ಶ್ರೀನಗರ: ಕಣಿವೆ ರಾಜ್ಯದಲ್ಲಿ ಮೈನಸ್ ಡಿಗ್ರಿ ತಾಪಮಾನ ಮುಂದುವರೆದಿದ್ದು, ಚಿಲೈ ಕಲಾನ್ ಋತು ಆರಂಭಕ್ಕೆ ಸಜ್ಜಾಗಿದೆ. ಡೆಡ್ ವಿಂಟರ್ ಎಂದು ಕರೆಯಲಾಗುವ ಈ ಕಾಲವೂ ಮೈ ನಡುಗುವ ಚಳಿ ಬಳಿಕ ಕಾಶ್ಮೀರದಲ್ಲಿ ಆರಂಭವಾಗುತ್ತದೆ. ಕಳೆದೆರಡು ದಿನಗಳಿಂದ ಕಾಶ್ಮೀರದಲ್ಲಿ -8.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, 1974ರ ಬಳಿಕ ಅತ್ಯಂತ ಚಳಿಯ ರಾತ್ರಿ ಇದಾಗಿದೆ.
ಕಾಶ್ಮೀರದಲ್ಲಿ ಭಾರೀ ಚಳಿಗೆ ಈಗಾಗಲೇ ನೀರು ಘನೀಕರಿಸುತ್ತಿದ್ದು, ಮೂರು ಜಿಲ್ಲೆಗಳಲ್ಲಿ ಮೈನಸ್ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅನಂತ್ನಾಗ್ನಲ್ಲಿ -10.5, ಶೋಫಿಯಾನದಲ್ಲಿ -10.4 ಮತ್ತು ಪುಲ್ವಾಮಾದಲ್ಲಿ -10.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
1891ರ ಬಳಿಕ ಡಿಸೆಂಬರ್ನಲ್ಲಿ ಮೂರನೇ ಅತ್ಯಂತ ಚಳಿ ದಿನ ಶುಕ್ರವಾರ ರಾತ್ರಿ ದಾಖಲಾಗಿದೆ. ಚಳಿಗಾಲದಲ್ಲಿ ಇಲ್ಲಿನ ದಾಖಲೆ ತಾಪಮಾನವೂ 1934ರ ಡಿಸೆಂಬರ್ 13 ರಂದು -12.8ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಚಿಲ್ಲೈ ಕಾಲನ್ ಆರಂಭ: ಕಾಶ್ಮೀರದಲ್ಲಿ ತೀವ್ರ ಚಳಿ ಅವಧಿಯನ್ನು ಚಿಲ್ಲೈ ಕಾಲನ್ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 21 ರಿಂದ ಜನವರಿ 31ರವರೆಗೆ ಈ ಋತುಮಾನ ಇರುತ್ತದೆ. ಇದಾದ ಬಳಿಕ ಮುಂದಿನ 20 ದಿನ ಅಂದರೆ ಜನವರಿ 31 ರಿಂದ ಫೆಬ್ರವರಿ 19ರವರೆಗೆ ಚಿಲ್ಲೈ ಖುರ್ದ್ ಆಗಿದ್ದು, ಮುಂದಿನ ಹತ್ತು ದಿನ ಅಂದರೆ ಫೆಬ್ರವರಿ 20 ರಿಂದ ಮಾರ್ಚ್ 2ರವರೆಗೆ ಚಿಲ್ಲೈ ಬಚ್ಚಾ ಅವಧಿಯಾಗಿದೆ. ಮೊದಲಿನ ಎರಡು ಅವಧಿಗೆ ಹೋಲಿಕೆ ಮಾಡಿದಾಗ ಈ ಸಮಯದಲ್ಲಿ ಚಳಿ ಕೊಂಚ ಸುಧಾರಣೆ ಹೊಂದಿರುತ್ತದೆ.
ಹೆಪ್ಪುಗಟ್ಟುತ್ತಿರುವ ದಾಲ್ ಸರೋವರ: ಚಳಿ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಕಡೆ ನೀರಿನ ಪೂರೈಕ ಮೂಲಗಳು ಘನೀಕರಿಸುತ್ತಿದೆ. ಅದರಲ್ಲೂ ಇಲ್ಲಿನ ಪ್ರಖ್ಯಾತ ಸಿಹಿ ನೀರಿನ ಸರೋವರದಲ್ಲಿ ಈಗಾಗಲೇ ನೀರು ಘನೀಕರಿಸಲು ಪ್ರಾರಂಭಿಸಿದೆ. ನಗರದಲ್ಲಿ ಶುಷ್ಕತೆ ಮುಂದುವರೆದಿದ್ದು ಇದು ಜನರಲ್ಲಿ ಕೆಮ್ಮು ಮತ್ತು ಚಳಿಗೂ ಕಾರಣವಾಗವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ 26ರವರೆಗೆ ಒಣ ಹವೆ ಮುಂದುವರೆಯಲಿದ್ದು, ಡಿಸೆಂಬರ್ 21-22ರಂದು ಎತ್ತರ ಪ್ರದೇಶದಲ್ಲಿ ಹಗುರ ಹಿಮ ಬೀಳಲಿದೆ. ಅನೇಕ ಪ್ರದೇಶದಲ್ಲಿ ಡಿಸೆಂಬರ್ 27ರ ರಾತ್ರಿ ಮತ್ತು ಡಿಸೆಂಬರ್ 28ರಂದು ಹಿಮ ಮಳೆ ಕಾಣ ಬಹುದಾಗಿದೆ. ಈ ನಡುವೆ ಕಣಿವೆಯಲ್ಲಿ ಮುಂದಿನ ಕೆಲವು ದನಗಳ ಕಾಲ ಶೀತ ಅಲೆ ಮುಂದುವರೆಯಲಿದೆ.
ಹಿಮಕ್ಕಾಗಿ ಕಾಶ್ಮೀರಿಯರ ಪ್ರಾರ್ಥನೆ: ಮೈನಡುಕುವ ಚಳಿಯ ನಡುವೆ ಕಣಿವೆ ಸ್ವರ್ಗದಂತೆ ಕಾಣವುದು ಹಿಮದ ಹೊದಿಕೆ ಆವೃತವಾದಾಗ ಶುಷ್ಕ ಹವಾಮಾನ ಕೊನೆಗೊ ಈ ನಡುವೆ ಕಣಿವೆಯಲ್ಲಿ ಅನೇಕ ಭಾಗದಲ್ಲಿ ತೀವ್ರ ಚಳಿಯಿಂದಾಗಿ ನೀರಿನ ಪೈಪ್ಗಳು ಘನೀಕರಿಸುತ್ತಿದ್ದು, ವಿದ್ಯುತ್ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಉತ್ತಮ ಹಿಮ ಬಿದ್ದಾಗ ಶುಷ್ಕತೆ ನೀಗಿಸಲಿದೆ. ಆದರೆ ಚಳಿಯ ವಾತಾವರಣ ಕಣಿವೆ ಜನರಲ್ಲಿ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.
ಪ್ರದೇಶವಾರು ತಾಪಮಾನ: ಕಾಶ್ಮೀರ: ಶ್ರೀನಗರದಲ್ಲಿ -8.5, ಕ್ವಾಜಿಗುಂಡ್ದಲ್ಲಿ -8.2, ಪಹಲ್ಗಾಮ್ದಲ್ಲಿ -8.6, ಕುಪ್ವಾರದಲ್ಲಿ -7.2, ಕೊಕೆರ್ನಾಗ್ -5.8, ಗುಲ್ಮಾರ್ಗ್ದಲ್ಲಿ -6.2, ಸೋನ್ಮಾರ್ಗ್ನಲ್ಲಿ -8.8, ಬಂಡಿಪೊರದಲ್ಲಿ -7.4, ಬರಮುಲ್ಲಾದಲ್ಲಿ -6.2, ಬುಡ್ಗಾಮ್ನಲ್ಲಿ -8.3, ಗಂಡೆರ್ಬಲ್ನಲ್ಲಿ -7.1, ಪುಲ್ವಾಮದಲ್ಲಿ -10.3, ಅನಂತ್ನಾಗ್ನಲ್ಲಿ -10.5, ಕುಲ್ಗಾಂನಲ್ಲಿ -6.8, ಶೋಫಿಯಾನ್ನಲ್ಲಿ -10.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಜಮ್ಮು: ಜಮ್ಮುನಲ್ಲಿ 5.4, ಬನಿಹಾಲ್ನಲ್ಲಿ -4.4, ಬಟೊಟೆಯಲ್ಲಿ 0.5, ಕತ್ರಾ 6.0, ಭಡೆರ್ವಾಹದಲ್ಲಿ -2.3, ಕಿಶ್ತ್ವಾರದಲ್ಲಿ 1.1, ಪಡ್ಡೆರ್ನಲ್ಲಿ -8.0, ರಂಬನ್ನಲ್ಲಿ 3.6, ಪೂಂಚ್ನಲ್ಲಿ 1.5, ರಾಜೌರಿಲ್ಲಿ 1.7, ಕಥುವಾದಲ್ಲಿ 5.7, ರಿಸಾಯಿ 2.8, ಉದ್ದಂಪುರ್ನಲ್ಲಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್ನ ಲೇಹ್ನಲ್ಲಿ -12.5, ಕಾರ್ಗಿಲ್ನಲ್ಲಿ -14.3 ಡಿಗ್ರಿ ಸೆಲ್ಸಿಸ್ ದಾಖಲಾಗಿದೆ.
ಇದನ್ನೂ ಓದಿ: ಯುಎಸ್ ವೀಸಾ ಸಂದರ್ಶನ ನಿಯಮ ಮಾರ್ಪಾಡು: ಕಾಯುವ ಸಮಯ ಕಡಿಮೆಯಾಗುವ ನಿರೀಕ್ಷೆ