ಹೈದರಾಬಾದ್:ಜಪಾನ್‌ನಲ್ಲಿ ಮದುವೆಗಳು ಕಡಿಮೆಯಾಗುತ್ತಿರುವ ನಡುವೆ ಸ್ನೇಹ ವಿವಾಹ (Friendship Marriage) ಎಂದು ಕರೆಯಲ್ಪಡುವ ಸಂಬಂಧವೊಂದು ನಿಧಾನವಾಗಿ ಬೇರೂರುತ್ತಿದೆ. ವಿಶೇಷವಾಗಿ ಕ್ಷೀಣಿಸುತ್ತಿರುವ ಜನಸಂಖ್ಯೆಯ ಸವಾಲುಗಳನ್ನು ಎದುರಿಸುತ್ತಿರುವ ದೇಶದಲ್ಲಿ ಈ ಪ್ರವೃತ್ತಿಯು ಪಾಟ್ನರ್ಸ್ಗಳಿಗೆ ವಿಶಿಷ್ಟವಾದ ವಿಧಾನ ಹಾಗೂ ಅನುಭವ ನೀಡುತ್ತಿದೆ.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (SCMP) ಯ ವರದಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಯುವ ಜಪಾನಿ ಮಂದಿ ವೈವಾಹಿಕ ಒಕ್ಕೂಟದ ಈ ಪರ್ಯಾಯ ರೂಪವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ಪ್ರಣಯ ಪ್ರೀತಿ ಅಥವಾ ಲೈಂಗಿಕ ಅನ್ಯೋನ್ಯತೆ ಇಲ್ಲದ ಬಂಧದಿಂದ ನಿರೂಪಿಸಲ್ಪಟ್ಟಿದೆ. ಬದಲಿಗೆ ಒಡನಾಟ ಮತ್ತು ಪರಸ್ಪರ ಗೌರವದ ಮೇಲೆ ಕೇಂದ್ರೀಕರಿಸುತ್ತದೆಯಂತೆ.
ಏನಿದು ಸ್ನೇಹ ಮದುವೆ?: SCMP ಪ್ರಕಾರ, ಸ್ನೇಹ ವಿವಾಹವು ಒಂದು ರೀತಿಯ ಸಂಬಂಧವಾಗಿದ್ದು, ಇದರಲ್ಲಿ ಗಂಡ ಮತ್ತು ಹೆಂಡತಿಯಾಗಿ ಪರಸ್ಪರ ಕಾನೂನುಬದ್ಧ ಬದ್ಧತೆಯನ್ನು ಹೊಂದಿರುತ್ತಾರೆ. ಸ್ನೇಹ ವಿವಾಹದಲ್ಲಿ ತಮ್ಮ ಸ್ವಂತ ನಿಯಮಗಳ ಮೇಲೆ ಒಟ್ಟಿಗೆ ವಾಸಿಸಲು ಮತ್ತು ಪರಸ್ಪರ ಸಂಬಂಧಗಳನ್ನು ಹೊಂದಲು ಮುಕ್ತವಾಗಿರುತ್ತಾರೆ. ಸ್ನೇಹ ವಿವಾಹದಲ್ಲಿ ದಂಪತಿಗಳು ಕೃತಕ ಗರ್ಭಧಾರಣೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಪೋಷಕರಾಗಲು ಆಯ್ಕೆ ಮಾಡಿಕೊಳ್ಳಬಹುದಾಗಿಯಂತೆ.
ಸ್ನೇಹ ಮದುವೆ ಏಕೆ?:ಹೊಂದಾಣಿಕೆಯ ರೂಮ್‌ಮೇಟ್ ಇಲ್ಲವೇ ಲೀವ್ ಇನ್ ರಿಲೇಶನ್ಶಿಪ್ ಅನ್ನು ಇದು ಹೋಲುತ್ತದೆ ಎಂದು ವಿವರಿಸಲಾಗಿದೆ. SCMP ಯಿಂದ ಸಂದರ್ಶಿಸಿದ ವ್ಯಕ್ತಿಗಳು ವ್ಯಕ್ತಪಡಿಸಿದಂತೆ, ಸ್ನೇಹ ವಿವಾಹಗಳಲ್ಲಿ ಭಾಗವಹಿಸುವವರು ಸಾಂಪ್ರದಾಯಿಕ ಪ್ರಣಯ ತೊಡಕುಗಳ ಮೇಲೆ ಒಡನಾಟದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ನಾನು ಯಾರೊಬ್ಬರ ಗೆಳತಿಯಾಗಲು ಸೂಕ್ತವಲ್ಲ, ಆದರೆ ನಾನು ಉತ್ತಮ ಸ್ನೇಹಿತನಾಗಬಹುದು ಎಂಬಂತಹ ಹೇಳಿಕೆಗಳು ಪ್ರಣಯದ ಸಾಂಪ್ರದಾಯಿಕ ಕಲ್ಪನೆಗಳಿಗಿಂತ ಪರಸ್ಪರ ತಿಳಿವಳಿಕೆ ಮತ್ತು ಹೊಂದಾಣಿಕೆ ಮೇಲೆ ಸ್ಥಾಪಿಸಲಾದ ಆಳವಾದ ಸಂಪರ್ಕದ ಬಯಕೆಯನ್ನು ಒತ್ತಿ ಹೇಳುತ್ತವೆ.