗೆ ಉದಾಹರಣೆಯಾಗಿದ್ದಾರೆ.
ನಾವೀನ್ಯತೆ ಮೂಲಕ ಮಹಾನ್ ಕ್ರಾಂತಿ ಮಾಡಿದ ಯುವ ರೈತ (ETV Bharat) ಕೃಷಿಯ ಕನಸು:ವೆಂಕಟೇಶ್ಗೆ ಕೃಷಿ ಎಂಬ ಪ್ರೀತಿ ಬಾಲ್ಯದಿಂದಲೇ ಆರಂಭವಾಗಿತ್ತು. ವಿಶಿಷ್ಟ ಮತ್ತು ಮೌಲ್ಯಯುತ ಸಸ್ಯ, ಕೃಷಿ ಅವುಗಳಗ ಆರೈಕೆ, ಬೆಳವಣಿಗೆಯ ಬಗ್ಗೆ ಸದಾ ಕುತೂಹಲವೊಂದು ಇವರಲ್ಲಿತ್ತು. ಇವರ ಈ ಹುಮ್ಮಸ್ಸೇ GAC ಹಣ್ಣಿನ ಅವಿಷ್ಕಾರಕ್ಕೆ ಕಾರಣವಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಜನಪ್ರಿಯತೆ ಮತ್ತು ಆರೋಗ್ಯ ಪ್ರಯೋಜನ ಅರಿತು, ಅದರ ಕೃಷಿಗೆ ಸಂಶೋಧನೆ ಆರಂಭಿಸಿದರು.
ಇದಕ್ಕಾಗಿ 2023ರಲ್ಲಿ ಜಿಎಸಿ ಸಸಿಗಳಿಗಾಗಿ ಕೇರಳಕ್ಕೆ ಪ್ರವಾಸ ಕೈಗೊಂಡ ಅವರು, ಅದರ ಜೊತೆಗೆ ಆನ್ಲೈನ್ ಸಂಶೋಧನೆ ಮತ್ತು ಪ್ರಯೋಗಕ್ಕೆ ಮುಂದಾದರು. ತಮ್ಮ ಸ್ವಗ್ರಾಮವಾದ ಮಮಿಡಿಗೊಂಡಿಯಲ್ಲಿ ಇದರ ಕೃಷಿ ಆರಂಭಿಸಿದರು. ಇದಕ್ಕಾಗಿ ಆಧುನಿಕ ಕೃಷಿ ತಂತ್ರಜ್ಞಾನವನ್ನು ಆರಂಭಿಸಿ ಇಳುವರಿಯನ್ನು ಹೆಚ್ಚು ಪಡೆದರು. ತಮ್ಮ ಶ್ರಮಕ್ಕೆ ಬೇಗವೇ ಫಲಕಂಡಿ ಉತ್ತಮ ಗಳಿಕೆಯನ್ನು ಪಡೆದರು.
ನಾವೀನ್ಯತೆ ಮೂಲಕ ಮಹಾನ್ ಕ್ರಾಂತಿ ಮಾಡಿದ ಯುವ ರೈತ ವೆಂಕಟೇಶ್ (ETV Bharat) ನಾವೀನ್ಯತೆಗೆ ನಾಂದಿ: ವೆಂಕಟೇಶ್ ಅವರ ಯಶಸ್ಸಿನ ಮಂತ್ರ ಅಡಗಿರುವುದು ನಾವೀನ್ಯತೆ ಎಂಬ ಮನಸ್ಥಿತಿಯಲ್ಲಿ. ಬಹುತೇಕ ಕೃಷಿಕರು ಸಂಪ್ರಾದಾಯಿಕ ಮಾದರಿ ಅನುಸರಿಸುವಾಗ, ಇವರು ತಂತ್ರಜ್ಞಾನ ಮತ್ತು ತಂತ್ರಗಾರಿಕೆ ಬಳಸಿಕೊಂಡ ಹೆಚ್ಚಿನ ಬೆಳೆ ತೆಗೆದರು. ಕೈ ಪರಾಗಸ್ಪರ್ಶದ ಎಚ್ಚರಿಕೆ ಹಜ್ಜೆ ಕೂಡ ಅಧಿಕ ಇಳುವರಿ ಪಡೆಯುವಲ್ಲಿ ಸಹಾಯ ಮಾಡಿತು, ಮಾರುಕಟ್ಟೆ ಬೇಡಿಕೆ ಪೂರೈಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ.
ನಾನು ಏನಾದರೂ ವಿಭಿನ್ನವಾಗಿ ಮಾಡುವ ಉದ್ದೇಶ ಹೊಂದಿದ್ದೆ. ಅದು ನೈಜವಾಗಿ ಪರಿಣಾಮ ಬೀರಿತು. ಜಿಎಸಿ ಹಣ್ಣು ಭಾರತದಲ್ಲಿ ಅಪರೂಪದ್ದಾಗಿದು, ಇದನ್ನು ಅವಕಾಶವಾಗಿ ಬಳಕೆ ಮಾಡಿಕೊಂಡು ನಿರೀಕ್ಷಿತ ಫಲ ಪಡೆದೆ ಎನ್ನುತ್ತಾರೆ ವೆಂಕಟೇಶ್.
ಸ್ವರ್ಗದ ಹಣ್ಣು ಎಂದು ಗುರುತಿಸಿಕೊಂಡಿರುವ ಜಿಎಸಿ (ETV Bharat) ಆರೋಗ್ಯ ಪ್ರಯೋಜನ ಮತ್ತು ಮಾರುಕಟ್ಟೆ ಬೇಡಿಕೆ:ಆಂಟಿಆಕ್ಸಿಡೆಂಟ್, ವಿಟಮಿನ್, ಖನಿಜಾಂಶಗಳಿಂದ ಸಮೃದ್ಧವಾಗಿರುವ ಹಣ್ಣು ಈ ಜಿಎಸಿ ಆಗಿದೆ, ಇದು ಖಿನ್ನತೆ, ಕ್ಯಾನ್ಸರ್, ಹೃದಯ ರೋಗವನ್ನು ತಡೆಗಟ್ಟಿ, ಪ್ರತಿರೋಧಕ ಶಕ್ತಿ ಹೆಚ್ಚಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜಿಎಸಿ ಹಣ್ಣಿನ ಬೇಡಿಕೆ ಅಂತಾರಾಷ್ಟ್ರೀಯ ಮತ್ತು ಭಾರತದ ಮಾರುಕಟ್ಟೆಯಲ್ಲೂ ಭಾರಿ ಪ್ರಮಾಣದಲ್ಲಿದೆ.
ಸದ್ಯ ಒಂದು ಜಿಎಸಿ ಹಣ್ಣಿನ ಬೆಲೆ ಅದರ ಗಾತ್ರ ಮತ್ತು ಗುಣಮಟ್ಟದ ಆಧಾರದ 500 ರಿಂದ 1.500ರೂ ಇದೆ. ಪ್ರತಿ ಗಿಡವೂ 20 ವರ್ಷಗಳ ಕಾಲ ಉತ್ಪಾದನೆ ನೀಡುವುದರಿಂದ ಇದು ದೀರ್ಘಕಾಲಿಕ ಲಾಭಾದಾಯಕ ಕೃಷಿಯಾಗಿದೆ ಎನ್ನುತ್ತಾರೆ ವೆಂಕಟೇಶ್.
ಜಿಎಸಿ ಖರೀದಿಯಲ್ಲಿ ಜನ (ETV Bharat) ಭವಿಷ್ಯದ ಗುರಿ: ಜಿಎಸಿ ಹಣ್ಣಿನೊಂದಿಗೆ ಮಾತ್ರ ವೆಂಕಟೇಶ್ ಪ್ರಯಾಣವಿಲ್ಲ. ಅವರ ಮಮಿಡಿಗೊಂಡಿಯ ಕೃಷಿ ಹೊಲದಲ್ಲಿ 50ಕ್ಕೂ ಹೆಚ್ಚು ಹಣ್ಣು ಬೆಳೆಯಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಅವೊಕಾಡೊ, ಸೇಬು ಮತ್ತು ಡ್ರಾಗನ್ ಹಣ್ಣಾಗಿದೆ. ಕೃಷಿಯಲ್ಲಿನ ವೈವಿಧ್ಯತೆ ಕೇವಲ ಆದಾಯವನ್ನು ಮಾತ್ರ ಇವರಿಗೆ ನೀಡಿಲ್ಲ. ಬದಲಾಗಿ ಕೃಷಿಕರಿಗೆ ಒಬ್ಬ ಮಾದರಿ ಯುವ ರೈತನಾಗಿ ಇವರು ನಿಂತಿದ್ದಾರೆ.
ಇದರ ಜೊತೆಗೆ ವೆಂಕಟೇಶ್ ನಿಯಮಿತವಾಗಿ ಭಾರತದೆಲ್ಲೆಡೆ ತೋಟಗಾರಿಕೆ ಪ್ರದರ್ಶನದಲ್ಲಿ ಭಾಗಿಯಾಗುವ ಮೂಲಕ ಇತರ ರೈತರಿಗೆ ಜ್ಞಾನ ಮತ್ತು ಅನುಭವ ನೀಡುತ್ತಾರೆ. ರೈತರು ಕಲಿಕೆ ಮತ್ತು ಅಳವಡಿಕೆ ಒಗ್ಗೂಡಿಸಿಕೊಳ್ಳುವುದು ಅವಶ್ಯ. ಭವಿಷ್ಯದ ಕೃಷಿಯು ನಾವೀನ್ಯತೆ ಮತ್ತು ಹೊಸ ಐಡಿಯಾಗಳ ಅವಿಷ್ಕಾರದಲ್ಲಿದೆ ಎಂಬ ಗೆಲುವಿನ ಮಂತ್ರ ಹೇಳುತ್ತಾರೆ.
ನಾವೀನ್ಯತೆ ಮೂಲಕ ಮಹಾನ್ ಕ್ರಾಂತಿ ಮಾಡಿದ ಯುವ ರೈತ ವೆಂಕಟೇಶ್ (ETV Bharat) ಪ್ರೇರಣಾದಾಯಕ ವ್ಯಕ್ತಿತ್ವ:ಆಸಕ್ತಿ, ದೀರ್ಘಪ್ರಯತ್ನ ಮತ್ತು ಕ್ರಿಯಾತ್ಮಕತೆ ಕೃಷಿ ಅಭ್ಯಾಸವನ್ನು ಪರಿವರ್ತಿಸುವಲ್ಲಿ ಸಹಾಯ ಎಂಬುದಕ್ಕೆ ವೆಂಕಟೇಶ್ ಉತ್ತಮ ಉದಾಹರಣೆ ಆಗಿದ್ದಾರೆ . ತೆಲುಗು ರಾಜ್ಯದಲ್ಲಿ ಜಿಎಸಿ ಹಣ್ಣು ಪರಿಚಯಿಸುವ ಮೂಲಕ ಉತ್ತಮ ಮನಸ್ಥಿತಿ ಮತ್ತು ನಾವೀನ್ಯತೆಯ ಅಳವಡಿಕೆಗಳು ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ.
ಇವರ ಈ ಸಾಧನೆ ಅನೇಕ ಕೃಷಿಕರನ್ನು ಪ್ರೇರಣೆ ಮಾಡಿದೆ. ಕಠಿಣ ಶ್ರಮ ಮತ್ತು ಸಮರ್ಪಣೆಯಿಂದ ಕನಸು ನನಸಾಗಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ವೆಂಕಟೇಶ್ ಕೇವಲ ಜಿಎಸಿ ಹಣ್ಣು ಮಾತ್ರವಲ್ಲದೇ, ಭಾರತದ ಭವಿಷ್ಯದ ಕೃಷಿ ಬೆಳವಣಿಗೆಯನ್ನು ತಮ್ಮ ಅವಿಷ್ಕಾರದಿಂದ ನಡೆಸಿದ್ದಾರೆ.
ಸ್ವರ್ಗದ ಹಣ್ಣು ಎಂದು ಗುರುತಿಸಿಕೊಂಡಿರುವ ಜಿಎಸಿ (ETV Bharat) ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಪ್ಪುಗಟ್ಟುತ್ತಿರುವ ನೀರು: ತೀವ್ರ ಚಳಿಯ ಚಿಲೈ ಕಲಾನ್ ಆರಂಭ